Ticker

6/recent/ticker-posts

Ad Code

Responsive Advertisement

ಗೋಮ್ಮಟೇಶ್ವರನ ಬಗ್ಗೆ ಅವಹೇಳನಾಕಾರಿ ಹೇಳಿಕೆ ಸರಿಯೇ: ಭಟ್ಟಾರಕ ಸ್ವಾಮೀಜಿ

ಹಾಸನ, ಫೆ 11: ಭಗವಾನ್ ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡರೊಬ್ಬರು ನೀಡಿರುವುದನ್ನು ಶಿವಮೊಗ್ಗ ಜಿಲ್ಲೆಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಶೀಗಳಾದ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.

ಮತೀಯವಾಗಿ ಇತರ ಧರ್ಮಗಳ ಬಗ್ಗೆಯೂ ಸಹ ಅವಹೇಳನ ಸಂದೇಶಗಳನ್ನು ಬಿತ್ತರಿಸುವ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು. ಗೊಮ್ಮಟೇಶ್ವರನ ಬಗ್ಗೆ ವಿಕೃತ ಮನಸ್ಸಿನಿಂದ ಹಾಗು ಇತರೆ ಜಾತಿ, ಧರ್ಮದವರ ಭಾವನೆಗೆ ಧಕ್ಕೆ ತರುವ ಹಾಗೆ ಮಾತನಾಡುವುದು ತಪ್ಪು. ಮುಂದೆ ಇಂಥ ಘಟನೆಗಳು ನಡೆಯದಂತೆ ಸರ್ಕಾರಗಳು ಕ್ರಮಕೈಗೊಳ್ಳಲಿ. ಅವಹೇಳನಕಾರಿ ಹೇಳಿಕೆ ನೀಡಿದ ನ್ಯೂ ಇಂಡಿಯನ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್ ವಿರುದ್ಧ ಕಠಿಣ ಕ್ರಮ ಅಗತ್ಯ ಎಂದು ಅವರು ಚನ್ನರಾಯಪಟ್ಟಣ ತಾಲ್ಲೂಕು ಶ್ರವಣಬೆಳಗೊಳದಲ್ಲಿ ತಿಳಿಸಿದರು.

ಶಾಂತಿಯ ಪ್ರತಿರೂಪ ಗೊಮ್ಮಟೇಶ್ವರ ಸ್ವಾಮಿ ಬಗ್ಗೆ ಅವಹೇಳನಕಾರಿಯಾಗಿ ಕೆಲವರು ಮಾತನಾಡುತ್ತಿದ್ದಾರೆ, ಬಾಹುಬಲಿ ಸ್ವಾಮಿಯು ಕೇವಲ ಜೈನರಿಗೆ ಮಾತ್ರ ಪವಿತ್ರ ಮೂರ್ತಿ ಮಾತ್ರ ಅಲ್ಲ, ಅವರು ಇತರೆ ಧರ್ಮದವರಿಗೆ ಸಹ ಸಲ್ಲುವಂತವರು. ಚಕ್ರವರ್ತಿಯಾದ ಭರತನನ್ನು ಗೆದ್ದವರು, ಈ ದೇಶದಲ್ಲೇ ಹುಟ್ಟಿದ ಮಹಾಪುರುಷ. ಇಂಥವರ ಬಗ್ಗೆ ಸರಿಯಾಗಿ ತಿಳಿಯದೆ ವಿಕೃತ ಮನಸ್ಸಿನಿಂದ ಮಾತಾಡೋದು ತಪ್ಪು ಹಾಗು ಮಾತನ್ನಾಡುವವರಿಗೆ ಸರಕಾರ ತಕ್ಕ ಕಾನೂನು ಕ್ರಮ ಕೈಗೊಳ್ಳಬೇಕು. ಮತೀಯವಾಗಿ ಇತರ ಧರ್ಮಗಳ ಬಗ್ಗೆಯೂ ಸಹ ಅವಹೇಳನ ಸಂದೇಶಗಳನ್ನು ಬಿತ್ತರಿಸುವ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಕ್ರಮ ಜರುಗಿಸಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದರು.

ಸಿನಿಮಾಗಳಲ್ಲೇ ಆಗಲಿ, ಸಾಮಾಜಿಕ ಜಾಲತಾಣಗಳಲ್ಲಿ, ಮಾದ್ಯಮಗಳಲ್ಲೇ ಆಗಲಿ ಯಾವುದೇ ಧರ್ಮದ ದೇವರುಗಳ ನಿಂದನೆ ಆಗಬಾರದು ಹಾಗು ಸಲ್ಲದು. ಸಿನಿಮಾಗಳಲ್ಲಿ ವ್ಯಂಗ್ಯವಾಗಿ ಬಳಸಿಕೊಳ್ಳುವ ಪ್ರಯತ್ನಗಳಿಗೂ ಕಡಿವಾಣ ಸಹ ಬೀಳಬೇಕು. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಸೆನ್ಸಾರ್ ಬೋರ್ಡ್ ಮತ್ತು ಕನ್ನಡ ಸಾಹಿತ್ಯ ಪರಿಷತ್ಗಳು ತಮ್ಮ ಅಭಿಪ್ರಾಯವನ್ನು ತಿಳಿಸಬೇಕು. ಇತಿಹಾಸ ತಿಳಿಯದೆ ಬೇಕಾಬಿಟ್ಟಿಯಾಗಿ ನಿಂದಿಸುವ ವ್ಯಕ್ತಿಗಳಿಗೆ ಅಥವ ಅಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಬಾಹುಬಲಿ ಸ್ವಾಮಿ ಬಗ್ಗೆ ಮೈಸೂರಿನ ಮಾಜಿ ಕಾರ್ಪೊರೇಟರ್ ನ್ಯೂ ಇಂಡಿಯನ್ ಕಾಂಗ್ರೆಸ್ ಅಧ್ಯಕ್ಷ ಆಯೂಬ್ ಖಾನ್ ಆಡಿದ ನಿಂದನಾತ್ಮಕ ಹೇಳಿಕೆಯಿಂದ ನಮಗೆ ನೋವಾಗಿದೆ. ನಿಂದನೆ ಮಡಿರುವವರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಒಬ್ಬರಿಗೆ ಸರಿಯಾದ ರೀತಿಯಲ್ಲಿ ಸಂದೇಶ ಮುಟ್ಟಿಸಿದರೆ ಮುಂದೆ ಮಾತನಾಡುವವರು ಯೊಚಿಸುತ್ತಾರೆ. ಶಾಂತಿ ಸೌಹಾರ್ದಕ್ಕೆ ನೆಲೆಯಾದ ನಮ್ಮ ಭೂಮಿಯಲ್ಲಿ ಅದನ್ನು ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಡಿಸಿ ಕಚೇರಿ ಎದುರು ಧರಣಿ: ಭಗವಾನ್ ಬಾಹುಬಲಿ ಸ್ವಾಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮೈಸೂರಿನ ಮಾಜಿ ಕಾರ್ಪೊರೇಟರ್ ಅಯೂಬ್ ಖಾನ್ ವಿರುದ್ಧ ಜೈನ ಸಮುದಾಯದ ನೂರಾರು ಜನರು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಜೈನ ಧರ್ಮದ ಬಗ್ಗೆ ಅವಹೇಳನ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ವಿನಾಕಾರಣ ತಮ್ಮ ಸಮುದಾಯದ ಬಗ್ಗೆ ಅವಹೇಳನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ತಮ್ಮ ಆಕ್ರೋಶ ಹೊರಹಾಕಿದರು.

Varthajala Daily, Website, Web channel, Newspaper; Bengaluru

Post a Comment

0 Comments

Ad Code

Responsive Advertisement