Ticker

6/recent/ticker-posts

Ad Code

Responsive Advertisement

ಕಾಡುಗೊಲ್ಲರ ಜೀವನ ಶೈಲಿಯ ಸಾಕ್ಷ್ಯ ಚಿತ್ರ ಬಿಡುಗಡೆ ಸಮಾರಂಭ

ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ(ರಿ)ವತಿಯಿಂದ ಚಾಮುಂಡೇಶ್ವರಿ ಸ್ಟುಡಿಯೋ ಸಭಾಂಗಣದಲ್ಲಿ ಕಾಡುಗೊಲ್ಲರ     ಜೀವನ ಶೈಲಿಯ ಸಾಕ್ಷ್ಯ ಚಿತ್ರ ಬಿಡುಗಡೆ ಸಮಾರಂಭ. ರಾಜ್ಯಮಟ್ಟದ ಕಾಡುಗೊಲ್ಲರ ಸಭೆ , ಡಿ.ವಿ.ಡಿ. ಮತ್ತು ವಿಡಿಯೊ ಪ್ರಥಮ ಪ್ರದರ್ಶನ ಚಾಲನೆಯನ್ನು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಕೇಂದ್ರ ಸಚಿವರಾದ  ನಾರಾಯಣಸ್ವಾಮಿರವರು ಮತ್ತು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ  ರಾಜಣ್ಣರವರು ,ಸಮಾಜದ ಹಿರಿಯ ಮುಖಂಡ  ಡೊಡ್ಡ ನಾಗಯ್ಯರವರು  ರಾಷ್ಟ ಪ್ರಶಸ್ತಿ ವಿಜೇತ ನಿರ್ದೇಶಕ ನಂಜುಂಡೇಗೌಡರವರು ನೇರವೆರಿಸಿದರು.

ಕೇಂದ್ರ ಸಚಿವರಾದ ನಾರಾಯಣಸ್ವಾಮಿರವರು ಮಾತನಾಡಿ ಕಾಡುಗೊಲ್ಲರ ನೋವಿನ ಜೀವನ ಪದ್ದತಿ ಮತ್ತು ಜೀವನಶೈಲಿ ನೂರಾರು ವರ್ಷದ ಇತಿಹಾಸವನ್ನು ಎಲ್ಲರಿಗೂ ತಿಳಿಯಬೇಕು.

ಕಾಡುಗೊಲ್ಲರ ಸಮುದಾಯದಲ್ಲಿ ಸಂಸ್ಕೃತಿ ಸಿರಿತನವಿದೆ ,ಮನುಕುಲಕ್ಕೆ ಸಹಕಾರಿಯಾಗಿ ಬಾಳುವೆ ಮಾಡುವರು .

75ವರ್ಷಗಳಿಂದ ಸರ್ಕಾರಗಳು ಯಾವುದೇ ಸೌಲಭ್ಯ ನೀಡದೇ ಕಾಡುಗೊಲ್ಲರನ್ನ ಕಡೆಗಣಿಸಲಾಗಿದೆ .

ಸಮಾಜದಲ್ಲಿ ಬದಲಾವಣೆಗೆ ಚರ್ಚೆಯಾಗಬೇಕು . ಕಾಡುಗೊಲ್ಲರು ಬಗ್ಗೆ 1807ಇಸವಿ ಬುಕನ್ ರವರ ಬುಡಕಟ್ಟು ,ಅಲೆಮಾರಿ ಸಮುದಾಯ ಎಂದು ವರದಿ ನೀಡಿದ್ದಾರೆ .

ರಾಜಕೀಯ ತೀರ್ಮಾನ ಮಾಡಲು ಸಾಧ್ಯವಿಲ್ಲವೆಂದು ಕಾಡುಗೊಲ್ಲರನ್ನ ಕಡೆಗಣಿಸಿದರು .

ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ .

ಮೈಸೂರು ವಿಶ್ವವಿದ್ಯಾಲಯದಿಂದ ಕಾಡುಗೊಲ್ಲ ಸಮಾಜದ ಇತಿಹಾಸವನ್ನು ಸಂಗ್ರಹಿಸಿ ಹಾಗೂ ಅನ್ನಪೂರ್ಣರವರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ .

ಕಾಡುಗೊಲ್ಲರು ವಾಸಿಸುವ ಪ್ರದೇಶವನ್ನು ಕಂದಾಯ ಗ್ರಾಮಗಳಾಗಿ ಮಾಡಿ ಹಕ್ಕು ಪತ್ರ ನೀಡಬೇಕು.

ಕಾಡುಗೊಲ್ಲರ ಅಭಿವೃದ್ದಿಗಾಗಿ 15ಎಕರೆ ಜಮೀನು ನೀಡಬೇಕು ಎಂದು ರಾಜ್ಯ  ಸರ್ಕಾರಕ್ಕೆ ಮನವಿ ಮಾಡಲಾಗಿದೆ .

ಕಾಡುಗೊಲ್ಲರ ಜೀವನಪದ್ದತಿ ,ಆರ್ಥಿಕ ಸ್ಥಿತಿ ,ಜೀವನ ಶೈಲಿ ರಾಷ್ಟಕ್ಕೆ ತಿಳಿಯಬೇಕು .

75ವರ್ಷಗಳಿಂದ ಕಾಡುಗೊಲ್ಲರು ಶಿಕ್ಷಣ ,ಉದ್ಯೋಗ ,ಸೌವಲತ್ತುಗಳಿಂದ ವಂಚಿತರಾಗಿದ್ದಾರೆ .

ಕಾಡುಗೊಲ್ಲ ಸಮುದಾಯಕ್ಕೆ ಎಸ್.ಟಿ.ಮೀಸಲಾತಿಗಾಗಿ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ರವರು ಕೇಂದ್ರ ಸರ್ಕಾರದ ಜೊತೆಯಲ್ಲಿ ಚರ್ಚಿಸಿ ಕಾಡುಗೊಲ್ಲರಿಗೆ ಎಸ್.ಟಿ.ಮೀಸಲಾಗಿ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

*ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣರವರು* ಮಾತನಾಡಿ ಕಾಡುಗೊಲ್ಲ ಬುಡಕಟ್ಟು ಸಮುದಾಯ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ .

ಕಾಡುಗೊಲ್ಲ ಸಮುದಾಯವನ್ನು ಎಸ್.ಟಿ.ಸೇರಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಈ ಜನಾಂಗ ವಾಸಿಸುವ ಪ್ರದೇಶಗಳು ಕಂದಾಯ ಗ್ರಾಮಗಳಾಗಿ ಮಾಡಬೇಕು ,ಮೂಲಭೂತ ಸಮಸ್ಯೆಗಳು ಮತ್ತು ಹಕ್ಕು ಪತ್ರ ನೀಡಬೇಕು .

ಬುಡಕಟ್ಟು ಜನಾಂಗ ತಮ್ಮದೇ ಅಚರಣೆ ,ಸಂಸ್ಕೃತಿ ,ಸಂಪ್ರಾದಯ ಉಳಿಸಿಕೊಂಡು ಕಾಡಿನ ಅಂಚಿನಲ್ಲಿ ಹಟ್ಟಿಗಳನ್ನು ಕಟ್ಟಿಕೊಂಡು ವಾಸ ಮಾಡಲಾಗುತ್ತಿದೆ.

ಹಿಂದೂ ಸಂಪ್ರಾದಯ ಹೊರತಾಗಿ ಬುಡಕಟ್ಟು ಸಂಪ್ರಾದಯ ಪಾಲಿಸಲಾಗುತ್ತಿದೆ.

ಕಾಡುಗೊಲ್ಲ ಸಮುದಾಯಕ್ಕೆ ಶಿಕ್ಷಣ ವ್ಯವಸ್ಥೆ ,ಹಾಸ್ಟಲ್ ವ್ಯವಸ್ಥೆ ಉದ್ಯೋಗದಲ್ಲಿ ಅವಕಾಶ ಸಿಗುವಂತೆ ಮಾಡಲು.

ಕರ್ನಾಟಕ ರಾಜ್ಯ ಕಾಡುಗೊಲ್ಲ ಸಮುದಾಯದ ಜೀವನ ವಾಸ್ತವ ಚಿತ್ರಣ ತೊರಿಸಲು ಸಾಕ್ಷ್ಯ ಚಿತ್ರ ಮಾಡಲಾಗಿದೆ.

ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ  ಕಾಡುಗೊಲ್ಲ ಸಮುದಾಯದ ಪ್ರಾಬಲ್ಯವಿದೆ,ಚಿತ್ರದುರ್ಗ, ತುಮಕೂರು ಪಾವಗಡ,ಶಿರಾ,ಕೂಡ್ಲಗಿ,

ಕೊರಟಗೆರೆ ಜಿಲ್ಲೆಯಲ್ಲಿ ಕಾಡುಗೊಲ್ಲ ಸಮುದಾಯ ಆರ್ಥಿಕವಾಗಿ ಹಿಂದುಳಿದವರು ಅವರನ್ನ ಸಮಾಜದ ಮುಖ್ಯ ವಾಹಿನಿ ತರಬೇಕು 

ರಾಜ್ಯದಲ್ಲಿರುವ ಕಾಡುಗೊಲ್ಲ ಸಮುದಾಯ 7ಲಕ್ಷ ಜನಸಂಖ್ಯೆ ಇದೆ .

ಕಾಡುಗೊಲ್ಲ ಸಮುದಾಯದವನ್ನು ಎಸ್.ಟಿ.ಮೀಸಲಾತಿ ಸೇರಿಸಬೇಕು ಎಂದು ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿರವರಿಗೆ ಮತ್ತು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರಿಗೆ,ಕೇಂದ್ರ ನಾರಾಯಣಸ್ವಾಮಿರವರಿಗೆ ಮನವಿ ಸಲ್ಲಿಸಲಾಗುವುದು .

ಕಾಡುಗೊಲ್ಲ ಸಮುದಾಯದ ಜೀವನಶೈಲಿ ,ಸಂಪ್ರಾದಯದ ಬಗ್ಗೆ ಬೆಳಕು ಚಲ್ಲಲು ಖ್ಯಾತ ನಿರ್ದೇಶಕ ನಂಜುಂಡೇಗೌಡರು ನಾವು ಕಾಡುಗೊಲ್ಲರು ಎಂಬ ಸಾಕ್ಷ್ಯ ಚಿತ್ರ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.

*ಡೊಡ್ಡನಾಗಯ್ಯರವರು ಮಾತನಾಡಿ* ಕಾಡುಗೊಲ್ಲರು ಜನಜೀವನ,ಸ್ಥಿತಿಗತಿಗಳ ಬಗ್ಗೆ ಸಮಾಜ ಪರಿಚಯಿಸಬೇಕು ಎಂದು ಸಾಕ್ಷ್ಯ ಚಿತ್ರ ಮಾಡಲಾಗಿದೆ. ಮಾದಿಗ ,ಕಾಡುಗೊಲ್ಲರ ಸಂಸ್ಕೃತಿ ಸಂಪ್ರಾದಯ ಒಂದೇ ರೀತಿಯಲ್ಲಿ ಇದೆ .

ಎಸ್.ಟಿ.ಸಮುದಾಯದಕ್ಕೆ ಕಾಡುಗೊಲ್ಲರ ಸಮುದಾಯದವನ್ನು ಸೇರ್ಪಡೆ ಮಾಡುವ ತನಕ ಅವಿರತ ಹೋರಾಟ ಮಾಡುತ್ತೇವೆ.

ಕಾಡುಗೊಲ್ಲರ ಜೀವನಶೈಲಿ ಬಗ್ಗೆ ಸಾಕ್ಷ್ಯ ಚಿತ್ರವನ್ನು ನಂಜುಂಡೇಗೌಡರು ನಿರ್ದೇಶನ ಮಾಡಿ ಉತ್ತಮವಾಗಿ ರೂಪಿಸಿದ್ದಾರೆ ಎಂದು ಹೇಳಿದರು.

ಕಾಡುಗೊಲ್ಲ ಸಮುದಾಯದ ಮಾಜಿ ಶಾಸಕರಾದ ಉಮಾಪತಿ ಸಮಾಜದ ಮುಖಂಡರಾದ ಮಹಲಿಂಗಪ್ಪ ,ದೇವರಾಜು ,ಬ ಸವರಾಜ್ ,ತಿಮ್ಮಯ್ಯ ,ಗುರುಲಿಂಗಯ್ಯ,ಸಿದ್ದೇಶ್,ಮುರುಳಿ,ಡೊಡ್ಡಪ್ಪ, ವಿಶ್ವನಾಥ,ರಂಗಸ್ವಾಮಿ,ಪೂ ಜಾರಪ್ಪರವರು ಪಾಲ್ಗೊಂಡಿದ್ದರು

Post a Comment

0 Comments

Ad Code

Responsive Advertisement