ಮು0ಬೈ, ಫೆಬ್ರವರಿ 05: ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ ಲತಾಮಂಗೇಶ್ಕರ್ ಅವರು ಕಳೆದ ತಿಂಗಳಿನಿ0ದ ಕೋವಿಡ್-೧೯ ಸೋಂಕಿನಿ0ದ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈಗ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
92 ವರ್ಷದ ಹಿರಿಯ ಗಾಯಕಿಯು ಕೋವಿಡ್-೧೯ ಕಾರಣದಿಂದಾಗಿ ಕಳೆದ ತಿಂಗಳಿನಿ0ದ ದಕ್ಷಿಣ ಮುಂಬೈನ ಬ್ರಾಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಿಂದಾಗಿ ಇಂದು ಆಕೆಯನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿದ್ದರೂ ಸಹ, ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಲತಾಮಂಗೇಶ್ಕರ್ಗೆ ಚಿಕಿತ್ಸೆ ನೀಡುತ್ತಿರುವ ಡಾ.ಪ್ರತಿತ್ ಸಮಧಾನಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
Varthajala Daily, Bengaluru
Contact for advertisements 9448119247
0 Comments