Ticker

6/recent/ticker-posts

Ad Code

Responsive Advertisement

Breaking News: ಮೇಕೆದಾಟು 2ನೇ ಹಂತದ ಪಾದಯಾತ್ರೆ ಬಗ್ಗೆ ಡಿಕೆಶಿ ಚರ್ಚೆ; ಅಶ್ವತ್ಥ್ ನಾರಾಯಣ್ಗೆ ಬಿಸಿ ಮುಟ್ಟಿಸಲು ಮಹಾ ಪ್ಲಾನ್?

ಬೆಂಗಳೂರು, ಜ 17: ಮೇಕೆದಾಟು ಪಾದಯಾತ್ರೆ ಎರಡನೇ ಹಂತದ ಬಗ್ಗೆ ಡಿ.ಕೆ ಶಿವಕುಮಾರ್ ಅವರ ಪಕ್ಷದ ಹಿರಿಯರು, ಕಿರಿಯರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಚರ್ಚೆ ನಡೆಸಿದ್ದಾರೆ. ಬೆಂಗಳೂರು ಪಾದಯಾತ್ರೆ ರೂಟ್ ಮ್ಯಾಪ್ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಪದೇ ಪದೇ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿರುವ ಡಾ. ಅಶ್ವಥ್ ನಾರಾಯಣ್ಗೆ ಬಿಸಿ ಮುಟ್ಟಿಸಲು ಕೈ ಪಡೆ ಪ್ಲಾನ್ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಕೈ ಪಾದಯಾತ್ರೆ ಪ್ರವೇಶ ಕೊಡಲಿದೆ ಎಂದು ತಿಳಿದುಬಂದಿದೆ. ಈ ಹಿಂದಿನ ಪ್ಲಾನ್ನಲ್ಲಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಇರಲಿಲ್ಲ. ಈ ಬಾರಿ ಮಲ್ಲೇಶರ ವಿಧಾನಸಭಾ ಕ್ಷೇತ್ರವನ್ನೇ ಬೆಂಗಳೂರು ಪಾದಯಾತ್ರೆಯ ಕೇಂದ್ರ ಬಿಂದುವಾಗಿಸಲು ಡಿ.ಕೆ ಶಿವಕುಮಾರ್ ಯೋಜನೆ ರೂಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಕಾರ್ಯಕರ್ತರಿಗೂ ಹೊಸ ಹುರುಪು ನೀಡಿದಂತಾಗಲಿದೆ ಎಂಬುದು ಕೈ ಪಡೆಯ ಲೆಕ್ಕಾಚಾರವಾಗಿದೆ. ಈ ಹಿನ್ಬಲೆಯಲ್ಲಿ ಮಲ್ಲೇಶ್ವರ ಭಾಗದ ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ಬುಲಾವ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ರೂಟ್ ಮ್ಯಾಪ್ ತಯಾರಿಗೆ ಕೈ ನಾಯಕರು ಸಿದ್ದತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಲ್ಲೇಶ್ವರದ ಮನೆ ಮನೆಗೆ ಪಾಂಪ್ಲೆಟ್ ಕರಪತ್ರ ವಿತರಣೆಗೆ ಪ್ಲಾನ್ ಮಾಡಲಾಗಿದೆ. ಮಲ್ಲೇಶ್ವರದ ಸಂಘ ಸಂಸ್ಥೆಗಳ ಜೊತೆಯೂ ಸಭೆ ಸಾಧ್ಯತೆ ಇದೆ. ಮಲ್ಲೇಶ್ವರದಲ್ಲೇ ಪಾದಯಾತ್ರೆ ತಯಾರಿ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಕೊರೊನಾ ಅಬ್ಬರ ಕಡಿಮೆಯಾಗುತ್ತಿದ್ದಂತೆ ೨ನೆ ಹಂತದ ಪಾದಯಾತ್ರೆ ನಡೆಯಲಿದೆ ಎನ್ನಲಾಗಿದೆ. ಈ ಮೊದಲು ನಾಯಂಡಹಳ್ಳಿಯಿ0ದ ಪದ್ಮನಾಭನಗರ ಮಾರ್ಗ ನಿಗದಿಯಾಗಿತ್ತು, ಆದರೆ ಈಗ ಹೊಸ ರೂಟ್ ಮ್ಯಾಪ್ ಸಿದ್ಧಪಡಿಸಲು ಡಿಕೆಶಿ ಸೂಚನೆ ಕೊಟ್ಟಿದ್ದಾರೆ. ಒಂದು ದಿನ ಪೂರ್ಣ ಪ್ರಮಾಣದ ಪಾದಯಾತ್ರೆ ನಡೆಯಬೇಕು. ಆ ರೀತಿ ರೂಟ್ ಮ್ಯಾಪ್ ಸಿದ್ಧಪಡಿಸುವಂತೆ ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಅಶ್ವತ್ಥ್ ನಾರಾಯಣ ಸ್ವಕ್ಷೇತ್ರದಲ್ಲಿ ಸವಾಲು ಹಾಕಲು ಹಾಗು ಬಿಸಿ ಮುಟ್ಟಿಸಲು ಸಿದ್ಧತೆ ನಡೆಸಲಾಗಿದೆ.

Varthajala Daily, Bengaluru

Post a Comment

0 Comments

Ad Code

Responsive Advertisement