ಕನ್ನಡ ಕಾವ್ಯದ ಕಣ್ಮಣಿ, ನಾಡೋಜ ಡಾ.ಚನ್ನವೀರ ಕಣವಿಯವರನ್ನು ಅನೇಕಬಾರಿ ಪ್ರಯತ್ನಿಸಿದರೂ ಕಾಣಲು ಸಾಧ್ಯವಾಗಿರಲಿಲ್ಲ ಆ ಕೊರತೆ ಹಾಗೆ ಉಳಿದಿತ್ತು.
ಒಮ್ಮೆ ನನ್ನ ತಮ್ಮ ಚನ್ನಗಿರಿ ಸುಮತೀಂದ್ರ ಫೋನ್ ಮಾಡಿ "ನಾಳೆ ಬೆಳಿಗ್ಗೆ ಬೆಂಗಳೂರು ಗಾಯನ ಸಮಾಜದಲ್ಲಿ ನಮ್ಮೂರ ಕವಿ ಹೆಚ್.ಎಸ್.ವೆಂಕಟೇಶಮೂತಿ೯ ಅವರಿಗೆ ಚನ್ನವೀರ ಕಣವಿ ಅವರಿಂದ ಸನ್ಮಾನ ಕಾರ್ಯಕ್ರಮ ಇದೆ ಎಂಬ ಮಾಹಿತಿ ತಲುಪಿಸಿದ. ಒಂದೇ ವೇದಿಕೆಯಲ್ಲಿ ನಾಡಿನ ಎರಡು ಮಹಾನ್ ಸಾಧಕರ ಭೇಟಿ ಅವಕಾಶ.
ಊರ ಹೊರಗಿದ್ಧೆ.ರಾತ್ರಿ ಹೊರಟು ಬೆಳಿಗ್ಗೆ ಸಭೆಗೆ ನನ್ನಾಕೆಯ ಜೊತೆ ಹೋದೆ. ಗ್ರಾಮಾಂತರ ಸಾರಿಗೆ ಕೈಕೊಟ್ಟಿತ್ತು. ಅಲ್ಲಿ ಸೇರುವ ಹೊತ್ತಿಗೆ ಸಮಾರಂಭ ಮುಗಿಯುವ ಹಂತ ತಲುಪಿತ್ತು. ಚನ್ನವೀರ ಕಣವಿ ಅವರು ಸಭೆ ಅಲಂಕರಿಸಿ ಸನ್ಮಾನ ಮಾಡಿದ್ದರು.
ನಾವು ಸಭೆಯ ಆಯೋಜಕರಿಗೆ ನಮ್ಮ ಸಂಕಷ್ಟದ ಅರಿವು ಮಾಡಿಕೊಟ್ಟು ಅವಕಾಶ ಕೋರಿದೆವು.ನಮ್ಮ ಪರಿಸ್ಥಿತಿ ನೋಡಿ ಆಗಲಿ ಎಂದು ಅನುಮತಿ ನೀಡಿದರು. ಅದು ಜೀವನದಲ್ಲಿ ಸದಾ ಹಸಿರಾಗಿರುವ ನೆನಪು. ಚನ್ನವೀರ ಕಣವಿ ಅವರ ಮುಗ್ಧ ನಗುವೇ ಸಮನ್ವಯ ಬಾಳಿನ ಸಂಕೇತ.ಅವರಿಗೆ ಶ್ರದ್ಧಾಂಜಲಿ
0 Comments