Ticker

6/recent/ticker-posts

Ad Code

Responsive Advertisement

ಸೂರ್ಯ ಜಯಂತಿ ಪ್ರಯುಕ್ತ ಸೂರ್ಯನಿಗೆ ನಮನ

ಭಾಸ್ಕರನೆ ಸೂರ್ಯನೆ ತೇಜೋಮಯನೆ

ಅಸಮಾನವಾಗಿ ಹೊಳೆವ ರವಿಯು ನೀನೆ

ಹೊಸ ಹುರುಪಿನ ಹೊಸ ದಿನ ಹೊತ್ತು ತರುವನೆ

ನಸುನಗುತ ನಮಗೆ ಶಕ್ತಿ ನೀಡುವವನೆ



ಕತ್ತಲ ತಮವೆಲ್ಲ ಕಳೆವ ಜ್ಯೋತಿರ್ಮಯನೆ

ಮುತ್ತಿದ ಆಲಸ್ಯ ಕಳೆವ ಚೈತನ್ಯನೆ

ಸುತ್ತುವ ಭೂಮಿಗೆ ಬೆಳಕು ಜೀವ ಶಕ್ತಿ ಕೊಡುವನೆ

ಉತ್ತಮೋತ್ತಮನೆ ಪ್ರತ್ಯಕ್ಷ ದೇವನೆ


ಕಿರಣಗಳ ಹೊದಿಕೆ ಹೊತ್ತು ಮೂಡಣದಿ ಮೂಡುತ

ಕುರುಣಾಮಯಿ ಬಂಗಾರವ ಬಾನಿಗೆ ಮೆತ್ತುತ

ಅರುಣನೆ ಸಪ್ತಾಶ್ವ ರಥದಲ್ಲಿ ಮಿನುಗುತ

ತರುಲತೆಗಳ ಮುಟ್ಟಿ ಆನಂದ ಹರಡುತ


ಮಲಗಿದ್ದ ಜೀವಿಗಳ ಮೈದಡವಿ ಎಬ್ಬಿಸುತ

ಚಿಲಿಪಿಲಿ ಹಕ್ಕಿಯ ನಾದ ಆಕಾಶದಿ ತುಂಬುತ

ಜಲವನು ಹೀರುತ ಮೋಡಗಳನು ನೀ ಕಟ್ಟುತ

ನೀಲ ಆಗಸದಲ್ಲಿ ವಿರಾಜಮಾನನಾಗುತ


ನಮಿಸುವೆ ನಮಿಸುವೆ ಓ ಸೂರ್ಯದೇವನೆ

ಅಮಿತ ಆನಂದ ಕೊಡುವ ದಿವ್ಯಾತ್ಮನೆ

ಕಾಮಿತಾರ್ಥವ ನೀವ ಸೂರ್ಯನಾರಾಯಣನೆ

ಸ್ವಾಮಿ ಸಿರಿಹರಿಯ ತೋರಿಸು ದೇವನೆ


ಶ್ರೀ ಕೃಷ್ಣಾರ್ಪಣಮಸ್ತು

-ರೂಪಶ್ರೀ ಶಶಿಕಾಂತ್

****

ಇಂದು ಸೂರ್ಯ ಭಗವಾನ್ ಜಯಂತಿ ಪ್ರಯುಕ್ತ ಈ ಕವನ.

Post a Comment

0 Comments

Ad Code

Responsive Advertisement