Ticker

6/recent/ticker-posts

Ad Code

Responsive Advertisement

ಅವಧಿ ಪೂರ್ಣಗೊಳಿಸಿದ ಶಾಸಕರುಗಳಿಗೆ ಶುಭ ಹಾರೈಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಸದನದಲ್ಲಿ ಕಲಾಪಗಳು ನಡೆಯುವ ಸಮಯದಲ್ಲಿ ಸರ್ಕಾರಕ್ಕೆ  ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ ಸದನದ ಘನತೆ ಕಾಪಾಡಬೇಕು ಎಂದು ವಿಧಾನ ಪರಿಷತ್ತಿನ ಶಾಸಕರಿಗೆ, ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ತಿಳಿಸಿದರು.


ಇಂದು ವಿಕಾಸಸೌಧದಲ್ಲಿ  4ನೇ ಮಹಡಿಯ ಕೊಠಡಿ ಸಂಖ್ಯೆ 419ರಲ್ಲಿ ಹಮ್ಮಿಕೊಳ್ಳಲಾಗಿದ್ದ, ಅವಧಿ ಪೂರ್ಣಗೊಳಿಸದ 25 ವಿಧಾನ ಪರಿಷತ್ತಿನ ಶಾಸಕರುಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮಿತ ಶಾಸಕರುಗಳಿಗೆ ಶುಭ ಹಾರೈಸಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿಗಳು, ಸ್ವ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಆಳವಡಿಸಿಕೊಂಡಿದ್ದಂತಹ Dual camera system, Two Camera system   ಉಭಯ ಸದನಗಳ ವ್ಯವಸ್ಥೆಯನ್ನು ಸ್ವಾತಂತ್ರ್ಯ ಪಡೆದ ನಂತರ ಪ್ರಜಾಪ್ರಭುತ್ವದಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ಸಲುವಾಗಿ ಸಂವಿಧಾನದಲ್ಲಿ ನಾವು ಸಹ ಅಳವಡಿಸಿಕೊಂಡು ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಸದನಗಳ ಮುಂದಿಡುವ ಕರಡು ಮಸೂದೆಗಳ (Billsಬಗ್ಗೆ ಮಹತ್ವವಾದ ಚರ್ಚೆ ನಡೆಸಿ, ಅದರ ಬಗ್ಗೆ ವಿವಿಧ ದೃಷ್ಠಿಕೋನಗಳಲ್ಲಿ ಯೋಚಿಸಿ, ಸರ್ಕಾರವು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುವಂತಹ ಮಾರ್ಗದರ್ಶನ ನೀಡುವುದು ಸದನಗಳ ಕರ್ತವ್ಯವಾಗಿದೆ. ಸದನದಲ್ಲಿ ಶಿಕ್ಷಣ ಕೇತ್ರ, ಗ್ರಾಮೀಣಾಭಿವೃದ್ಧಿ ಕ್ಷೇತ್ರ, ನಗರಾಭಿವೃದ್ಧಿ, ಕಂದಾಯ, ಇಂದನ ಯಾವುದೇ ಕ್ಷೇತ್ರದಲ್ಲಿ ಇರುವಂತಹ ಜ್ವಲಂತ ಸಮಸ್ಯೆಗಳ ಬಗೆಗೆ ವಿವಿಧ ಪರಿಣಿತರು ಸದನದಲ್ಲಿ ಸವಿಸ್ತಾರವಾಗಿ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ. ಅದೇ ರೀತಿ ಸದನದ ಗೌರವವನ್ನು ಸಹ ಎತ್ತಿ ಹಿಡಿದಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.  

ವಿಧಾನ ಸಭೆಯಲ್ಲಿ ಚರ್ಚೆಯಾಗುವ ವಿಷಯಗಳು ವಿಧಾನ ಪರಿಷತ್ತಿನಲ್ಲಿಯೂ ಸಹ ಚರ್ಚೆಯಾಗುತ್ತವೆ. ಚರ್ಚೆಯಾಗುವ ಸಮಯದಲ್ಲಿ ಆಯಾ ವಿಷಯಗಳ ಬಗ್ಗೆ ಸಿಂಹಾವಲೋಕನ, ಅತ್ಮಾವಲೋಕನ ಆಗುವಂತಹದ್ದು ವಿಧಾನ ಪರಿಷತ್ತಿನಲ್ಲಿ ಮಾತ್ರ. ಯಾವುದೇ ವಿಷಯವಿರಲಿ ವಿಧಾನ ಪರಿಷತ್ತಿನಲ್ಲಿ ಅದರ ಬಗ್ಗೆ ಮಹತ್ತರ ಚರ್ಚೆಯಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜನ ಪ್ರತಿನಿಧಿಗಳಾದ ನಾವು ಜನರ ಸಮಸ್ಯೆಗಳನ್ನು ಆಲಿಸಿ, ಕಷ್ಟಗಳಿಗೆ ಸ್ಪಂಧಿಸಿ ಕೆಲಸಗಳನ್ನು ನಿರ್ವಹಿಸಿ, ಅವರ ಪ್ರೀತಿ ಪಾತ್ರರಾಗಬೇಕು. ಅದನ್ನು ನಾವು ಅನುಸರಿಸಿ ಕಾಪಾಡಿಕೊಂಡು ಹೋದಾಗ ಮಾತ್ರ ರಾಜಕಾರಣದಲ್ಲಿ ಒಳ್ಳೆಯ ನೆಲೆ ಇರುತ್ತದೆ. ಇಂದು ಬೀಳ್ಕೊಡುಗೆ ಪಡೆಯುತ್ತಿರುವ ಶಾಸಕರು ರಾಜಕಾರಣದಿಂದ ಎಂದಿಗೂ ನಿರ್ಗಮಿಸುತ್ತಿಲ್ಲ. ಅವಧಿ ಮುಗಿಸಿದ್ದರೂ ಸಹ ಸಕ್ರಿಯವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು, ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕು. ರಾಜಕಾರಣದಲ್ಲಿ ಎಂದಿಗೂ ನಿವೃತ್ತಿ ಇಲ್ಲ ಸ್ಪರ್ಧೆ ಇದೆ. ಅದನ್ನು ಉಳಿಸಿಕೊಳ್ಳಲು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿ, ಜನರ ಹೃದಯದಲ್ಲಿ ಸ್ಥಾನ ಪಡೆಯಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಯಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಾನೂ ಸಹ ವಿಧಾನ ಪರಿಷತ್ತಿನಿಂದಲೇ ನನ್ನ ರಾಜಕೀಯ ಜೀವನ ಪ್ರಾರಂಭಿಸಿದ್ದು, ವಿಧಾನ ಪರಿಷತ್ತಿನಿಂದ ಬಹಳಷ್ಟು ಕಲಿತ್ತಿದ್ದೇನೆ. ಎಲ್ಲರಿಗೂ ಒಳ್ಳೆಯ ಅವಕಾಶಗಳಿವೆ, ಅವುಗಳು ಬೇರೆ ಬೇರೆ ರೂಪದಲ್ಲಿ ದೊರೆಯಲಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿಯವರು ಮಾತನಾಡಿ, ನಾನು ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಇಂತಹ ಯಾವುದೇ ಬೀಳ್ಕೊಡುಗೆ ಸಮಾರಂಭಗಳನ್ನು ಹಮ್ಮಿಕೊಳ್ಳುತ್ತಿರಲಿಲ್ಲ. ನನ್ನನ್ನು ಭೇಟಿ ಮಾಡಲು ಕಚೇರಿಗೆ ಬಂದಂತಹ ಶಾಸಕರಿಗೆ ಶುಭ ಕೋರಿ ಕಳುಹಿಸುತ್ತಿದ್ದೆ. ಆದರೆ ಇಂದು ಇಂತಹ ಒಂದು ಸಮಾರಂಭ ಏರ್ಪಡಿಸಿರುವುದು ಸಂತೋಷ ತಂದಿದೆ.

ಜೀವನದಲ್ಲಿ ಸಿಹಿ ಘಟನೆ, ಕಹಿ ಘಟನೆಗಳು ಬರುತ್ತಲೇ ಇರುತ್ತವೆ. ಯಾವಾಗಲೂ ಕಹಿ ಘಟನೆಗಳನ್ನು ನೆನಪಿಸಿಕೊಳ್ಳದೇ ಸಿಹಿ ಘಟನೆಗಳನ್ನೇ ನಾವು ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ನಮ್ಮ ಅವಧಿಯಲ್ಲಿ ಗಂಗೂಬಾಯಿ ಹಾನಗಲ್, ಎಂ.ಸಿ ಮೋದಿ ಅವರು ಇದ್ದರು ಅಂತಹವರ ಜೊತೆಯಲ್ಲಿ ಕಾರ್ಯ ನಿರ್ವಹಿಸಿದ್ದು ನನಗೆ ಹೆಮ್ಮೆ ಅನಿಸುತ್ತದೆ ಎಂದು ಅವರು ಕಾರ್ಯ ನಿರ್ವಹಿಸಿದ ಅವಧಿಯನ್ನು ನೆನಪು ಮಾಡಿಕೊಂಡರು.

ಸರ್ಕಾರದ ಕಣ್ತೆರೆಸುವ ಕೆಲಸಗಳು ವಿಧಾನ ಪರಿಷತ್ತಿನಲ್ಲಿ ನಡೆಯುತ್ತವೆ. ಸದನದಲ್ಲಿ ಚರ್ಚೆಗೆ ಬರುವ ವಿಷಯಗಳ ಮೇಲೆ ಮಹತ್ತರವಾದ ಚರ್ಚೆ ನಡೆಯುತ್ತದೆ. ನಾವು ಪರಿಷತ್ತಿನ ಬಗ್ಗೆ ಒಳ್ಳೆಯ ಭಾವನೆಗಳನ್ನು ಇಟ್ಟುಕೊಳ್ಳಬೇಕು, ಒಳ್ಳೆಯ ಸಂಗತಿಗಳನ್ನು ಮನದಲ್ಲಿಟ್ಟುಕೊಂಡು, ಉಳಿದವರಿಗೆ ಮಾರ್ಗದರ್ಶಕರಾಗಿ ಪ್ರೇರಣೆ ನೀಡಿ ಕೆಟ್ಟ ಸಮಯಗಳನ್ನು ಮರೆತು, ಸಮಾಜಕ್ಕೆ ಮಾರ್ಗದರ್ಶಕರಾಗಿದ್ದು, ಕೆಲಸಗಳನ್ನು ನಿರ್ವಹಿಸಬೇಕೆಂದು ಎಲ್ಲಾ ನಿರ್ಗಮಿತ ಶಾಸಕರಿಗೆ ಶುಭ ಹಾರೈಸಿದರು.

ವಿಧಾನ ಪರಿಷತ್ತಿನಿಂದ ಪುನರಾಯ್ಕೆಯಾದ ಮಾನ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡುತ್ತಾ, ಮೇಲ್ಮನೆಯು ಅನೇಕ ಮಹತ್ತರವಾದ ವಿಷಯಗಳು ಚರ್ಚೆಯಾಗುವಂತಹ ಒಂದು ವೇದಿಕೆ. ಇಲ್ಲಿ ಅನೇಕ ಮಸೂದೆಗಳನ್ನು ಪರಿಶೀಲಿಸಿ, ಕೂಲಂಕುಶವಾಗಿ ಚರ್ಚಿಸಿ ನಂತರ ಅನುಮೋದನೆ ನೀಡಲಾಗುವುದು. ಮೇಲ್ಮನೆ ಚಿಂತಕರ ಚಾವಡಿ ಇದ್ದಂತೆ. ಇಲ್ಲಿ ಶಿಕ್ಷಣ ಕ್ಷೇತ್ರ, ಪದವೀಧರರ ಕ್ಷೇತ್ರ, ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಹೀಗೆ ಅನೇಕ ಕ್ಷೇತ್ರಗಳಿಂದ ಆಯ್ಕೆಯಾಗಿ ಬಂದಿರುವಂತಹ ಹಿರಿಯರು, ಬುದ್ದಿಜೀವಿಗಳು ಇದ್ದು, ಅವರ ಸಲಹೆಗಳು ಸರ್ಕಾರಕ್ಕೆ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಜನಪ್ರತಿನಿಧಿಗಳಿಗೆ ಹಣ ಬಲಕ್ಕಿಂತ ಜನ ಬಲ ಬೇಕು. ಜನರ ಸೇವೆ ಮಾಡಿ ಅವರ ಪ್ರೀತಿ ಪಾತ್ರರಾಗಿ ಅವರ ನಂಬಿಕೆಯನ್ನು ಉಳಿಸಿಕೊಳ್ಳುವಂತಹ ಕಾರ್ಯಗಳನ್ನು ಮಾಡಬೇಕು. ಎಲ್ಲರಲ್ಲಿ ಇರುವ ಯೋಚನೆಗಳು, ಯೋಜನೆಗಳು, ಚಿಂತನೆಗಳು, ಮಾರ್ಗದರ್ಶನಗಳನ್ನು ಸದನಕ್ಕೆ ನೀಡಲು ತಿಳಿಸುತ್ತಾ ನಿರ್ಗಮಿತ ಶಾಸಕರಿಗೆ ಸಚಿವರು ಶುಭಕೋರಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡುತ್ತಾ, ಸದನಗಳು ಒಂದು ಕುಟುಂಬವಿದ್ದಂತೆ. ಉತ್ತಮ ರೀತಿಯಲ್ಲಿ ನಾವು ಕೆಲಸಗಳನ್ನು ನಿರ್ವಹಿಸಬೇಕು. ಇಂದು ಈ ಸಮಾರಂಭಕ್ಕೆ ಎಲ್ಲಾ ನಿರ್ಗಮಿತ ಶಾಸಕರಿಗೆ ನಾನು ದೂರವಾಣಿ ಮೂಲಕ ಕರೆ ಮಾಡಿ ಕರೆದಾಗ ಎಲ್ಲರೂ ಸಹ ನನ್ನ ಕರೆಗೆ ಒಪ್ಪಿ ಇಲ್ಲಿ ಬಂದು ಈ ಸಮಾರಂಭದ ಯಶಸ್ಸಿಗೆ ಕಾರಣರಾಗಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಎಲ್ಲಾರೂ ಸಹ ಮುಂದೆಯೂ ಸಹ ಸದನದ ಬಗ್ಗೆ ಗೌರವವನ್ನು ಕಾಪಾಡಿಕೊಳ್ಳಬೇಕು. ಸದನದಲ್ಲಿ ಚರ್ಚೆಯಾಗುವ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕೇ ವಿನಃ ಬಾವಿಗಿಳಿದು ಧರಣಿ ಮಾಡಿ ಸದನದ ಗೌರವಕ್ಕೆ ಧಕ್ಕೆ ತರಬಾರದು ಎಂದು ತಿಳಿಸಿದರು.

ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ತರಬೇತಿ ನೀಡಲು ಸಹ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ವಿಧಾನ ಪರಿಷತ್ತಿನ ಎಲ್ಲಾ ಶಾಸಕರಿಗೂ ಮುಂದಿನ ದಿನಗಳಲ್ಲಿ ಒಂದು ವಿಚಾರ ಸಂಕಿರಣದ ವ್ಯವಸ್ಥೆ ಸಹ ಆಯೋಜಿಸಲಾಗಿದೆ. ಎಲ್ಲರೂ ಆಗಾಗ ಬಂದು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ನೀಡಲು ನಿರ್ಗಮಿತ ಶಾಸಕರಿಗೆ ಮನವಿ ಮಾಡುತ್ತಾ ಎಲ್ಲಾ ಶಾಸಕರಿಗೂ ಶುಭ ಕೋರಿದರು.

ನಂತರ ನಿರ್ಗಮಿತ ಶಾಸಕರುಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಾಜಿ ಸಭಾಪತಿಗಳಾದ ಬಿ.ಎಲ್. ಶಂಕರ್, ವಿಧಾನ ಪರಿಷತ್ತಿನ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ, ಹಾಗೂ ನಿರ್ಗಮಿತ ಶಾಸಕರುಗಳು ಉಪಸ್ಥಿ

Post a Comment

0 Comments

Ad Code

Responsive Advertisement