Ticker

6/recent/ticker-posts

Ad Code

Responsive Advertisement

Flash News: ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಉಸಿರುಗಟ್ಟಿ ಮೃತಪಟ್ಟ ವ್ಯಕ್ತಿ; ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ..

ದಾವಣಗೆರೆ, ಜ 17: ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವಿಗೀಡಾದ ಘಟನೆವೊಂದು ನಡೆದಿದೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದ್ದು, ಇಲ್ಲಿನ ವೈದ್ಯರ ವಿರುದ್ಧ ಸಾರ್ವಜನಿಕರಿಂದ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.

ದಾವಣಗೆರೆ ನಿವಾಸಿಯಾಗಿದ್ದ ಹನುಮಂತು (65) ಸಾವಿಗೀಡಾದ ವ್ಯಕ್ತಿ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಆಯಂಬುಲೆನ್ಸ್ನಲ್ಲಿ ಕರೆದುಕೊಂಡು ಬರಲಾಗಿತ್ತು, ಆದರೆ ಆಸ್ಪತ್ರೆಯವರು ಇವರನ್ನು ತಕ್ಷಣಕ್ಕೆ ದಾಖಲಿಸಿಕೊಳ್ಳಲಿಲ್ಲ ಎನ್ನವ ಆರೋಪವಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ರೋಗಿಯನ್ನು ದಾಖಲಿಸಿಕೊಳ್ಳದ ಆಸ್ಪತ್ರೆ ಸಿಬ್ಬಂದಿ, ರೋಗಿಯೊಂದಿಗೆ ಬಂದವರನ್ನು ಸಹ ಓಡಾಡಿಸಿದ್ದಾರೆ. ಪರಿಣಾಮವಾಗಿ ರೋಗಿ ಆಯಂಬುಲೆನ್ಸ್ನಲ್ಲೇ ಉಸಿರಾಟಕ್ಕೆ ಪರದಾಡುವಂತಾಗಿತ್ತು.

ಅರ್ಧ ಗಂಟೆ ಬಳಿಕ ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ದಾಖಲಿಸಿಕೊಂಡಿದ್ದಾರೆ. ದಾಖಲಿಸಿಕೊಂಡ ತಕ್ಷಣ, ಮಾರ್ಗ ಮಧ್ಯದಲ್ಲಿ ರೋಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ಹನುಮಂತು ಅವರ ಪುತ್ರ ಆರೋಪಿಸಿದ್ದಾರೆ.

Varthajala Daily, Bengaluru

Post a Comment

0 Comments

Ad Code

Responsive Advertisement