ನಮಸ್ತೆ ಪ್ರಿಯ ಕನ್ನಡ ಬಂಧುಗಳೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ದಿನಾಂಕ: 2022 ಜನವರಿ 20 ನೇ ಗುರುವಾರ ಬೆಳಗ್ಗೆ 10:00 ಗಂಟೆಯಿಂದ 21ನೇ ಶುಕ್ರವಾರ ಸಂಜೆ 4:30 ರವರೆಗೆ ಎರಡು ದಿನಗಳ ಕಾಲ " ಕನ್ನಡ ಕಾವ್ಯ ಕಮ್ಮಟ ಮತ್ತು ಕನ್ನಡ ಜಾಗೃತಿ ಶಿಬಿರ " ವನ್ನು ಬೆಂಗಳೂರಿನ ಗಾಂಧೀ ಭವನದಲ್ಲಿ ಯುವ ಬರಹಗಾರ್ತಿಯರಿಗೆ ಮತ್ತು ಕನ್ನಡ ಸಾಹಿತ್ಯಾಸಕ್ತ ಕಾಲೇಜು ವಿದ್ಯಾರ್ಥಿನಿಯರಿಗೆ ಆಯೋಜಿಸಲಾಗಿದೆ.
ಕನ್ನಡ ಕಾವ್ಯದ ಓದು, ಗ್ರಹಿಕೆ, ಬರಹದ ಹಿನ್ನೆಲೆಯಲ್ಲಿ ಪ್ರಸಿದ್ಧ ಸಾಹಿತಿಗಳು,ವಿದ್ವಾಂಸರಿಂದ ಉಪನ್ಯಾಸ ಮತ್ತು ಶಿಬಿರಾರ್ಥಿಗಳೊಂದಿಗೆ ಸಂವಾದವಿರುತ್ತದೆ. ಪ್ರಮಾಣ ಪತ್ರ, ಬ್ಯಾಗ್, ಪುಸ್ತಕ ಉಡುಗೊರೆ, ಉತ್ತಮ ಕವಿತೆ ಬರೆದವರಿಗೆ ಮತ್ತು ಶಿಬಿರಾರ್ಥಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು. ಆಸಕ್ತರು ಇದೇ 15 ನೇ ತಾರೀಖಿನೊಳಗೆ ಹೆಸರು ನೋಂದಾಯಿಸಿಕೊಂಡು ಭಾಗವಹಿಸಲು ಕೋರಲಾಗಿದೆ.. ಹೆಚ್ಚಿನ ವಿವರಗಳಿಗೆ
ವಾಟ್ಸಪ್ ಮೊ: 9448880985, 7411180985 , ಕಾರ್ಯಕ್ರಮ ಆಯೋಜಕರು: ಡಾ.ಸಿಸಿರಾ, ಅಧ್ಯಕ್ಷರು, ಬಿಬಿಜಿಎಸ್.ಟ್ರಸ್ಟ್.
0 Comments