Ticker

6/recent/ticker-posts

Ad Code

Responsive Advertisement

ಅನಧಿಕೃತ ಬ್ಯಾನರ್, ಫ್ಲೆಕ್ಸ್, ಪೋಸ್ಟರ್ಸ್, ಬಂಟಿಂಗ್ಸ್ ಗಳ ತೆರವು

ಬಿಬಿಎಂಪಿ ಎಲ್ಲಾ ವಲಯ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್, ಪೋಸ್ಟರ್ಸ್, ಬಂಟಿಂಗ್ಸ್ ಗಳ ತೆರವು ಕಾರ್ಯಾಚರಣೆ:*

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿಯೂ ಮುಖ್ಯ ಇಂಜಿನಿಯರ್‌ಗಳ ನೇತೃತ್ವದ ತಂಡವು ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್ಸ್, ಫ್ಲೆಕ್ಸ್, ಪೋಸ್ಟರ್ಸ್, ಬಂಟಿಂಗ್ಸ್ ಗಳ ತೆರವು ಕಾರ್ಯಾಚರಣೆ ತೀವ್ರಗತಿ ಯಲ್ಲಿ ನಡೆಸುತ್ತಿದೆ.










ನಗರದ ರಸ್ತೆ ಬದಿಯ ಪೋಲ್, ಮರಗಳಿಗೆ ಅಳವಡಿಸಿರುವ ಫ್ಲೆಕ್ಸ್ ಗಳು, ಗೋಡೆ ಮೇಲೆ ಅಂಟಿಸಿರುವ ಪೋಸ್ಟರ್ ಗಳು, ಮರಗಳಿಗೆ ಕಟ್ಟಿರುವ ಬ್ಯಾನರ್ ಗಳನ್ನು ತೆರವುಗೊಳಿಸಲಾಗುತ್ತಿದೆ. ಅದರಂತೆ ಇಂದು ನಗರದ ಸ್ಯಾಂಕಿ ರಸ್ತೆ, ಹೆಬ್ಬಾಳ ರಸ್ತೆ, ನ್ಯೂ ಬಿಇಎಲ್ ರಸ್ತೆ, ಕಾಡುಗೋಡಿ, ಯಲಹಂಕ, ಬಳ್ಳಾರಿ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಹೆಗ್ಗನಹಳ್ಳಿ, ಬೇಗೂರು, ಹೆಚ್.ಎಸ್.ಆರ್ ಲೇಔಟ್, ಅಂಜನಾಪುರ, ಮಲ್ಲೇಶ್ವರ, ರಾಜಾಜಿನಗರ, ಗಾಂಧಿನಗರ ಸೇರಿದಂತೆ ನಗರದಾದ್ಯಂತ ಫ್ಲೆಕ್ಸ್, ಪೋಸ್ಟರ್ ಗಳನ್ನು ತೆರವುಗೊಳಿಸಲಾಗಿದೆ.

Post a Comment

0 Comments

Ad Code

Responsive Advertisement