ಬೆಂಗಳೂರು, ಫೆಬ್ರವರಿ 14, (ಕರ್ನಾಟಕ ವಾರ್ತೆ) : ವಿಧಾನಮಂಡಲದ ಅಧಿವೇಶನವು ಇಂದು ವಿಧಾನಸೌಧದಲ್ಲಿ ಸಮಾವೇಶಗೊಂಡು, ಘನತೆವೆತ್ತ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ನಂತರ ಮಾನ್ಯ ಸಭಾಪತಿ ಬಸವರಾಜ ಹೊರಹಟ್ಟಿ ಹಾಗೂ ಮಾನ್ಯ ಸಭಾಧ್ಯಕ್ಷರಾದ ವಿಶ್ವೇಶ್ವರಹೆಗಡೆ ಕಾಗೇರಿ ಅವರು, ವಿಧಾನ ಸಭೆಯ ಮಾಜಿ ಸದಸ್ಯರು ಹಾಗೂ ಮಾಜಿ ಸಚಿವರಾದ ಡಾ: ಜೆ. ಅಲೆಕ್ಸಾಂಡರ್, ರಾಜ್ಯ ಸಭೆಯ ಮಾಜಿ ಸದಸ್ಯರಾದ ಕೆ.ಆರ್. ಜಯದೇವಪ್ಪ, ರಾಜ್ಯ ಸಭೆಯ ಮಾಜಿ ಸದಸ್ಯರು ಹಾಗೂ ಲೋಕಸಭೆಯ ಮಾಜಿ ಸದಸ್ಯರಾದ ಹನುಮಂತಗೌಡ ಭೀಮನಗೌಡ ಪಾಟೀಲ್, ಭಾರತ ರತ್ನ, ದಾದಾಸಾಹೇಬ ಪಾಲ್ಕೆ ಪ್ರಶಸ್ತಿ ಪುರಸ್ಕøತರಾದ ಡಾ: ಲತಾ ಮಂಗೇಶ್ಕರ್, ಕನ್ನಡದ ಸಾಹಿತಿ ಚಂದ್ರಶೇಖರ ಪಾಟೀಲ, ಭಾವೈಕ್ಯತೆಯ ಸಂತರಾದ ಇಬ್ರಾಹಿಂ ಸುತಾರ ಜಾನಪದ ಕಲಾವಿದರಾದ ಬಸವಲಿಂಗಯ್ಯ ಹಿರೇಮಠ ಹಾಗೂ ಪರಿಸರ ಸಂರಕ್ಷಕ ಮಹದೇವ ಬುದೋ ವೇಳಿಪ ಅವರುಗಳು ನಿಧನರಾಗಿರುವ ಸಂಬಂಧ, ಮೃತರ ಗೌರವಾರ್ಥ ಉಭಯ ಸದನಗಳಲ್ಲಿ ಸಂತಾಪ ವ್ಯಕ್ತಪಡಿಸಿದರು.
ವಿಧಾನ ಸಭೆಯ ಮಾಜಿ ಸದಸ್ಯರು ಹಾಗೂ ಮಾಜಿ ಸಚಿವರಾದ ಡಾ. ಜೆ. ಅಲೆಕ್ಸಾಂಡರ್ ರವರು 1938ರ ಆಗಸ್ಟ್ 8ರಂದು ಕೇರಳದ ಕೊಲ್ಲಂ ಜಿಲ್ಲೆಯ ಮನ್‍ಗಡ್‍ನಲ್ಲಿ ಜನಿಸಿದ ಶ್ರೀಯುತರು ಎಂ.ಎ., ಪಿ.ಹೆಚ್.ಡಿ., ಪದವೀಧರಾಗಿದ್ದರು. 1963ರಲ್ಲಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಿ ಕರ್ನಾಟಕದ ಸೇವೆಗೆ ನಿಯೋಜಿತಗೊಂಡಿದ್ದ ಶ್ರೀಯುತರು ವಿವಿಧ ಇಲಾಖೆಯ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 1992ರಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಶ್ರೀಯುತರು ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷದಿಂದ ಭಾರತಿನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ, ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿಯೂ ಸಹ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ನಗರದ ವೈ.ಎಂ.ಸಿ.ಎ. ಅಧ್ಯಕ್ಷರಾಗಿ 30 ವರ್ಷಗಳಿಗೂ ಹೆಚ್ಚು ಕಾಲ ಸೇವೆಯನ್ನು ಸಲ್ಲಿಸಿದ್ದರು. ಇವರು ದಿನಾಂಕ: 14.01.2022ರಂದು ನಿಧನ ಹೊಂದಿರುತ್ತಾರೆ.
ಕೆ.ಆರ್. ಜಯದೇವಪ್ಪ
ಮಾಜಿ ಸದಸ್ಯರಾದ ಕೆ.ಆರ್. ಜಯದೇವಪ್ಪ ಅವರು ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವಕೀಲರಾಗಿದ್ದರು. ಭಾರತ ಸೇವಾದಳದ ನಿμÁ್ಟವಂತ ಕಾರ್ಯಕರ್ತರಾಗಿದ್ದು, ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ್ದ ಶ್ರೀಯುತರು 1992 ರಿಂದ 1998ರ ಅವಧಿಯಲ್ಲಿ ರಾಜ್ಯ ಸಭೆಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದು, ಶ್ರೀಯುತರು ದಿನಾಂಕ: 23.12.2021ರಂದು ನಿಧನ ಹೊಂದಿರುತ್ತಾರೆ.
ಡಾ: ಲತಾ ಮಂಗೇಶ್ಕರ್
ರಾಜ್ಯ ಸಭೆ ಮಾಜಿ ಸದಸ್ಯರು ಹಾಗೂ 'ಭಾರತ ರತ್ನ' ಗಾನ ಕೋಗಿಲೆ, ಭಾರತೀಯ ಸಂಗೀತಲೋಕ ಕಂಡ ಅನುಪಮ ಗಾಯಕಿ ಡಾ. ಲತಾ ಮಂಗೇಶ್ಕರ್ ಅವರು 1929ರ ಸೆಪ್ಟೆಂಬರ್, 28 ರಂದು ಮಧ್ಯಪ್ರದೇಶದ ಇಂದೋರ್‍ನಲ್ಲಿ ಜನಿಸಿದ ಇವರು ತಮ್ಮ ತಂದೆಯವರಿಂದಲೇ 5ನೇ ವಯಸ್ಸಿನಲ್ಲಿಯೇ ಸ್ವರಾಭ್ಯಾಸ ಪ್ರಾರಂಭಿಸಿ 13ನೇ ವಯಸ್ಸಿನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದರು. 1999 ರಿಂದ 2005ರ ವರೆಗೆ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಹೊಂದಿರುತ್ತಾರೆ. ಗಾಯನದಲ್ಲμÉ್ಟೀ ಅಲ್ಲದೆ ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
1963ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಮ್ಮುಖದಲ್ಲಿ ಲಕ್ಷಾಂತರ ಭಾರತೀಯರ ಮುಂದೆ ಹಾಡಿದ " ಏ ಮೇರೆ ವತನ್ ಕೆ ಲೋಗೋ” ಹಾಡನ್ನು ಪ್ರಧಾನಿಯವರೇ ಕಣ್ಣೀರು ಹಾಕುವಂತೆ ಮಾಡಿದ್ದಲ್ಲದೆ ದೇಶಾದ್ಯಂತ ಸಂಚಲನವನ್ನು ಮೂಡಿಸಿತ್ತು. ಇಂದಿಗೂ ಆ ಹಾಡನ್ನು ಆಲಿಸಿದರೆ ಪ್ರತಿಯೊಬ್ಬ ಭಾರತೀಯನ ಮನದಲ್ಲಿ ದೇಶ ಪ್ರೇಮ ಮೂಡಿಸುತ್ತದೆ. ಕೇವಲ ಚಲನಚಿತ್ರ ಗೀತೆಗಳಲ್ಲದೆ ಭಕ್ತಿಗೀತೆ, ದೇಶ ಪ್ರೇಮಗೀತೆ, ಭಾವಗೀತೆ, ಅಭಂಗ್, ಗಝಲ್, ದೋಹೆ ಸೇರಿದಂತೆ ಸಂಗೀತದ ಎಲ್ಲಾ ಪ್ರಕಾರಗಳಲ್ಲಿಯೂ ಸಂಗೀತ ಸುಧೆ ಹರಿಸಿ ತಮ್ಮ ಸ್ವರಮಾಧುರ್ಯದ ಮೂಲಕ ಗಾಯನ ಲೋಕವನ್ನು ಶ್ರೀಮಂತಗೊಳಿಸಿದ ಕೀರ್ತಿ ಲತಾ ಮಂಗೇಶ್ಕರ್‍ಗೆ ಸಲ್ಲುತ್ತದೆ.
1974ರಲ್ಲಿ ಲಂಡನ್‍ನ ರಾಯಲ್ ಆಲ್ಬರ್ಟ್ ಹಾಲ್‍ನಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ಗಾಯಕಿ ಲತಾ ಮಂಗೇಶ್ಕರ್. ಕೆನಡಾದ ಟೊರಾಂಟೋದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಜೂನ್ 9ನ್ನು ಏμÁ್ಯದಿನವೆಂದು ಘೋಷಿಸಲಾಗಿದೆ. ಕನ್ನಡವೂ ಸೇರಿದಂತೆ ಭಾರತದ 36 ಭಾμÉಗಳಲ್ಲಿ ಹಾಗೂ ವಿದೇಶಿ ಭಾμÉಗಳಲ್ಲಿಯೂ ಹಾಡಿ ತಮ್ಮ ಅಪ್ರತಿಮ ಗಾನ ಪ್ರತಿಭೆ ಮೂಲಕ ದೇಶ ವಿದೇಶಗಳ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಶ್ರೀಯುತರು ಪುಟ್ಟ ಮಕ್ಕಳಿಂದ ಹಿಡಿದು ಸಂಗೀತದ ದಿಗ್ಗಜರವರೆಗೆ ಹಿರಿಯರು ಕಿರಿಯರು ಎಲ್ಲರನ್ನು ಗೌರವಪೂರ್ಣವಾಗಿ ನಡೆಸಿಕೊಳ್ಳುತ್ತಿದ್ದು ನೈಜ ಸಂಗೀತ, ಸಾಂಸ್ಕೃತಿಕ ರಾಯಭಾರಿಯಾಗಿದ್ದರು.
ಶ್ರೀಯುತರು ಭಾರತ ರತ್ನ, ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ, ದೇಶದ 60ನೇ ಸ್ವಾತಂತ್ರೋತ್ಸವ ನಿಮಿತ್ತ ಜೀವಮಾನ ಸಾಧನೆ ಗೌರವ, ಲಂಡನ್‍ನ ಐಐಎಫ್‍ಎನಿಂದ ಜೀವಮಾನ ಸಾಧನೆ ಪ್ರಶಸ್ತಿ, ನ್ಯೂಯಾರ್ಕ್ ಯೂನಿವರ್ಸಿಟಿ ಸೇರಿದಂತೆ ಆರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿ, ನಾಲ್ಕು ಫಿಲಂಫೇರ್ ಪ್ರಶಸ್ತಿಗಳು ಸೇರಿದಂತೆ ಇತರೆ ಅಸಂಖ್ಯಾತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.
ಸಂಗೀತ ಲೋಕದ ದಂತಕಥೆ, ಭಾರತೀಯ ಸಂಸ್ಕøತಿಯ ಅನಘ್ರ್ಯರತ್ನ, ಭಾರತದ ನೈಟಿಂಗೇಲ್, ವಿಶ್ವವಿಖ್ಯಾತ ಗಾಯಕಿ, ಭಾರತ ರತ್ನ ಪುರಸ್ಕøತ, ಸಪ್ತಸ್ವರಗಳ ಗಾನಕೋಗಿಲೆ ದಿನಾಂಕ: 06.02.2022 ರಂದು ನಿಧನ ಹೊಂದಿದ್ದು, ಭಾರತದ ಸಾರಸ್ವತ ಲೋಕದ ಮಹತ್ವದ ಯುಗದ ಅಂತ್ಯವಾಗಿದೆ. ಶ್ರೀಯುತರ ನಿಧನದಿಂದಾಗಿ ಭಾರತೀಯ ಚಲನಚಿತ್ರರಂಗದ ಮೇರು ಗಾನ ಗಂಧರ್ವ ಧ್ರುವತಾರೆಯೊಂದು ಅಸ್ತಂಗತವಾಗಿದೆ. ಸ್ವರಬ್ರಹ್ಮ ಎಂಬ ಖ್ಯಾತ ನಾಮಕ್ಕೆ ಅನ್ವರ್ಥರಾಗಿದ್ದ ಶ್ರೀಯುತರು ತಮ್ಮ ಮಧುರ ಧ್ವನಿಯ ಗಾಯನ ಗೀತೆಗಳ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದೆ ಚಿರಸ್ಥಾಯಿಯಾಗಿ ಉಳಿದಿರುತ್ತಾರೆ.
ಹನುಮಂತಗೌಡ ಭೀಮನಗೌಡ ಪಾಟೀಲ್
ಲೋಕಸಭೆಯ ಮಾಜಿ ಸದಸ್ಯರಾದ ಹನುಮಂತಗೌಡ ಭೀಮನಗೌಡ ಪಾಟೀಲ್ ರವರು ಮೂಲತಃ ಬಾಗಲಕೋಟೆಯವರಾಗಿದ್ದು, ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ನಂತರ ಶಿಕ್ಷಕ ವೃತ್ತಿ ತ್ಯಜಿಸಿ, ಬಾದಾಮಿ, ತಾಲ್ಲೂಕು ಬೋರ್ಡ್ ಸದಸ್ಯರಾಗಿ ಚುನಾಯಿತರಾಗುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದರು. ಬಾಗಲಕೋಟೆ ಸಹಕಾರಿ ನೂಲಿನ ಗಿರಣಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ರಾಜ್ಯ ಸಹಕಾರ ಗಿರಣಿಗಳ ಮಹಾಮಂಡಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಶ್ರೀಯುತರು 1984ರಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸೇವೆಯನ್ನು ಸಲ್ಲಿಸಿದ್ದು, ದಿನಾಂಕ: 01.02.2022ರಂದು ನಿಧನ ಹೊಂದಿರುತ್ತಾರೆ.
ಚಂದ್ರಶೇಖರ ಪಾಟೀಲ
ಕನ್ನಡದ ಸಾಹಿತಿ, ಕವಿ, ನಾಟಕಕಾರ, ಸಂಪಾದಕರು, ಸಂಘಟನಕಾರ ಹಾಗೂ ಕನ್ನಡದ ಹೋರಾಟಗಾರರಾಗಿದ್ದ ಚಂದ್ರಶೇಖರ ಪಾಟೀಲ ಅವರು 1939 ಜೂನ್ 18ರಂದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ, ಹತ್ತೀಮತ್ತೂರು ಗ್ರಾಮದಲ್ಲಿ ಜನಿಸಿದ್ದ ಶ್ರೀಯುತರು ಇಂಗ್ಲಿμï ಎಂ.ಎ., ಪದವೀಧರರಾಗಿದ್ದು, ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ಭಾμÁಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆಂಗ್ಲ ಉಪನ್ಯಾಸಕರಾಗಿ ಬೋಧಕ ವೃತ್ತಿಯನ್ನು ಆರಂಭಿಸಿದ ಶ್ರೀಯುತರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲೇ ಕಾವ್ಯ ಹಾಗೂ ನಾಟಕಗಳ ಮೂಲಕ ಪ್ರಸಿದ್ಧರಾಗಿದ್ದರು. ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಜನಜನಿತರಾಗಿದ್ದರು. ಶ್ರೀಯುತರು ಗೋಕಾಕ ಚಳುವಳಿ ಸೇರಿದಂತೆ ಅನೇಕ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಜೆಪಿ, ಆಂದೋಲನದಲ್ಲಿ ಜೈಲುವಾಸ ಸಹ ಅನುಭವಿಸಿದ್ದರು. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ ಮುಂಚೂಣಿಯಲ್ಲಿದ್ದರು. ಕಾವ್ಯ ಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಶ್ರೀಯುತರು ಮಾಧ್ಯಮವನ್ನು ಆಯ್ದುಕೊಂಡು ಹಲವಾರು ನಾಟಕಗಳನ್ನೂ ರಚಿಸಿದ್ದಾರೆ, ಅವುಗಳಲ್ಲಿ ಕೊಡೆಗಳು, ಅಪ್ಪ ಕುಂಟ ಕುಂಟ ಕುರುವತ್ತಿ. ನಳಕವಿಯ ಮಸ್ತಕಾಭಿμÉೀಕ ಮುಂತಾದ ನಾಟಕಗಳು ಪ್ರಖ್ಯಾತವಾಗಿವೆ. ಸಂಕ್ರಮಣ ಕಾವ್ಯ, ಗಾಂಧಿ ಗಾಂಧಿ, ನೆಲ್ಸನ್ ಮಂಡೇಲಾ ಮುಂತಾದ ಕೃತಿಗಳು ಇವರ ಸಂಪಾದಿತ ಕೃತಿಗಳಾಗಿವೆ.
ಶ್ರೀಯುತರು ಸ್ನೇಹಿತರೊಡಗೂಡಿ, ಸಂಪಾದಕರಾಗಿ ಸಂಕ್ರಮಣ ಪತ್ರಿಕೆಯನ್ನು ಪಾರಂಭಿಸಿದ್ದರು. ಈ ಪತ್ರಿಕೆಯು ಎಪ್ಪತ್ತರ ದಶಕದ ನಂತರ ದಲಿತ, ಬಂಡಾಯ ಸಾಹಿತ್ಯ ಚಳುವಳಿ ಮುಂತಾದವುಗಳನ್ನು ಒಳಗೊಂಡು ಹಲವಾರು ಯುವ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ಸಾಹಿತಿ, ಸಂಪಾದಕ, ಕನ್ನಡ ಹೋರಾಟಗಾರರಾಗಿ ಎಲ್ಲಾ ರಂಗಗಳಲ್ಲಿಯೂ ಅಪ್ರತಿಮ ಸೇವೆಯನ್ನು ಸಲ್ಲಿಸಿದ್ದ ಶ್ರೀಯುತರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯು ಸೇವೆಯನ್ನು ಸಲ್ಲಿಸಿದ್ದಾರೆ. ಶ್ರೀಯುತರು, ಕರ್ನಾಟಕ ಸಾಹಿತ್ಯ ಆಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಸಂದೇಶ್ ಮಾಧ್ಯಮ ಪ್ರಶಸ್ತಿಗಳಲ್ಲದೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದು, ದಿನಾಂಕ: 10, 01, 2022ರಂದು ನಿಧನ ಹೊಂದಿರುತ್ತಾರೆ.
ಇಬ್ರಾಹಿಂ ಸುತಾರ
ಕನ್ನಡದ ಕಬೀರರೆಂದೇ ಖ್ಯಾತರಾಗಿದ್ದ ಇಬ್ರಾಹಿಂ ಅವರು 1930ರ ಮೇ 10ರಂದು ಬಾಗಲಕೋಟೆ ಜಿಲ್ಲೆಯ, ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಬಡಗಿತನ ವೃತ್ತಿಯ ಕುಟುಂಬದಲ್ಲಿ ಜನಿಸಿದ ಶ್ರೀಯುತರು ವೃತ್ತಿಯಲ್ಲಿ ನೇಕಾರರಾಗಿದ್ದರು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿಯ ಸೂಫಿ ಸಂತರಾದ ಹಜರತ್ ಶೇಖಲ್ ಮಸಾಯಿಕ್, ಜುನ್ನೇದಿ ಅವರಿಂದ ಗುರುದೀಕ್ಷೆ ಪಡೆದು ಭಜನೆ ಮತ್ತು ಪ್ರವಚನ ಸಾಹಿತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಶರಣ ಲೋಕ ಸಿದ್ಧಾರೂಢ ಪರಂಪರೆ, ಸೂಫಿ ಸಂತರ ಪರಂಪರೆ, ಕುರಾನ್, ಭಗವದ್ಗೀತೆಗಳ ಅಧ್ಯಯನವನ್ನು ಆಳವಾಗಿ ಮಾಡಿದ್ದ ಶ್ರೀಯುತರು ತತ್ವಪದ, ವಚನ, ಭಾವೈಕ್ಯತೆಗಳ ಸಂಗಮವಾಗಿದ್ದರು. ಎಲ್ಲಾ ಧರ್ಮಗಳ ಮರ್ಮವು ಒಂದೇ, ಬಲ್ಲಿದ ಗುರುಗಳ ಬೋಧನೆ ಒಂದೇ ಎನ್ನುತ ತತ್ವಶಾಸ್ತ್ರ, ಧಾರ್ಮಿಕ ಮೌಲ್ಯ, ಆಧ್ಯಾತ್ಮಿಕ ಅನ್ವೇಷಣೆ, ಜೀವನ ಮೌಲ್ಯಗಳ ಜೊತೆ ಜೊತೆಯಲ್ಲೇ ರಾಷ್ಟ್ರೀಯ ಐಕ್ಯತೆಗೆ ಒತ್ತು ಕೊಟ್ಟಿದ್ದರು. ಧರ್ಮ, ವರ್ಗ, ಜಾತಿ ನೆಪದಲ್ಲಿ ಕಿತ್ತಾಡುವವರ ಮನ:ಪರಿವರ್ತನೆ ಮಾಡಿಸುತ್ತಿದ್ದ ಶ್ರೀಯುತರು, ಧಾರ್ಮಿಕ ಸಮನ್ವಯತೆ ಮತ್ತು ಸೌಹಾರ್ದತೆಯ ಹರಿಕಾರರಾಗಿದ್ದರು. ಆಧ್ಯಾತ್ಮ ಲೋಕ, ಸಾಹಿತ್ಯ ಲೋಕ ಜನಪದ ಲೋಕ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು. ಕರ್ನಾಟಕವಲ್ಲದೆ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗೋವಾ, ಕೇರಳ ರಾಜ್ಯಗಳಲ್ಲೂ ತಮ್ಮ ಪ್ರವಚನದಿಂದ ಖ್ಯಾತರಾಗಿದ್ದ ಶ್ರೀಯುತರು ಕನ್ನಡದ ಕಬೀರರೆಂದೇ ಹೆಸರಾಗಿದ್ದರು.
ಶ್ರೀಯುತರು ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕಥಾಕೀರ್ತನ ಕ್ಷೇತ್ರದ ಕರ್ನಾಟಕ ಕಲಾಶ್ರೀ ಪ್ರಶಸ್ತಿಗಳಲ್ಲದೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ಇವರು ದಿನಾಂಕ: 05.02.2022ರಂದು ನಿಧನ ಹೊಂದಿರುತ್ತಾರೆ.
ಬಸವಲಿಂಗಯ್ಯ ಹಿರೇಮಠ
ಖ್ಯಾತ ಜಾನಪದ ಕಲಾವಿದರಾದ ಬಸವಲಿಂಗಯ್ಯ ಹಿರೇಮಠ ಅವರು 1959ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ ಜನಿಸಿದ್ದ ಶ್ರೀಯುತರು ಎಂ.ಎ.(ಜಾನಪದ) ಪದವೀಧರಾಗಿದ್ದರು. ನೀನಾಸಂನಿಂದ ಶಿಕ್ಷಣ ಪಡೆದು ಸುಗಮ ಸಂಗೀತ ಕ್ಷೇತ್ರದಲ್ಲಿ ಗಾಯಕರಾಗಿ ರಾಜ್ಯಾದ್ಯಂತ ಪ್ರಸಿದ್ಧರಾಗಿದ್ದರು. ದೊಡ್ಡಾಟ, ಸಣ್ಣಾಟ, ಪಾರಿಜಾತ ನಾಟಕಗಳನ್ನು ಆಧುನಿಕ ರಂಗಭೂಮಿಗೆ ಪರಿಚಯಿಸಿದರು. ಶ್ರೀಕೃಷ್ಣ ಪಾರಿಜಾತ ನಾಟಕವನ್ನು ಮೂರು ಗಂಟೆಯಲ್ಲಿ ಪ್ರೇಕ್ಷಕರ ಮನಮುಟ್ಟುವಂತೆ ನಿರ್ದೇಶಿಸಿದ್ದ ಶ್ರೀಯುತರು ಜಾನಪದ ಸಂಶೋಧನಾ ಸಂಸ್ಥೆ ಮೂಲಕ ಯುವ ಕಲಾವಿದರು ಹಾಗೂ ಯುವ ಸಮೂಹಕ್ಕೆ ಕಲಾ ತರಬೇತಿಯನ್ನು ನೀಡಿ ಸೈ ಎನಿಸಿಕೊಂಡಿದ್ದರು, ಇವರ ಕಂಚಿನ ಕಂಠದ ಹಾಡುಗಾರಿಕೆಗೆ ಎಲ್ಲರೂ ತಲೆದೂಗುತ್ತಿದ್ದರು. ಕರ್ನಾಟಕ ವಾರ್ತಾ ಇಲಾಖೆಯಿಂದ ಧಾರವಾಡ ಹಾಗೂ ಕಲಬುರಗಿ ವಿಭಾಗ ಮಟ್ಟದ ಬೀದಿ ನಾಟಕ ತರಬೇತಿ ಕಾರ್ಯಾಗಾರದ ನಿರ್ದೇಶಕರಾಗಿಯು ಸೇವೆಯನ್ನು ಸಲ್ಲಿಸಿದ್ದ ಶ್ರೀಯುತರು ಅಮೇರಿಕ, ಇಂಗ್ಲೆಂಡ್, ದುಬೈ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳಲ್ಲಿ ಶ್ರೀ ಕೃಷ್ಣ ಪಾರಿಜಾತ, ಸಣ್ಣಾಟ ನಾಟಕಗಳ ಪ್ರದರ್ಶನವನ್ನು ನೀಡಿದ್ದರು. ಶ್ರೀಯುತರು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರು ದಿನಾಂಕ:09,01,2022ರಂದು ನಿಧನ ಹೊಂದಿರುತ್ತಾರೆ.
ಮಹದೇವ ಬದೋ ವೇಳಿಪ
ಹಿರಿಯ ಜಾನಪದ ಕಲಾವಿದ, ಮಹದೇವ ಬುದೋ ವೇಳಿಪ ಅವರು ಮೂಲತ: ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ಬುಡಕಟ್ಟು “ಕುಣಬಿ” ಸಂಸ್ಕೃತಿ ಕಲೆಯನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಶ್ರೀಯುತರು ಸಾವಿರಾರು ಜನಪರ ಹಾಡುಗಳನ್ನು ರಚಿಸಿ ಹಾಡುವ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದರು. ಪರಿಸರದ ಬಗ್ಗೆ ಅಪಾರವಾದ ಅನುಭವವನ್ನು ಹೊಂದಿದ್ದ ಶ್ರೀಯುತರು ಕಾಡಿನಿಂದ ಒಣ ಎಲೆಗಳನ್ನು ತರುವುದನ್ನು ವಿರೋಧಿಸುತ್ತಿದ್ದರು. ಪರಿಸರ ಸಮತೋಲನದಲ್ಲಿ ಉಣುಗು (ಉಣ್ಣೆ), ಉಂಬಳಗಳೂ ಮಹತ್ವದ ಪಾತ್ರ ಹೊಂದಿವೆ, ಅವುಗಳನ್ನು ನಾಶ ಮಾಡಬಾರದು ಎಂದು ಜಾಗೃತಿ ಮೂಡಿಸುತ್ತಿದ್ದರು. ಹಾಗೆಯೇ ಜೇನುನೊಣಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಶ್ರೀಯುತರಿಗೆ ಯಾವ ಹಕ್ಕಿಯ ಕೂಗು ಹೇಗಿರುತ್ತೆ. ಯಾವ ಹಕ್ಕಿ ಯಾವಾಗ ಕೂಗುತ್ತೆ. ಯಾಕೆ ಧ್ವನಿ ಬದಲಿಸುತ್ತೆ ಎಂಬ ಬಗ್ಗೆ ಅಪಾರ ಮಾಹಿತಿಯನ್ನು ಹೊಂದಿದ್ದ ಇವರಿಗೆ ಹಕ್ಕಿಗಳ ಕೂಗನ್ನು ಆಧರಿಸಿ ನಿಖರವಾದ ಸಮಯ ಹೇಳುವುದು ಕರಗತವಾಗಿತ್ತು. ಅವರ ಈ ಸಾಧನೆಯನ್ನು ಪರಿಗಣಿಸಿ 2021ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಈ ಪುರಸ್ಕಾರಕ್ಕೆ ಜೊಯಿಡಾ ತಾಲ್ಲೂಕಿನಿಂದ ಪಾತ್ರರಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ. ಪರಿಸರ ಸಂರಕ್ಷಕರಾದ ಶ್ರೀಯುತರು ದಿನಾಂಕ: 10.02.2022ರಂದು ನಿಧನ ಹೊಂದಿರುತ್ತಾರೆ.
0 Comments