Ticker

6/recent/ticker-posts

Ad Code

Responsive Advertisement

ಮಧುಗಿರಿ: ಅಂಗಡಿಗಳಿಗೆ ಭೇಟಿ ನೀಡಿ ಸ್ಥಳದಲ್ಲೇಪರವಾನಿಗೆ ನವೀಕರಣ

 ಮಧುಗಿರಿ:- ಪುರಸಭೆ ವ್ಯಾಪ್ತಿಯಲ್ಲಿ ಕಂದಾಯ, ಟ್ರೇಡ್ ಲೈಸನ್ಸ್ ಮತ್ತು ಬೀದಿಬದಿ ವ್ಯಾಪಾರಿಗಳು ಪರವಾನಿಗೆ ಪಡೆಯದೆ ವ್ಯಾಪಾರ ಮಾಡುತ್ತಿರುವುದರಿಂದ ಪುರಸಭೆ ಮುಖ್ಯಾಧಿಕಾರಿಗಳು ಮತ್ತು ತಂಡ ಪಟ್ಟಣದ ಪ್ರತಿ ಯೊಂದು ಅಂಗಡಿಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಪರವಾನಿಗೆ ನವೀಕರಣ ಮಾಡಿದ ಘಟನೆ ಮಂಗಳವಾರ ನಡೆಯಿತು. 


ಕರೋನಾ ಕಾರಣದಿಂದಾಗಿ ಟ್ರೇಡ್ ಲೈಸೆನ್ಸ್ ನವೀಕರಣವನ್ನು ಕೆಲವು ಅಂಗಡಿಗಳ ಮಾಲೀಕರು ಮಾಡಿಸಿಕೊಂಡಿರದ ಕಾರಣ ಸ್ಥಳದಲ್ಲೇ ಪರಿಶೀಲನೆ ನಡೆಸಿ ಪರವಾನಿಗೆ ಆದೇಶವನ್ನು ಮುಖ್ಯಾಧಿಕಾರಿ  ನೀಡಿದರು. 

ದಿನಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಸ್ಥಳದಲ್ಲೇ ಕ್ರಮ ಕೈಗೊಂಡು ದಂಡವನ್ನು ಹಾಕಲಾಯಿತು. 

ಪಟ್ಟಣದಲ್ಲಿರುವ ಬಹುತೇಕ ಮೊಬೈಲ್ ಅಂಗಡಿಯವರು ಟ್ರೇಡ್ ಲೈಸೆನ್ಸ್ ಪಡೆಯುವಂತೆ ಸಾಕಷ್ಟು ಬಾರಿ ಸೂಚನೆ ನೀಡಿದರೂ ಲೈಸೆನ್ಸ್ ಪಡೆದಿಲ್ಲ ಅಂದಾಗ ಮುಖ್ಯಾಧಿಕಾರಿಗಳು ಅಂತಹ ಅಂಗಡಿಗಳನ್ನು ಮುಚ್ಚಿಸಿ ಎಂದರು. ರಿಯಲ್ ಮಿ ,ಸಂಗೀತ ಮೊಬೈಲ್ಸ್ ಮಾಲಿಕರು ಗಳಿಗೆ ನೋಟಿಸ್ ನೀಡಿದೆ ಅವರು ಟ್ರೇಡ್ ಲೈಸೆನ್ಸ್ ಪಡೆದಿಲ್ಲ ಎಂದು ತಿಳಿಸಿದರು. 

ಈ ವೇಳೆ ಕಂದಾಯ ತನಿಖಾಧಿಕಾರಿಗಳು, ಆರೋಗ್ಯ ಶಾಖೆಯವರು ಮತ್ತು ಸಿಬ್ಬಂದಿ ಇದ್ದರು.

 ಇದೇ ವೇಳೆ ಪಟ್ಟಣದ ರಾಮಕೃಷ್ಣ ಆಶ್ರಮದ ಸಮೀಪ ಪುರಸಭೆ ಅಧಿಕಾರಿಗಳು ತೆರಳಿದಾಗ ನಿರ್ಮಲಾನಂದ ಸ್ವಾಮೀಜಿ ನಮ್ಮ ಆಶ್ರಮ ಮುಂಭಾಗದಲ್ಲಿ ಚರಂಡಿ ಕಾಮಗಾರಿ ಮಾಡಿಲ್ಲ ಮತ್ತು ಒಳಚರಂಡಿ ಕಾಮಗಾರಿ ಮಾಡುವಾಗ ಸಮರ್ಪಕವಾಗಿ ಮಣ್ಣನ್ನು ಎತ್ತದೆ ಧೂಳು ರಸ್ತೆಗಳಲ್ಲಿ ಮಾಡಿದ್ದಾರೆ ಇದರಿಂದ ನಾಗರಿಕರಿಗೆ ರೋಗ ರುಚಿಗಳು ಹರಡುತ್ತಿದೆ ಇದರ ಬಗ್ಗೆ ಪುರಸಭೆ ಮುಖ್ಯ ಅಧಿಕಾರಿ ಗಳನ್ನು ಕೇಳಿದರೆ ಹೆಲ್ತ್ ಇನ್ಸ್ಪೆಕ್ಟರ್ ಅನ್ನು ಕೇಳಿ ಅವರನ್ನು ಕೇಳಿದರೆ ಇಂಜಿನಿಯರ್ ಅನ್ನು ಕೇಳಿ ಎಂದು ಉತ್ತರಿಸುತ್ತಾರೆ.


 ಅಲ್ಲದೆ ಎಂಜಿಎಂ ಶಾಲಾ  ಮುಂಭಾಗದಲ್ಲಿ ಸಣ್ಣಪುಟ್ಟ ಬೀದಿಬದಿ ವ್ಯಾಪಾರಸ್ಥರು ತರಕಾರಿ ಹಣ್ಣು-ಹಂಪಲು ಮಾರಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದರು ಆದರೆ ಪುರಸಭೆ ಅಧಿಕಾರಿಗಳು ತಿಂಗಳಗಟ್ಟಲೆ ಚರಂಡಿ ಕಾಮಗಾರಿ ಮಾಡುವ ನೆಪದಲ್ಲಿ ವ್ಯಾಪಾರಸ್ಥರಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ನಿರ್ಮಲಾನಂದ ಸ್ವಾಮೀಜಿ ಅಧಿಕಾರಿಗಳ ವಿರುದ್ಧ ಗರಂ ಆದರು.

 ವರದಿ : ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement