ಚಿಕ್ಕಮಗಳೂರು, ಫೆ 12: 'ಬೆದರಿಕೆ ಕರೆ ಮಾಡುವವರು ಹೇಡಿಗಳು, ಕೈಲಾಗದವರು. ತಾಕತ್ತು ಇದ್ದರೆ ಎದುರು ಮಾತನಾಡಲಿ. ಇಂತಹ ಗೊಡ್ಡು ಹೇಡಿಗಳಿಗೆ ಹೆದರಲ್ಲ' ಎಂದು ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದರು.
ಬೆದರಿಕೆ ಕರೆಗಳು ಬಂದಿರುವುದಾಗಿ ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, 'ಬೆದರಿಕೆ ಕರೆಗಳು ನನಗೂ ಬಹಳ ಬಂದಿದ್ದವು, ಇದಕ್ಕೆಲ್ಲ ತಲೆ ಕೆಡಿಸಕೊಳ್ಳುವುದಿಲ್ಲ, ಇಂತಹ ಹೇಡಿಗಳನ್ನ ತುಂಬಾ ನೋಡಿದ್ದಿವಿ.
ಈ ಫೀಲ್ಡಿಗೆ ಇಳಿಯುವ ಸಂದರ್ಭದಲ್ಲಿ ಇದೆಲ್ಲವನ್ನು ಎದುರಿಸಲು ಸಿದ್ಧರಿರಬೇಕು. ಪೊಲೀಸ್ ಇಲಾಖೆ, ಸಮಾಜ ನಮ್ಮೊಂದಿಗೆ ಇದೆ. ಆ ಧೈರ್ಯದಲ್ಲೇ ಸಾಗುತ್ತಿದ್ದೇವೆ' ಎಂದರು.
0 Comments