Ticker

6/recent/ticker-posts

Ad Code

Responsive Advertisement

ಸಕಾಲಕ್ಕೆ ಚಿಕಿತ್ಸೆ ಸಿಗದೇ ಕೃಷ್ಣಮೃಗ ಸಾವು....!!!

 ಮಧುಗಿರಿ:ಎರಡು ಕೃಷ್ಣಮೃಗಗಳ ನಡುವೆ ಕಾದಾಟ ವಾಗಿ ಗಾಯ ಮಾಡಿಕೊಂಡಿದ್ದ ಕೃಷ್ಣಮೃಗ ವೊಂದು ಸಕಾಲಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ.



 ತಾಲೂಕಿನ ಐಡಿಹಳ್ಳಿ ಹೋಬಳಿಯ ಜನಕಲೋಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಕೃಷ್ಣಮೃಗ ಒಂದು ಕಾಲಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯ ಮಾಡಿಕೊಂಡು ರಕ್ತಸ್ರಾವ ವಾಗಿರುವುದನ್ನು ಗಮನಿಸಿದ ರಾಜಮೋಹನ್, ಲಕ್ಷ್ಮೀನಾರಾಯಣ ಹಾಗೂ ಜಲಾಲ್ ಪಾಷಾ ಗ್ರಾ.ಪಂ ಸದಸ್ಯ ರವಿಕುಮಾರ್, ನಾಗ ಕೃಷ್ಣಯ್ಯ ಲಕ್ಷ್ಮಿಪತಿ ಮತ್ತು ಶಹಜಹಾನ್ ಎಂಬುವವರು ತಕ್ಷಣ ಅರಣ್ಯ ಇಲಾಖಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ ಅಧಿಕಾರಿಗಳು ಸಕಾಲಕ್ಕೆ ಬಾರದೆ ತುಂಬಾ ತಡವಾಗಿ ಬಂದಿದ್ದರಿಂದ ಕೃಷ್ಣಮೃಗ ಸಾವನ್ನಪ್ಪಿದೆ ಎಂದು ಐಡಿಹಳ್ಳಿ ಜಲಾಲ್ ಪಾಷಾ ಹಾಗೂ ದೊಡ್ಡ ಯಲ್ಕೂರ್ ಲಕ್ಷ್ಮಿಪತಿ ದೂರಿದ್ದಾರೆ.

ವರದಿ:ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement