Ticker

6/recent/ticker-posts

Ad Code

Responsive Advertisement

ಆರೋಗ್ಯದ ಬಗ್ಗೆ ಕಾಳಜಿ ಗ್ರಾಮ ಪಂಚಾಯಿತಿ ಅದ್ಯಕ್ಷೆ ಶ್ರೀಮತಿ ಅನಿತ ಲೋಕೇಶ್

ಮಧುಗಿರಿ:  ಮಹಾಮಾರಿ ಕೋವಿಡ್ ತಡೆ ಯುವ ಉದ್ದೇಶದಿಂದ ಗ್ರಾಮದ ನೈರ್ಮಲ್ಯ ಹಾಗು  ಸ್ವಚ್ಛತೆಗೆ ವಿಶೇಷ ಅಸಕ್ತಿ ಹೊಂದಿ ರುವುದಾಗಿ ಬೇಡತ್ತೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಶ್ರೀಮತಿ  ಅನಿತಲೋಕೇಶ್ ರವರು, ತಿಳಿಸಿದರು. 

 ಇವರು ಬೇಡತ್ತೂರು ಗ್ರಾಮ ಪಂಚಾಯಿತಿ ವತಿಯಿಂದ ಬೇಡತ್ತೂರು ಗ್ರಾಮ ಪಂಚಾಯಿತಿ  ವ್ಯಾಪ್ತಿಯ ಎಲ್ಲಾ ಗ್ರಾಮ ವಾರ್ಡಗಳಲ್ಲಿ,"ಕೀಟನಾಶಕ ಔಷಧಿ ಹಾಗು ಪೆನಾಯಲ್, DDT  ಪೌಡರ್ ಬಳಕೆ ಮಾಡಿ", ಗ್ರಾಮದ _ಚರಂಡಿ, ರಸ್ತೆ ಇಕ್ಕೆಲ, ಹಾಗು  ಶುದ್ದ ಕುಡಿಯುವ ನೀರಿನ ಘಟಕ, ಶಾಲೆ, ಅಂಗನವಾಡಿ, ಕೆರೆ ಮುಂಭಾಗ, ಹಾಗು ಪರಿಶಿಷ್ಟ ಕಾಲೋನಿಗಳಲ್ಲಿ ಹಾಗು ಜಾನುವಾರು ತೊಟ್ಟಿಗಳಲ್ಲಿ ಸೊಳ್ಳೆ ಹೆಚ್ಚುತ್ತಿದ್ದು, ಇದ್ದನ್ನು ಅರಿತ ಗ್ರಾಮ ಪಂಚಾಯಿತಿ ಅದ್ಯಕ್ಷರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮಂಗಳವಾರ ರಂದು   ಜನರ ಆರೋಗ್ಯ ಹಾಗು ಸ್ವಚ್ಛತೆಯ ದೃಷ್ಟಿಯಿಂದ,ಹಾಗು ಸಮಾಜದಲ್ಲಿ  ಹರಡುವ ಕೋವಿಡ್ ವೈರಸ್  ಹಾಗು ಇತೆರೆ ಸಾಂಕ್ರಾಮಿಕ ರೋಗಗಳು ತಡೆಯುವ ಉದ್ದೇಶ ದಿಂದ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಿ, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ. ಆರೋಗ್ಯಕರವಾದ ಉತ್ತಮ ಪರಿಸರ ನಿರ್ಮಾಣ ಮಾಡುವ ಕಾಳಜಿಯಿಂದ ಹಾಗು  ಜನರ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ, 2 ನೇಯ ಭಾರಿ ಗ್ರಾಮದಲ್ಲಿ "ಕೀಟನಾಶಕ ಔಷಧಿ ಹಾಗು ಪೆನಾಯಲ್, DDT  ಪೌಡರ್ ಬಳಕೆ ಮಾಡಿ, ಸ್ವಚ್ಛತೆ ಮಾಡ ಲಾಗಿದೆ ಎಂದು ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಶ್ರೀಮತಿ ಅನಿತ ಲೋಕೇಶ್ ರವರು  ತಿಳಿಸಿದರು. 




 ಗ್ರಾಮೀಣ ಜನರ ಅರೋಗ್ಯದ  ದೃಷ್ಟಿಯಿಂದ  ಪ್ರತಿಯೊಬ್ಬರೂ 15 ವರ್ಷ ಮೆಲ್ಪಟ್ಟವರು ಕಡ್ದಾಯವಾಗಿ ಲಸಿಕೆ ಪಡೆಯಬೇಕು, ಹಾಗು  ಪ್ರತಿಯೊಬ್ಬರು 2 ಡೋಸ್ ಕೋವಿಡ್ ಲಸಿಕೆ ಪಡೆಯ ಬೇಕೆಂದು, ಸಾರ್ವಜನಿಕರಲ್ಲಿ ಮನವಿ ಮಾಡಿದರು.  

ಈ ಸಂದರ್ಭದಲ್ಲಿ ಬೇಡತ್ತೂರು  ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಅದ್ಯಕ್ಷರು ಹಾಗು  ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸಂತೋಷ್ ಸಿಂಗ್  ಹಾಜರಿದ್ದರು.

Post a Comment

0 Comments

Ad Code

Responsive Advertisement