Ticker

6/recent/ticker-posts

Ad Code

Responsive Advertisement

ಕೊರೋನ ಓಡಿಸಲು ಎಲ್ಲರೂ ಕೂಡ ಮಾಸ್ಕ್ ಧರಿಸಿ: ಜಾಗೃತಿಯ ಅರಿವು

 ಮಧುಗಿರಿ:ತಾಲೂಕಿನಲ್ಲಿ ಇಂದು ಕರುನಾಡ ವಿಜಯ ಸೇನೆ ಸಂಘಟನೆ ವತಿಯಿಂದ ಇಂದು ವೈಕುಂಠ ಏಕಾದಶಿ ಪ್ರಯುಕ್ತ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಗಳನ್ನು ಕೊಟ್ಟು ಕೊರೋನ ಮಹಾಮಾರಿ ರೋಗವನ್ನು ಓಡಿಸಲು ಎಲ್ಲರೂ ಕೂಡ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂಬ ಜಾಗೃತಿಯ ಅರಿವು ಮೂಡಿಸಲಾಯಿತು.



 ಈ ವೇಳೆಯಲ್ಲಿ ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ ಕರುನಾಡ ವಿಜಯ ಸೇನೆ ಈ ಕೋವಿಡ್ ಸಮಯದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು  ತುಂಬಾ ಒಳ್ಳೆಯ ಕೆಲಸ ಇದೇ ತರಹ ಎಲ್ಲ ಸಂಘಟನೆಗಳು ಕೂಡ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ ಕೋವಿಡ್ ಅನ್ನು ನಿಯಂತ್ರಣ ಮಾಡಬಹುದು ಎಂದರು. ಜೊತೆಗೆ ಮುಂದೆ ಕೂಡ ಇದೆ ರೀತಿ ಎಲ್ಲಾ ಸಂಘಟನೆಗಳು ಇನ್ನು ಹೆಚ್ಚಿನದಾಗಿ ಕಾರ್ಯವನ್ನು ಮಾಡಲಿ ಎಂದರು.

ಟಿಎಚ್ಓ ರಮೇಶ್ ಬಾಬು ಮಾತನಾಡಿ ಕೋರೂನ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚು ಹರಡುತ್ತಿದ್ದು ನಮ್ಮ ಮಧುಗಿರಿಯಲ್ಲೂ ಕೂಡ ತುಂಬಾ ಎಚ್ಚುತ್ತಿದೆ ಆದ್ದರಿಂದ ಎಲ್ಲರೂ ಕೂಡ ಮಾಸ್ಕ್ ಗಳನ್ನು ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕಾಗಿದೆ ಜೊತೆಗೆ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲೂಕ್ ಸಂಘಟನೆ ಪದಾಧಿಕಾರಿಗಳದ ತಾಲೂಕ್ ಅಧ್ಯಕ್ಷ ತಿಮ್ಮರಾಜು, ನಗರ ಅಧ್ಯಕ್ಷ ರಾಜು ಮಹಿಳಾ ಅಧ್ಯಕ್ಷರಾದ ಲತಾಗೋವಿಂದರಾಜು, ಲತಾ ನಾರಾಯಣ್ ಅಲ್ಪಸಂಖ್ಯಾತ ಅಧ್ಯಕ್ಷರಾದ ದಾದಾಪಿರ್, ಸತೀಶ್, ಅಶೋಕ್, ಬಾಬು, ರಮೇಶ್, ದಾದು, ಗಾಯಿತ್ರಿನಾರಾಯಣ್, ಸುಜಾತಾ, ಯಶಶ್ವಿನಿ, ಪುಟ್ಟತಯಮ್ಮ, ರೇಣುಕಾ, ಭಾಗ್ಯ, ದಿವ್ಯ, ಶಾರದಾ, ಲೀಲಾವತಿ, ಮುಂತಾದವರು ಇದ್ದರು.

Post a Comment

0 Comments

Ad Code

Responsive Advertisement