ಮಧುಗಿರಿ :ಭಾನುವಾರ ಶಾಲೆಗೆ ಬಿಡುವಿದ್ದ ಕಾರಣ ಫಣೀಂದ್ರನಾಧ್ ಹಾಗೂ ಇಂದ್ರಮ್ಮ ಶಿಕ್ಷಕ ದಂಪತಿ.. ಹಾಗು ಮಕ್ಕಳಾದ ಸಿರಿ ಕಲ್ಯಾಣ್.ರವರು ಮಧುಗಿರಿ ಪಟ್ಟಣದ ಟಿವಿವಿ ಕಾಲೇಜು ಸರ್ಕಲ್ ಬಳಿಯ ರಸ್ತೆಯ ಉಬ್ಬು ತಗ್ಗುಗಳನ್ನು ಸರಿಪಡಿಸುವ ಸಾಮಾಜಿಕ ಸೇವೆ ಮಾಡಿದರು
ಇತ್ತೀಚೆಗೆ ಮಧುಗಿರಿ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಒಂದು ಟ್ರ್ಯಾಕ್ಟರ್ ಲೋಡ್ ಮಣ್ಣು ಒಂದೇ ಕಡೆ ಹಾಕಿ ಹರಡದೆ ಇರುವ ತಪ್ಪಿನ ಕಾರಣ ವಾಹನ ಸವಾರರಿಗೆ ತೊಂದರೆಯಾಗಿದ್ದ ಹಿನ್ನೆಲೆಯಲ್ಲಿ ಶಿಕ್ಷಕ ದಂಪತಿ ಫಣೀಂದ್ರನಾಧ್ ಇಂದ್ರಮ್ಮ ರಸ್ತೆ ಗುಂಡಿ ಸರಿಪಡಿಸಿದರು. ಅವರಿಗೆ ಕಾಲೇಜು ವಿದ್ಯಾರ್ಥಿಗಳು ಸಹಕರಿಸಿದರು. ನಿಜಕ್ಕೂ ಸಂತೋಷವಾಯಿತು.. ...
ನಿಜಕ್ಕೂ ಪ್ರತಿಯೊಂದು ಸಣ್ಣ ಕೆಲಸಕ್ಕೂ ಸರ್ಕಾರ ವನ್ನು ಕಾಯದೆ ನಿಂದಿಸದೆ.. ನಮ್ಮ ಕೆಲಸ ನಾವು ಮಾಡಿಕೊಂಡ ಸಂತಸ ಈ ಶಿಕ್ಷಕ ದಂಪತಿಗಳದ್ದು.
ವರದಿ: ನಾಗೇಶ್ ಜೀವಾ ಮಧುಗಿರಿ
0 Comments