Ticker

6/recent/ticker-posts

Ad Code

Responsive Advertisement

ಕಲ್ಲು ಕ್ವಾರಿ ಮತ್ತು ಕ್ಷಷರ್ ಉದ್ಯಮದಿಂದ ಅನಗತ್ಯ ದಂಡ, ಅವೈಜ್ಞಾನಿಕ ತೀರ್ಮಾನಗಳನ್ನು ಪಾರದರ್ಶಕ ನಿಯಮ ಜಾರಿಗೆ ತರಬೇಕು

ಗಣಿಗಾರಿಕೆ ನಿಯಮ ಬದಲಾವಣೆ ಮಾಡದೇ ಹೋದರೆ ಗಣಿಗಾರಿಕೆ ಬಂದ್ ಮಾಡಿ ಪ್ರತಿಭಟನೆ

ಕಲ್ಲು ಕ್ವಾರಿ ಮತ್ತು ಕ್ಷಷರ್ ಉದ್ಯಮದ ಮೇಲೆ ಸರ್ಕಾರದಿಂದ ಗದಾ ಪ್ರಹಾರ: ಅವೈಜ್ಞಾನಿಕ ತೀರ್ಮಾನ ಹಿಂಪಡೆಯಿರಿ
- ಫೆಡರೇಷನ್ ಸ್ಟೋನ್ ಅಂಡ್ ಕ್ರಷರ್ ಅಸೋಸಿಯೇಷನ್ ಒತ್ತಾಯ
ಬೆಂಗಳೂರು, ಜ 19; ಕಲ್ಲು ಕ್ವಾರಿ ಮತ್ತು ಕ್ರಷರ್ ಉದ್ಯಮದ ಮೇಲೆ ರಾಜ್ಯ ಸರ್ಕಾರ ಗದಾ ಪ್ರಹಾರ ಮಾಡುತ್ತಿದ್ದು, ಅನಗತ್ಯ ದಂಡ, ಅವೈಜ್ಞಾನಿಕ ತೀರ್ಮಾನಗಳನ್ನು ರಾಜ್ಯ ಸರ್ಕಾರ ಹಿಂಪಡೆದು ಪಾರದರ್ಶನಕ ನಿಯಮಗಳನ್ನು ಜಾರಿಗೆ ತರಬೇಕು ಎಂದು ಫೆಡರೇಷನ್ ಸ್ಟೋನ್ ಅಂಡ್ ಕ್ರಷರ್ ಅಸೋಸಿಯೇಷನ್ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಕಲ್ಲು ಕ್ವಾರಿ ಮತ್ತು ಕ್ರಷರ್ ಉದ್ಯಮದಲ್ಲಿ ಸರ್ಕಾರದ ನಿರ್ಧಾರಗಳಿಂದಾಗಿ ಅರಾಜಕತೆ ಸೃಷ್ಟಿಯಾಗಿದೆ. ಇಲ್ಲಿ ಪಾರದರ್ಶಕ ಕಾನೂನುಗಳು, ಸೂಕ್ತ ನಿಯಮಗಳಿಲ್ಲ. ಕಳೆದ ಏಳು ವರ್ಷಗಳಿಂದ ಅನಗತ್ಯವಾಗಿ ಲೆಕ್ಕ ಪರಿಶೋಧನೆ ಮಾಡಲಾಗುತ್ತಿದೆ. ಕಾನೂನು ಬದ್ಧ ಗಣಿಗಾರಿಕೆ ನಡೆಸಲು ತೊಡಕಾಗಿದ್ದು, ಇನ್ಸ್ ಪೆಕ್ಟರ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಕಲ್ಲು ಕ್ವಾರಿ ಮತ್ತು ಕ್ರಷರ್ ಉದ್ಯಮವನ್ನು ಗುರಿಯಾಗಿಸಿಕೊಂಡು ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.  ಆದುದರಿಂದ ಈ ಬಗ್ಗೆ ನಾವು ಹಲವಾರು ಬಾರಿ ಮನವಿ ಸಲ್ಲಿಸುತ್ತಾ ಬಂದಿದ್ದರೂ, ತಮ್ಮ ಸಮ್ಮುಖದಲ್ಲಿ ಇಲಾಖಾ ಅಧಿಕಾರಿಗಳು ಮತ್ತು ಫೆಡರೇಷನ್‌ನ ಪದಾಧಿಕಾರಿಗಳ ಸಭೆಯನ್ನು ನಡೆಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ವ್ಯವಸ್ಥೆ ಆಗಿರುವುದಿಲ್ಲ. ಆದ್ದರಿಂದ ತ್ವರಿತವಾಗಿ ಈ ಬಗ್ಗೆ ಗಮನ ಹರಿಸಿ ವ್ಯವಸ್ಥೆಯಲ್ಲಿನ ಲೋಪ-ದೋಷಗಳನ್ನು ಇನ್ನು ಒಂದು ತಿಂಗಳ ಸರಿಪಡಿಸಬೇಕು ಇಲ್ಲದೇ ಹೋದರೆ 1ತಿಂಗಳ ನಂತರ ಗಣಿಗಾರಿಕೆ ಬಂದ್ ಮಾಡಿ ಉಗ್ರ ಹೋರಾಟ ಮಾಡುವುದಾಗಿ ಎಂದು ಹೇಳಿದರು.

ನಮ್ಮ ನ್ಯಾಯಯುತ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಉದ್ಯಮದ ನಿಯಮಗಳು, ಕಾನೂನುಗಳನ್ನು ಬದಲಾವಣೆ ಮಾಡುವ, ತಿದ್ದುಪಡಿ ಮಾಡಿ ಔದ್ಯಮಿಕ ವಲಯ ಕಾನೂನುಬದ್ಧವಾಗಿ ಬದಕುವ ಹಕ್ಕನ್ನು ಕಸಿದುಕೊಂಡಿದೆ. ಘನತೆ ಗೌರವದಿಂದ ಬದಕುವ ನಮ್ಮ ಹಕ್ಕನ್ನು ಸರ್ಕಾರ ಕಸಿಯುತ್ತಿದೆ. ನಮಗೆ ಅಕ್ರಮ ಗಣಿಗಾರಿಕೆ ಬೇಡ. ಕಾನೂನು ಬದ್ಧವಾಗಿ ಉದ್ಯಮದಲ್ಲಿ ತೊಡಗಿಕೊಂಡಿದ್ದರೂ ಸಹ ನಮಗೆ ಅನಗತ್ಯವಾಗಿ ನೋಟಿಸ್ ನೀಡಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.  

ನಮ್ಮ ಕಾನೂನು ಬದ್ಧ ಚಟುವಟಿಕೆಗಳನ್ನು ಅಕ್ರಮ ಗಣಿಗಾರಿಕೆ ಎಂದು ಬಿಂಬಿಸುವ ಪ್ರಯತ್ನಗಳಾಗುತ್ತಿವೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಲು ಸಮಗ್ರ ಕಾನೂನು ತಿದ್ದುಪಡಿ ತರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಗೌರವಾಧ್ಯಕ್ಷ ಡಿ. ಸಿದ್ದರಾಜು ಮಾತನಾಡಿ, ಸರ್ಕಾರದ ಹಾಲಿ ಉಪ ಖನಿಜ ನಿಯಮಗಳು ಅಸ್ಪಷ್ಟವಾಗಿವೆ. ಅವೈಜ್ಞಾನಿಕ ಮತ್ತು ಲೋಪಗಳಿಂದ ಕೂಡಿದ್ದು, ನಿಯಮಾನುಸಾರ ಗಣಿಗುತ್ತಿಗೆ ಪಡೆದು ಸಕ್ರಮ ಗಣಿ ಕಾರ್ಯ ನಡೆಸುತ್ತಿರುವ ಗಣಿಗುತ್ತಿಗೆದಾರನ್ನು ಗುರಿಯಾಗಿಸಿಕೊಂಡು ನಮ್ಮ ಮೇಲೆ ಐದು ಪಟ್ಟು ದಂಡ ವಿಧಿಸಲಾಗುತ್ತಿದೆ. ಜತೆಗೆ ಅನಧಿಕೃತ ಗಣಿಗಾರಿಕೆಯ ಆರೋಪ , ಮುಂತಾದ ಎಲ್ಲ ರೀತಿಯ ಒತ್ತಡ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದರು.

ಸರ್ಕಾರ ಎರಡು ಕಡೆಗಳಲ್ಲಿ ರಾಜಧನ ಪಡೆಯುತ್ತಿದೆ. ಒಂದು ಕಡೆ ರಾಯಲ್ಟಿ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಸರ್ಕಾರ ಒಂದು ಕಡೆ ಪರಿಸರ ಸಂರಕ್ಷಣೆ ಮಾಡಿ ಎಂದು ಹೇಳುತ್ತಿದೆ. ಮತ್ತೊಂದೆಡೆ ಮರಳು ಗಣಿಗಾರಿಕೆಗೆ ಆದ್ಯತೆ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಮರಳು ಮಾರಾಟದಿಂದ ಅಂತರ್ಜಲ ಬರಿದಾಗುತ್ತದೆ ಎಂದರು.


ಈ ಉದ್ಯಮದಲ್ಲಿ ಪ್ರತ್ಯಕ್ಷವಾಗಿ 25 ರಿಂದ 30 ಸಾವಿರ ನೇರವಾಗಿ ತೊಡಗಿಕೊಂಡಿದ್ದು, ಪರೋಕ್ಷವಾಗಿ ನಾಲ್ಕರಿಂದ ಐದು ಪಟ್ಟು ಇದೆ. ಕೊರೋನಾ ಸಂದರ್ಭದಲ್ಲಿ ಕಾರ್ಮಿಕರನ್ನು ನಾವೇ ಸಂರಕ್ಷಿಸುತ್ತಿದ್ದೇವೆ. ನ್ಯಾಯಬದ್ಧವಾಗಿ ಮಾಡಿಕೊಟ್ಟರೆ ನಾವು ಮಾಡಬಹುದು. ನಿರ್ದಿಷ್ಟವಾಗಿ ಕ್ರಷರ್ ಇಟ್ಟುಕೊಂಡವರಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಉಪಾಧ್ಯಕ್ಷ ಕಿರಣ್ ಜೈನ್ ಮಾತನಾಡಿ, ಕ್ರಷರ್ ಘಟಟಕಗಳಿಗೆ ಸಂಬಂಧಿಸದಂತೆ 2020ರಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಕ್ರಷರ್ ಪರವಾನಗಿ ಅವಧಿಯನ್ನು 20 ವರ್ಷಗಳಿಗೆ ವಿಸ್ತರಿಸಿ ಆದೇಶಿಸಿದ ಕ್ರಮವನ್ನು ರಾಜ್ಯಸಂಘ ಸ್ವಾಗತಿಸಿ ಅಭಿನಂದಿಸುತ್ತದೆ. ಬ್ಲಾಸ್ಟಿಂಗ್ ಕಾರ್ಯಾಚರಣೆಗಾಗಿ ಅನುಮತಿ ನೀಡುವಲ್ಲಿ ಉಂಟಾಗಿರುವ ವಿಳಂಬದಿಂದಾಗಿ ಕಟ್ಟಡಕಲ್ಲು ಗಣಿಗಾರಿಕೆಯನ್ನು ಹಲವೆಡೆ ಸ್ಥಗಿತಗೊಳಿಸಲಾಗುತ್ತಿದೆ. ಆದ್ದರಿಂದ ಕಟ್ಟಡಕಲ್ಲು ಉತ್ಪಾದನೆ ಮತ್ತು ಕಾಮಗಾರಿಗಳಿಗೆ ಸರಬರಾಜು ಕುಂಠಿತಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.

*ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಆಸೋಸೀಯೇಷನ್ ವತಿಯಿಂದ ಸಭೆ .ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ಗೌರವಾಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಉಪಾಧ್ಯಕ್ಷ ಬಿ.ಆರ್. ಕಿರಣ್ ಜೈನ್, ಸಂಘಟನಾ ಕಾರ್ಯದರ್ಶಿನಾರಾಯಣಬಾಬು ,ಉಪಸ್ಥಿತರಿದ್ದರು*.

ಅವೈಜ್ಞಾನಿಕ ನಿಯಮಗಳಿಂದ ಆಗುತ್ತಿರುವ ತೊಂದರೆಗಳು:
1 ಸರ್ಕಾರಿ ಕಾಮಗಾರಿ ನಿರ್ವಹಣಾ ಇಲಾಖೆಗಳಲ್ಲಿ ಮತ್ತು ಕಟ್ಟಡಕಲ್ಲು ಗಣಿಗುತ್ತಿಗೆದಾರರಲ್ಲಿ ಹೀಗೆ ಎರಡು ಕಡೆ ರಾಜಧನ ಪಾವತಿ ವ್ಯವಸ್ಥೆ ಮಾಡಿರುವುದರಿಂದ ರಾಜಧನ ಪಾವತಿ ವ್ಯವಸ್ಥೆ ಗೊಂದಲಮಯವಾಗಿರುತ್ತದೆ.
2 ಗಣಿ ಪ್ರದೇಶದ ವಾರ್ಷಿಕ ಲೆಕ್ಕ ಪರಿಶೋಧನೆ ವ್ಯವಸ್ಥೆ ಅಸಮರ್ಪಕವಾಗಿದೆ.
3 ಕಲ್ಲುಗಣಿ ಗುತ್ತಿಗೆ ಕೋರಿ ಕಾನೂನುಬದ್ಧವಾಗಿ ನೀಡಿರುವ ಅರ್ಜಿಗಳು ಕೂಡ ಮಂಜೂರಾತಿ ನೀಡದೆ ಬಾಕಿ ಇರುತ್ತದೆ.


Post a Comment

0 Comments

Ad Code

Responsive Advertisement