ವಿಜಯನಗರ, ಫೆ 18: ಜಿಲ್ಲೆಯ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷ ನುಡಿಯುವಂತೆ ಈ ವರ್ಷವೂ ಗೊರವಪ್ಪ ಸ್ಪೋಟಕ ಕಾರ್ಣಿಕ ನುಡಿಯನ್ನು ನುಡಿದಿದ್ದಾರೆ. ಈ ವರ್ಷ ಮಳೆ ಬೆಳೆ ಸಂಪಾದೀತಲೇ ಪರಾಕ್ ಎಂಬುದಾಗಿ ಭಿವಿಷ್ಯವಾಣಿ ನುಡಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಕಾರ್ಣಿಕೋತ್ವ 2022 ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿವರ್ಷದಂತೆ ಮೈಲಾರದ ಡೆಂಕನಮರಡಿಯ ಗೊರವಪ್ಪ ರಾಮಜ್ಜ ಅವರು, 15 ಅಡಿ ಬಿಲ್ಲನ್ನೇರಿ ಮಳೆ ಬಳೆ ಸಂಪಾದೀತಲೇ ಪರಾಕ್ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಈ ಬಗ್ಗೆ ಭಕ್ತರು ವಿಶ್ಲೇಷಣೆ ಮಾಡಿದ್ದು, ಈ ವರ್ಷ ಉತ್ತಮವಾಗಿ ಮಳೆ ಬೆಳೆ ಸಂಮೃದ್ಧಿಯಾಗಿ ಬರಲಿದೆ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ಭಕ್ತರು ಗೊರವಯ್ಯನ ಭವಿಷ್ಯ ನುಡಿ ಕೇಳಿ ಸಂಭ್ರಮಿಸಿದರು.
ಅ0ದಹಾಗೇ ಶತಮಾನಗಳ ಇತಿಹಾಸವನ್ನು ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ ನುಡಿಗೆ ಇದೆ. ಡೆಂಕಣಮರಡಿ ಪುಣ್ಯಭೂಮಿಯಲ್ಲಿ ನಡೆಯುವಂತ ಭಂಡಾರ ಒಡೆಯನ ಭವಿಷ್ಯವಾಣಿಯಲ್ಲಿ ದೇಶದ ಭವಿಷ್ಯವೇ ಅಡಗಿದೆ ಎಂದು ಭಕ್ತರು ನಂಬಿದ್ದಾರೆ. ಈ ಭವಿಷ್ಯವಾಣಿಯನ್ನು ಈಗ ನುಡಿದಿದ್ದು, ಭಕ್ತರಲ್ಲಿ ಸಂತೋಷ-ಹರ್ಷ ಮನೆ ಮಾಡಿದೆ.
Varthajala daily, Bengaluru
0 Comments