ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ ಬಳ್ಳಾರಿ-ವಿಜಯನಗರ ಜಿಲ್ಲೆಗಳಿಗೆ ಸಂಬ0ಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಡಾ|| ಸೈಯದ್ ನಾಸೀರ್ ಹುಸೇನ್
ಸಕಾರಾತ್ಮಕವಾಗಿ ಸ್ಪಂದಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ ಬೊಮ್ಮಾಯಿ
ಬಳ್ಳಾರಿ ಫೆ 08. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು ರಾಜ್ಯಕ್ಕೆ ಸಂಬ0ಧಿಸಿದ ಕೇಂದ್ರ ಸರ್ಕಾರದಲ್ಲಿ ಬಾಕಿಯಿರುವ ಪ್ರಮುಖ ವಿಷಯಗಳ ಕುರಿತಂತೆ ಚರ್ಚಿಸಲು ಕರ್ನಾಟಕ ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಮತ್ತು ರಾಜ್ಯವನ್ನು ಪ್ರತಿನಿಧಿಸುತ್ತಿರುವ ಮಾನ್ಯ ಕೇಂದ್ರ ರಾಜ್ಯ ಸಚಿವರನ್ನು ಒಳಗೊಂಡ0ತೆ ನವ ದೆಹಲಿಯ ತಾಜ್ ಮಾನ್ ಸಿಂಗ್ ಹೋಟೆಲ್ ರಲ್ಲಿ ಸಭೆಯನ್ನು ಏರ್ಪಡಿಸಿದ್ದರು.ಈ ಸಂದರ್ಭದಲ್ಲಿ ನಾನು ಬಳ್ಳಾರಿ-ವಿಜಯನಗರ ಜಿಲ್ಲೆಗಳಿಗೆ ಸಂಬ0ಧಿಸಿದ ಹಲವಾರು ವಿಷಯಗಳು/ ಸಮಸ್ಯೆಗಳ ಬಗ್ಗೆ ಡಾ|| ಸೈಯದ್ ನಾಸೀರ್ ಹುಸೇನ್ ರಾಜ್ಯಸಭಾ ಸದಸ್ಯರು ಮಾನ್ಯಮುಖ್ಯಮಂತ್ರಿಗಳಿಗೆ ಪ್ರಸ್ತಾಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಓಊ-63 ರಸ್ತೆ ನಿರ್ಮಾಣ ವಿಳಂಬದ ಕುರಿತು:ಮೊದಲನೆಯದಾಗಿ ರಾಷ್ಟ್ರೀಯ ಹೆದ್ದಾರಿ ಓಊ-63 (ಹೊಸಪೇಟೆ-ಬಳ್ಳಾರಿ-ಆಂದ್ರ ಪ್ರದೇಶ ಗಡಿ) 2016 ನೇ ಸಾಲಿನಲ್ಲಿ ಗ್ಯಾಮನ್ ಇಂಡಿಯಾ ಲಿಮಿಟೆಡ್ ರವರಿಗೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ವಹಿಸಿರುತ್ತಾರೆ. 2019 ನೇ ಸಾಲಿನಲ್ಲಿ ಮುಕ್ತಯವಾಗಬೇಕಾದ ರಸ್ತೆ ಕಾಮಗಾರಿ ಇದುವರೆಗೂ ಅದು ಆಗಿರುವುದಿಲ್ಲ. ಈ ನಿಟ್ಟಿನಲ್ಲಿ ಸದರಿ ರಸ್ತೆ ಕಾಮಗಾರಿಯನ್ನು ಆದಷ್ಟುಬೇಗ ಮುಕ್ತಾಯಗೊಳಿಸಲು ಗ್ಯಾಮನ್ ಇಂಡಿಯಾ ಕಂಪನಿ ಲಿಮಿಟೆಟ್ ರವರಿಗೆ ವಹಿಸಿದ ಟೆಂಡರ್ ನ್ನು ಟರ್ಮಿನೇಟ್ ಮಾಡುವುದು ಅಥವಾ ಕಾಮಗಾರಿಯನ್ನು ಚುರುಕುಗೊಳಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ವಿಷಯವಾಗಿ ಮಾನ್ಯ ಮುಖ್ಯಮಂತ್ರಿಗಳು ಸ್ಪಂದಿಸಿ ನಾನು ಸಹ ರಾಷ್ಟ್ರೀಯ ಹೆದ್ದಾರಿ ಓಊ-63 ರಲ್ಲಿ ಹಲವಾರು ಬಾರಿ ಪ್ರಯಾಣಿಸಿದ್ದೇನೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ರೈತರ ಜಮೀನನ್ನು ಭೂ ಸ್ವಾಧಿನ ಮಾಡಿಕೊಂಡಿರುವ ಕುರಿತು: ಬಳ್ಳಾರಿ ಜಿಲ್ಲೆಯಲ್ಲಿ 2006 ನೇ ಸಾಲಿನಿಂದ ಇಲ್ಲಿವರೆಗೆ ಜೆ.ಎಸ್.ಡಬ್ಲೂö್ಯ ಲಿಮಿಟೆಡ್, ಅರ್ಸಿಲ್ಲಾರ್ ಮಿತ್ತಲ್ ಪ್ರೈ.ಲಿ, ಉತ್ತಮ ಗಾಲ್ವಾ ಫೆರ್ರಸ್ ಲಿ., ಬಿಎಂಎ0 ಇಸ್ಪಾತ್-1,2 ಹಂತ ಹಾಗೂ ಇನ್ನೀತರೆ ಕೈಗಾರಿಕೋದ್ಯಮಿಗಳು ರೈತರ ಸಾವಿರಾರು ಎಕರೆ ಜಮೀನುಗಳನ್ನು ಭೂ ಸ್ವಾಧೀನದ ಮೂಲಕ ವಶಪಡಿಸಿಕೊಂಡಿರುತ್ತಾರೆ. ಆದರೆ ಇದುವರೆಗೂ ಹಲವಾರು ರೈತರಿಗೆ ಭೂ ಪರಿಹಾರ ಸಿಕ್ಕಿರುವುದಿಲ್ಲ ಹಾಗೂ ಭೂ ಸ್ವಾಧೀನ ಪಡೆದ ಜಮೀನುಗಳಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಿರುವುದಿಲ್ಲ. ಇದರ ಜೊತೆಗೆ ಪವರ್ ಪ್ರಾಜೆಕ್ಟ್ಸ್ ಗಳು ಇದ್ದು ನೀರನ್ನು ಸಹ ಕೈಗಾರಿಕೋದ್ಯಮಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಈ ಕುರಿತು ಕೈಗಾರಿಕೆಗಳನ್ನು ಆದಷ್ಟು ಬೇಗ ಸ್ಥಾಪಿಸಲು ಸರ್ಕಾರವು ಸದರಿ ಕೈಗಾರಿಕೋದ್ಯಮಿಗಳಿಗೆ ಸೂಚನೆ ನೀಡುವುದು ಇಲ್ಲವಾದಲ್ಲಿ ರೈತರಿಗೆ ಅವರ ಜಮೀನುಗಳನ್ನು ಹಿಂದಿರುಗಿಸುವ ಬಗ್ಗೆ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳಲ್ಲಿ ಪ್ರಸ್ತಾಪಿಸಿದ್ದಾರೆ.
ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಕುರಿತು:ಬಳ್ಳಾರಿ ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ಇದ್ದು, ಈ ಸಂಸ್ಥೆಗಳಲ್ಲಿ ಬಹುತೇಕ ಎಲ್ಲಾ ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ಬಳ್ಳಾರಿ ಜಿಲ್ಲೆಯ ಸ್ಥಳೀಯರಿಗೆ/ ಯುವಕರಿಗೆ ಉದ್ಯೋಗಾವಕಾಶ ನೀಡುತ್ತಿಲ್ಲ. ಉತ್ತರ ಭಾರತ ಮತ್ತು ಇತರೆ ರಾಜ್ಯಗಳಿಂದ ಜನರನ್ನು ಕರೆಯಿಸಿ ಉದ್ಯೋಗ ನೀಡುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಯುವಕರು ಬೆಂಗಳೂರು ಮತ್ತು ಇತರೆ ರಾಜ್ಯಗಳಿಗೆ ತೆರಳಿ ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳು ಗಮನದಲ್ಲಿ ಇಟ್ಟುಕೊಂಡು ಬಳ್ಳಾರಿ ಜಿಲ್ಲೆಯಲ್ಲಿನ ಕೈಗಾರಿಕೆಗಳು ಮತ್ತು ಕಾರ್ಖಾನೆಗಳಲ್ಲಿ ಎ & ಬಿ ದರ್ಜೆಯ ಅಧಿಕಾರಿಗಳಿಗೆ - 50 % ರಷ್ಟು ಮತ್ತು ಸಿ & ಡಿ ದರ್ಜೆ ನೌಕರರಿಗೆ - 70 % ರಷ್ಟು ಮೀಸಲಾತಿಯನ್ನು ಸ್ಥಳೀಯರಿಗೆ ಕಲ್ಪಿಸಿ ಆದ್ಯತೆಯ ಮೇರೆಗೆ ಉದ್ಯೋಗಾವಕಾಶ ನೀಡಲು ಕೋರಿದ್ದಾರೆ.
ಬಳ್ಳಾರಿ ವಿಮಾನ ನಿಲ್ದಾಣ ಪ್ರಾರಂಭಿಸುವ ಕುರಿತು:ಬಳ್ಳಾರಿಯ ವಿಮಾನ ನಿಲ್ದಾಣಕ್ಕಾಗಿ ರೈತರಿಂದ ಜಮೀನುಗಳನ್ನು ಪಡೆದು 10 ವರ್ಷಗಳಾದರೂ ಇದುವರೆಗೆ ವಿಮಾನ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಿರುವುದಿಲ್ಲ. ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ವಿಮಾನ ನಿಲ್ದಾಣ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸುವುದು ಇಲ್ಲವಾದಲ್ಲಿ ರೈತರಿಗೆ ಅವರ ಜಮೀನುಗಳನ್ನು ಹಿಂದಿರುಗಿಸುವ ಬಗ್ಗೆ ಕ್ರಮ ಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಪ್ರಸ್ತಾಪಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿAPPAREL PARK ನ್ನು ಸ್ಥಾಪಿಸುವ ಕುರಿತು:ಡಿ.ಕೆ ಶಿವಕುಮಾರ್ ರವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಬಳ್ಳಾರಿಯಲ್ಲಿ ರೂ. 5000 ಕೋಟಿಗಳ ವೆಚ್ಚದಲ್ಲಿ APPAREL PARKನ್ನು ಸ್ಥಾಪಿಸಲು ಸರ್ಕಾರದಿಂದ ಯೋಜನೆಯನ್ನು ರೂಪಿಸಿದ್ದರು. ಬಳ್ಳಾರಿಯಲ್ಲಿ ಸುಮಾರು 1.50 ಲಕ್ಷದಷ್ಟು ಜನರು ಜೀನ್ಸ್ ತಯಾರಿಕೆಯಲ್ಲಿ ತೊಡಗಿದ್ದು,APPAREL PARKನ್ನು ಸ್ಥಾಪಿಸಿದರೆ ಸಾವಿರಾರು ಕುಟುಂಬಗಳಿಗೆ ಮತ್ತು ಜೀನ್ಸ್ ಉತ್ಪಾದನಾ ಘಟಕಗಳಿಗೆ ನೆರವಾಗುತ್ತದೆ ಎಂಬ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಪ್ರಸ್ತಾಪಿಸಿದ್ದಾರೆ.ಸನ್ಮಾನ್ಯ ಮುಖ್ಯಮಂತ್ರಿಗಳು ಮೇಲ್ಕಂಡ ವಿಷಯಗಳ ಕುರಿತಂತೆ ಸಕಾರಾತ್ಮಕವಾಗಿ ಸ್ಪಂದಿಸಿ ಈ ವಿಷಯಗಳನ್ನು ಕೇಂದ್ರ ಸರ್ಕಾರದೊಂದಿಗೆ ಪ್ರಸ್ತಾಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ನನಗೆ ಭರವಸೆ ನೀಡಿದ್ದಾರೆ ಎಂದು ಡಾ|| ಸೈಯದ್ ನಾಸೀರ್ ಹುಸೇನ್ ರಾಜ್ಯಸಭಾ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments