ರಾಮಕೃಷ್ಣ ಆಶ್ರಮ ಸಾಧು ನಿವಾಸ ಹಾಗೂ ಅನ್ನಪೂರ್ಣ ಊಟದ ಹಾಲಿಗೆ ಸರಕಾರದ 1 ಕೋಟಿ ಅನುದಾನ ಬಿಡುಗಡೆ
ಮಧುಗಿರಿ : ಪುರುವಾರ ಹೋಬಳಿ ತಗ್ಗಿಹಳ್ಳಿ ಶ್ರೀ ರಾಮಕೃಷ್ಣ ಆಶ್ರಮ ದಲ್ಲಿ ಸಾಧು ನಿವಾಸ ಹಾಗೂ ಅನ್ನಪೂರ್ಣ ಊಟದ ಹಾಲು ಶಂಕುಸ್ಥಾಪನೆ ನೆರವೇರಿಸಲಾಯಿತು.
ರಾಜ್ಯ ಸರ್ಕಾರ ಶ್ರೀ ರಾಮಕೃಷ್ಣ ಆಶ್ರಮಕ್ಕೆ 1ಕೋಟಿ ಹಣವನ್ನು ಅಭಿವೃದ್ಧಿ ಕಾಮಗಾರಿ ಹೆಚ್ಚುವರಿ ಕಟ್ಟಡವನ್ನು ಕಟ್ಟಲು ಸಾಧು ನಿವಾಸ ಹಾಗೂ 250 ಆಸನ ಉಳ್ಳ ಊಟದ ಹಾಲು ನಿರ್ಮಿಸಲು 3 ಅಂತಸ್ತಿನ ಕಟ್ಟಡವನ್ನು ಕಟ್ಟಲು ಮುಂಗಡವಾಗಿ 50 ಲಕ್ಷ ರೂ ಬಿಡುಗಡೆಯಾಗಿದೆ. ಈ ಅನುದಾನ ಬರಲು ಈ ಹಿಂದೆ ಉಪಮುಖ್ಯಮಂತ್ರಿಗಳಾದ ಡಾ: ಜಿ ಪರಮೇಶ್ವರ್ ಸರ್ಕಾರಕ್ಕೆ ಮನವಿ ಸಲ್ಲಿಸಿ ನಮ್ಮ ಆಶ್ರಮಕ್ಕೆ ಅನುದಾನಕ್ಕೆ ಕೋರಿಕೆ ಸಲ್ಲಿಸಿರುವ ಕಾರಣ ಈ ಹಣ ಬಿಡುಗಡೆ ಯಾಗಿದೆ 2 ಕಂತುಗಳಲ್ಲಿ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಯಾಗಲಿದೆ ಎಂದು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ರಮಾನಂದರು ತಿಳಿಸಿದರು
ಈ ಸಂದರ್ಭದಲ್ಲಿ ಗಣಪತಿ ಹೋಮ. ವಾಸ್ತು ಹೋಮ. ಸ್ಥಳ ಶುದ್ಧೀಕರಣವನ್ನು ನೆರವೇರಿಸಲಾಯಿತು ಕಟ್ಟಡದ ಶಂಕು ಸ್ಥಾಪನೆಯನ್ನು ಬೆಂಗಳೂರು ಅಲಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ತತ್ವ ರೂಪರಿ ನಂದ ಮಹಾರಾಜ ರವರು ಶಂಕುಸ್ಥಾಪನೆ ನೆರವೇರಿಸಿದರು. ಸಿವಿಲ್ ಇಂಜಿನಿಯರ್ ರಘುನಾಥ್.ಫ್ಯಾಬ್ರಿಕೇಶನ್ ವರ್ಕ್ ಶ್ರೀನಿವಾಸ್. ವಾಸ್ತುಶಿಲ್ಪಿ ಕುಲದೀಪ್. ಅರ್ಚಕರು ಸತೀಶ್. ಹಾಗೂ ಆಶ್ರಮ ಟ್ರಸ್ಟಿಗಳು. ಭಕ್ತಾದಿಗಳು ಹಾಜರಿದ್ದರು.
0 Comments