Ticker

6/recent/ticker-posts

Ad Code

Responsive Advertisement

"ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ" ಕೇಂದ್ರ ಕಚೇರಿ ಕಾರ್ಯಾರಂಭ

ಸನ್ಮಾನ್ಯ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ರಚಿಸಿದ್ದ, "ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ" ಕೇಂದ್ರ ಕಚೇರಿಯು ಬೆಂಗಳೂರಿನ ವಿಶ್ವೇಶ್ವರಯ್ಯ ಟವರ್ಸ್ ನಲ್ಲಿ ಕಾರ್ಯಾರಂಭ ಮಾಡಿದ್ದು,  ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ  ಬಿ.ವೈ.ವಿಜಯೇಂದ್ರ ರವರು ಪೂಜೆ ಹಾಗೂ ಉದ್ಘಾಟನೆಯಲ್ಲಿ ಪಾಲ್ಗೊಂಡರು, ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಮತ್ತು ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ನಿರ್ದೇಶಕರಾದ    ಎಸ್.ಲಿಂಗಮೂರ್ತಿ ರವರು ಪಾಲ್ಗೊಂಡು ಪೂಜೆ ಸಲ್ಲಿಸಿ, ನಿಗಮದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಮತ್ತು ಜನರಿಗೆ ತಲುಪಿಸುವ ಬಗ್ಗೆ, ಅಧ್ಯಕ್ಷರಾದ  ಬಿ.ಎಸ್.ಪರಮಶಿವಯ್ಯ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.





ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ  ಪ್ರಸನ್ನ, ನಿಗಮದ ನಿರ್ದೇಶಕರುಗಳಾದ   ಯು.ಬಿ.ಬಣಕಾರ್,ಡಾ:ಶ್ರೀಮತಿ ವಿಜಯಲಕ್ಷ್ಮಿ ಬಾಳೆಕುಂದ್ರಿ, ಶ್ರೀ ಮಹಾಂತೇಶ ಪಾಟೀಲ್, KRIDLಅಧ್ಯಕ್ಷರಾದ ಎಂ.ರುದ್ರೇಶ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement