Ticker

6/recent/ticker-posts

Ad Code

Responsive Advertisement

ಶಿವಕುಮಾರ ಸ್ವಾಮೀಜಿ ,ಬಾಲಗಂಗಾಧರನಾಥ ಸ್ವಾಮೀಜಿ ಸಮಾಜದ 2 ಕಣ್ಣುಗಳು ಇದ್ದಂತೆ*

 *ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ,ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಸಮಾಜದ ಎರಡು ಕಣ್ಣುಗಳು ಇದ್ದಂತೆ*

*ಅನ್ನ ,ಅಕ್ಷರ ,ಆಶ್ರಯದ ಮಹತ್ವವನ್ನು ವಿಶ್ವಕ್ಕೆ ಸಾರಿದ ಸಂತರು-ಸಚಿವ ವಿ.ಸೋಮಣ್ಣ* 
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಶ್ರೀ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಜಯಂತ್ಯುತ್ಸವ ಕಾರ್ಯಕ್ರಮ ಬಿ.ಜಿ.ಎಸ್.ಕ್ರೀಡಾಂಗಣ ಅವರ ಣದಲ್ಲಿ ಆಯೋಜಿಸಲಾಗಿತ್ತು .
ಶ್ರೀ ಶ್ರೀ ಶ್ರೀ ಬಾಲಗಂಗಾಥರನಾಥ ಸ್ವಾಮೀಜಿ ಪ್ರತಿಮೆ ಪುಷ್ಪನಮನ ಮತ್ತು ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಶಿವಾನುಭವ ಚರಮೂರ್ತಿ ಪೂಜ್ಯ ಶ್ರೀ ಶಿವರುದ್ರ ಮಹಾ ಸ್ವಾಮೀಜಿ ,ಬೇಲಿ ಮಠ ಮತ್ತು ಅದಿ ಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿರವರು ವಸತಿ ಸಚಿವರಾದ ವಿ.ಸೋಮಣ್ಣರವರು ,
ತೋಟಗಾರಿಕೆ ಸಚಿವರಾದ ಮುನಿರತ್ನ ರವರು ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಸೋಮಣ್ಣ ,ಮಾಜಿ ವಿಧಾನಪರಿಷತ್ ಸದಸ್ಯರಾದ ಅಶ್ವಥ್ ನಾರಾಯಣ್ ,ರಾಜ್ಯ ಬಿ.ಜೆ.ಪಿ.ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣ ,ಕೋಶಾಧ್ಯಕ್ಷ ಡಾ||ನವೀನ್ ಸೋಮಣ್ಣ ,ಕನ್ನಡ ಪರ ಹೋರಾಟಗಾರ ಪಾಲನೇತ್ರ ,ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿ ,ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು.

ವಿಜಯನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ಟಿ.ವಿ.ಕೃಷ್ಣ ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಗಂಗಭೈರಯ್ಯ ವಾಗೇಶ್ ,ಮೋಹನ್ ಕುಮಾರ್ ,ದಾಸೇಗೌಡ ,ಶಿಲ್ಪ ಶೀಧರ್ ,ರೂಪಲಿಂಗೇಶ್ವರ್ ಸವಿತಾ ಕೃಷ್ಣ ,ರಾಜೇಶ್ವರಿ ,ರವರು ಪಾಲ್ಗೊಂಡಿದ್ದರು 


*ಬೇಲಿಮಠ ಶಿವರುದ್ರ ಸ್ವಾಮೀಜಿ ರವರು* ಮಾತನಾಡಿ ಗುರುಗಳ ಬಳಿ ಸೇವಾ ಮನೋಭಾವನೆಯಿಂದ ಸಮರ್ಪಣೆ ಮಾಡಿದವರಿಗೆ ಗುರುಗಳ ಸಂಪೂರ್ಣ ಆಶೀರ್ವಾದ ಲಭಿಸುತ್ತದೆ .ನಾನು ಎಂಬುದು ಬಿಟ್ಟಾಗ ಸಮಾಜದ ಅಭಿವೃದ್ದಿ ಸಾಧ್ಯ .
ಸುಮ್ಮನೆ ಕುಳಿತಕೊಳ್ಳಬೇಡಿ ,ಸಮಾಜದ ಅಭಿವೃದ್ದಿಗೆ ಶ್ರಮವಹಿಸಬೇಕು ಎಂಬ ಆದೇಶವನ್ನು ನೀಡಿದಂತ ದಿನವಿದು .ಕಾಶಿಯಲ್ಲಿ ಅದಿ ಚುಂಚನಗಿರಿ ಮಠ ಸ್ಥಾಪಿಸಿದರು.
ಕನ್ನಡ ನಾಡಿನ ಪರಂಪರೆ ಸಂಸ್ಕೃತಿ ಬೆಳಸಿದ ಮಹಾನ್ ಸಂತರು ಬಾಲಗಂಗಾಧರನಾಥ ಸ್ವಾಮೀಜಿಗಳು.
ಅಪಾರವಾದ ಪರಿಸರ ಕಾಳಜಿವುಳ್ಳವರು .
ಮನುಷ್ಯ ಅಸಾಧ್ಯವಾದ ಕೆಲಸ ಮಾಡಲು ಗುರುಗಳ ಮುಂದೆ ಕುಳಿತು ಧ್ಯಾನ ಮಾಡಿದರೆ ಸಾಕು ಸುಲಭ ಕೆಲಸ ಸಾಧ್ಯವಾಗುತ್ತದೆ.
ಬಾಲಗಂಗಾಧರನಾಥ ಸ್ವಾಮೀಜಿ ನೀಡಿದ ಸಂದೇಶವನ್ನು ಹೊತ್ತು ಉತ್ತಮ ಜೀವನದತ್ತ ಸಾಗೋಣ ಎಂದು ಹೇಳಿದರು. 

*ಸೌಮ್ಯ ನಾಥ ಸ್ವಾಮೀಜಿರವರು* ಮಾತನಾಡಿ ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿರವರು ಸಮಾಜ ಸುಧಾರಣೆ ,ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಕೊಡುಗೆ ನೀಡಿದ್ದಾರೆ.
ಬಾಲಗಂಗಾಧರನಾಥ ಸ್ವಾಮೀಜಿ ಜಾತಿ ,ಮತ,ಪಂಥಗಳನ್ನು ನೋಡದೇ ಸಮಾಜಕ್ಕೆ ಸೇವೆ ಸಲ್ಲಿಸಿದರನ್ನು ಗುರುತಿಸಿ ಪ್ರೋತ್ಸಹ ನೀಡುತ್ತಿದ್ದರು.

*ಸಚಿವ ವಿ.ಸೋಮಣ್ಣರವರು* ಮಾತನಾಡಿ ನನ್ನ ಜೀವನಕ್ಕೆ ಶಕ್ತಿ ಕೊಟ್ಟವರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರು ,ಶಾಸಕನಾಗಿ ,ಮಂತ್ರಿಯಾಗಿ ಸಮಾಜ ಸೇವೆ ಸಲ್ಲಿಸಲು ಪೇರಣೆ ನೀಡಿದವರು ಬಾಲಗಂಗಾಧರನಾಥ ಸ್ವಾಮೀಜಿ.
ನಡೆದಾಡುವ ದೇವರು ಶ್ರೀ ಶಿವಕುಮಾರಸ್ವಾಮೀಜಿಗಳು  ,ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನನಗೆ ಎರಡು ಕಣ್ಣುಗಳು ಇದ್ದಂತೆ .
29ವರ್ಷಗಳಿಂದ ಪಾಳುಬಿದ್ದ ಜಾಗವನ್ನು ಸುಂದರವಾದ ಬಿ.ಜಿ.ಎಸ್.ಕ್ರೀಡಾಂಗಣ ಮಾಡಲು ಬಾಲಗಂಗಾಧರನಾಥ ಸ್ವಾಮೀಜಿ ಆಶೀರ್ವಾದ ಕಾರಣ .
1999ರಲ್ಲಿ ಸರ್ಕಾರ ಮಠದ ಕಾಯಿದೆ ತರಲು ಪ್ರಯತ್ನ ಮಾಡಿದರು ಆಗ ಬಾಲಗಂಗಾಧರನಾಥ ಸ್ವಾಮೀಜಿ ಮಠಗಳ ಅಭಿಪ್ರಾಯ ಸಂಗ್ರಹ ಮಾಡಿ ಎಂದು ನನಗೆ ಆದೇಶ ನೀಡಿದರು .ಸಾವಿರಾರು ಮಠಾಧಿಶರು ಮಸೂದೆಯನ್ನು ವಾಪಸ್ಸು ಪಡೆಯಬೇಕು ಎಂದು  ಒತ್ತಾಯಕ್ಕೆ ಮಣಿದ ಸರ್ಕಾರ ಕಾಯಿದೆ ಹಿಂಪಡೆಯಲಾಯಿತು .
ಅನ್ನ, ಅಕ್ಷರ ,ಆಶ್ರಯ ಕೋಟ್ಯಂತರ ಜನಕ್ಕೆ ನೀಡಿದ ಶಿವಕುಮಾರ ಸ್ವಾಮೀಜಿ ,
ಬಾಲಗಂಗಾಧರನಾಥ ಸ್ವಾಮೀಜಿ ಇಬ್ಬರು ದೇವರ ಸಮಾನ ,ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ.
ಬಾಲಗಂಗಾಧರನಾಥ ಸ್ವಾಮೀಜಿರವರ ಮಾರ್ಗದರ್ಶನದಿಂದ ದೀಪಾಂಜಲಿನಗರ ಸ್ಲಂ ಅಭಿವೃದ್ದಿ ,ಬಾಳಯ್ಯನ ಕೆರೆ ಸಂಕ್ಷರಣೆ ಮಾಡಲಾಯಿತು.
ಬಾಲಗಂಗಾಧರನಾಥ ಸ್ವಾಮೀಜಿರವರ ನೇತೃತ್ವದಲ್ಲಿ 2ಕೋಟಿ ಸಸಿ ನೆಡುವ ಕಾರ್ಯಕ್ರಮ .
ಜಾತಿ ,ಮತ ,ಪಂಥ ದಾಟಿ ನಾಡಿನ ಸೇವೆ ಮಾಡಿದ ಸಂತ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಎಂದು ಹೇಳಿದರು.

*ಸಚಿವರಾದ ಮುನಿರತ್ನರವರು* ಮಾತನಾಡಿ  ಜಗತ್ತಿನಲ್ಲಿ ಹುಟ್ಟುವುದು ಸಹಜ ,ಅದರೆ ಕೆಲವು ಜನರು ಮಾತ್ರ ತಮ್ಮ ಸಾಧನೆ ಹೆಜ್ಜೆ ಗುರುತು ಬಿಟ್ಟು ಹೋಗಿರುತ್ತಾರೆ .
ಅನ್ನ ದಾಸೋಹ ,ಶಿಕ್ಷಣದಲ್ಲಿ ಕ್ರಾಂತಿ ತಂದ ಮಹಾನ್ ಸಂತರು ಎಂದರೆ ಬಾಲಗಂಗಾನಾಥಸ್ವಾಮೀಜಿ ಮತ್ತು ಶಿವಕುಮಾರ ಸ್ವಾಮೀಜಿಗಳು ಅವರ ಮಾಡಿದ ಉತ್ತಮ ಕೆಲಸಗಳು ಸರ್ಕಾರ ಸಹ ಮಾಡಲು ಸಾಧ್ಯವಿಲ್ಲ .ಇಂತಹ ಪುಣ್ಯಪುರುಷರು ನೋಡಿದ ಪುಣ್ಯತ್ಮರು ನಾವುಗಳು ಎಂದು ಹೇಳಿದರು.

Post a Comment

0 Comments

Ad Code

Responsive Advertisement