ಮಂಡ್ಯ, ಫೆ 09: ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯದ ಮಂಡ್ಯ ಜಿಲ್ಲೆಯ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಮುಂದೆ ಬುರ್ಕಾ ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ಅಲ್ಲಾ ಹು ಅಕ್ಬರ್ ಎಂದು ಪ್ರತಿಘೋಷಣೆ ಕೂಗಿದ್ದಳು. ಆ ಮೂಲಕ ಕೇಸರಿಧಾರಿ ವಿದ್ಯಾರ್ಥಿಗಳಿಗೆ ತನ್ನ ಪ್ರತಿರೋಧ ತೋರಿದ್ದಳು.
ಮುಸ್ಕಾನಾ ಎಂಬ ಆ ವಿದ್ಯಾರ್ಥಿನಿಯ ಮನೆಗೆ ಇಂದು ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಭೇಟಿ ನೀಡಿದ್ದಾರೆ. ಈಕೆ ಹಿಂದು ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದಳು.
ಘಟನೆ ಸಂಬ0ಧ ಮುಸ್ಕಾನಾ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದ ಇಮ್ರಾನ್ ಪಾಷಾ, ಮುಸ್ಕಾನಾ ಕುಟುಂಬಕ್ಕೆ ಧೈರ್ಯ ಹೇಳಿ ೧ ಲಕ್ಷ ರೂ. ಮೊತ್ತದ ಚೆಕ್ ವಿತರಣೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಕಾನೂನಾತ್ಮಕವಾಗಿ ಯಾವುದೇ ಕ್ರಮ ತೆಗೆದುಕೊಂಡರೂ ನಿಮ್ಮ ಜೊತೆ ಇರುತ್ತೇನೆ. ಯಾರಾದರೂ ತೊಂದರೆ ಕೊಟ್ಟರೆ ಕೂಡಲೆ ಪೊಲೀಸರಿಗೆ ದೂರು ನೀಡಲು ಹೇಳಿದ್ದೇನೆ ಎಂದೂ ಅವರು ತಿಳಿಸಿದ್ದಾರೆ.
Varthajala Daily, Bengaluru
0 Comments