Ticker

6/recent/ticker-posts

Ad Code

Responsive Advertisement

ಬಜೆಟ್‍ನಲ್ಲಿ ಯುವಜನರಿಗೆ ಆದ್ಯತೆಗೆ ಯುವ ಮೋರ್ಚಾ ಮನವಿ


ಬೆಂಗಳೂರು: ಮುಂಬರುವ ಆಯವ್ಯಯ ಪತ್ರದಲ್ಲಿ ಯುವಜನರಿಗೆ ಶಿಕ್ಷಣ, ಉದ್ಯೋಗ, ಕೌಶಲಾಭಿವೃದ್ಧಿಗೆ ಸಂಬಂಧಿಸಿ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಯುವ ಮೋರ್ಚಾ  ಕರ್ನಾಟಕ ವತಿಯಿಂದ ಮನವಿ ಸಲ್ಲಿಸಲಾಯಿತು. ಯುವ ಮೋರ್ಚಾ ರಾಜ್ಯ ಅಧ್ಯಕ್ಷರಾದ ಡಾ. ಸಂದೀಪ್ ಕುಮಾರ್ ಕೆ.ಸಿ. ಅವರ ನೇತೃತ್ವದಲ್ಲಿ ಈ ಮನವಿ ನೀಡಲಾಯಿತು.

ರಾಜ್ಯ ಬಜೆಟ್‍ನಲ್ಲಿ ಯುವಮೋರ್ಚಾ ಹಾಗೂ ಯುವಜನರ ಕೋರಿಕೆಗಳಿಗೆ ಸ್ಪಂದಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು ಹಾಗೂ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಡಾ. ಸಂದೀಪ್ ಕುಮಾರ್ ಕೆ.ಸಿ. ಅವರು ತಿಳಿಸಿದ್ದಾರೆ.

ಈ ವೇಳೆ ಯುವ ಮೋರ್ಚಾ ರಾಜ್ಯ ಪದಾಧಿಕಾರಿಗಳಾದ ಅನಿಲ್ ಶೆಟ್ಟಿ, ವಿನೋದ್ ಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಜಗದೀಶ್ ಚಂದ್ರ, ಮಹಾಂತೇಶ ಸಿಗಸಿ, ಜಿಲ್ಲಾಧ್ಯಕ್ಷರಾದ ಅಭಿಲಾಷ್ ರೆಡ್ಡಿ, ಪುನೀತ್ ರೆಡ್ಡಿ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement