Ticker

6/recent/ticker-posts

Ad Code

Responsive Advertisement

ತೂಬಗೆರೆ: ಜೆಡಿಎಸ್ ಪಕ್ಷದ ಕಚೇರಿ ಪ್ರಾರಂಭ, ನೂರಕ್ಕೂ ಹೆಚ್ಚು ಯುವಕರು ಜೆಡಿಎಸ್‌ ಸೇರ್ಪಡೆ

ತೂಬಗೆರೆ: ಪಟ್ಟಣದ ಬಸ್ ನಿಲ್ದಾಣದಲ್ಲಿ ನೂತನವಾಗಿ ಜೆಡಿಎಸ್ ಪಕ್ಷದ ಕಚೇರಿಯ ಉದ್ಘಾಟನೆ ಮಾಡಿ ಮಾತನಾಡಿದ ನಿಸರ್ಗ ನಾರಾಯಣಸ್ವಾಮಿ ತೂಬಗೆರೆ ಹೋಬಳಿ ಸಮಗ್ರ ಅಭಿವೃದ್ಧಿಗಾಗಿ ನಾನು ಪ್ರಥಮ ಬಾರಿ ಶಾಸಕನಾಗಿ ವಿಶೇಷ ಕಾಳಜಿ ವಹಿಸಿದ್ದೇನೆ.




 ತೂಬಗೆರೆ ಭಾಗದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ನಮ್ಮ ಜೆಡಿಎಸ್ ಪಕ್ಷದ ಕಚೇರಿಯನ್ನು ನೂತನವಾಗಿ ತೆರೆಯಲಾಗಿದೆ. ಈ ಕಚೇರಿಯ ಮೂಲಕ ಸಾರ್ವಜನಿಕರಿಗೆ ತಲುಪಬೇಕಾದ ಸರಕಾರಿ ಸವಲತ್ತುಗಳನ್ನು ತ್ವರಿತ ಗತಿಯಲ್ಲಿ ತಲುಪಿಸುವ ಉದ್ದೇಶ ನನ್ನದಾಗಿದೆ ಹಾಗೂ ಪ್ರತಿ 15 ದಿನಕ್ಕೊಮ್ಮೆ ಈ ಕಚೇರಿಯಿಂದಲೇ ನಾನು ಕಾರ್ಯನಿರ್ವಹಿಸುತ್ತೇನೆ ತಮ್ಮ ಕಷ್ಟಗಳಿಗೆ ಸ್ಪಂದಿಸಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಯುವಕರಿಗಾಗಿ ಅಧಿಕಾರ ಮೀಸಲು: ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಯುವಕರನ್ನು ಉದ್ದೇಶಿಸಿ ಮಾತನಾಡಿದ ನಿಸರ್ಗ ನಾರಾಯಣಸ್ವಾಮಿ ಕುಮಾರಸ್ವಾಮಿ ಮುಖ್ಯಮಂತ್ರಿ ಕಾಲದ ಅಭಿವೃದ್ಧಿ ಕಾರ್ಯಗಳ ಫಲವಾಗಿ ಇಂದು 100ಕ್ಕೂ ಹೆಚ್ಚು ಯುವಕರು ನಮ್ಮ ಪಕ್ಷ ಸೇರ್ಪಡೆಯಾಗಿದ್ದಾರೆ. ಯುವಪಡೆಯನ್ನು ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷದಲ್ಲಿನ ಜವಾಬ್ದಾರಿ ಯುವಕರಿಗಾಗಿ ಮೀಸಲಿಟ್ಟು ಮೇಲ್ದರ್ಜೆಯ ರಾಜಕೀಯದಲ್ಲಿ ಬಳಸಿಕೊಳ್ಳಲು ಬದ್ದನಾಗಿದ್ದು ಈ ಮೂಲಕ ಭವಿಷ್ಯದ ನಾಯಕರುಗಳನ್ನ  ಎಂದು ಯುವಕರನ್ನು ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ  ಅಪ್ಪಯ್ಯಣ್ಣ   ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಮುನೇಗೌಡ, ಉಪಾಧ್ಯಕ್ಷರಾದ ಮಂಜುನಾಥ್ ಮೇಲಿನಜೂಗಾನಹಳ್ಳಿ ಕಾರ್ಯದರ್ಶಿಗಳಾದ ಮಂಜುನಾಥ. ತೂಬಗೆರೆ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಸುಬ್ರಹ್ಮಣ್ಯ ,ಕನಕದಾಸ ಹಾಗೂ ಯುವ ಮುಖಂಡರಾದ ಗೌರೀಶ್ ಉದಯ್ ಆರಾಧ್ಯ ,ಅಂಬರೀಶ್, ಮುರುಳಿ ಹಾಗೂ ಮುಖಂಡರುಗಳು ಮತ್ತು ಜೆಡಿಎಸ್ ಕಾರ್ಯಕರ್ತರು ವಹಿಸಿದ್ದರು.

Post a Comment

0 Comments

Ad Code

Responsive Advertisement