ಮಧುಗಿರಿ : ಯಾವುದೇ ವ್ಯವಹಾರದಲ್ಲಿ ಆಸೆ ಇರಬೇಕು, ಅತಿಯಾಸೆ ಬೇಡ. ಅತಿಆಸೆ ಪಟ್ಟರೆ ದಾರಿ ತಪ್ಪುವುದು ಸಹಜ, ಹಾಸಿಗೆಯಿದ್ದಷ್ಟು ಕಾಲುಚಾಚು ಎಂಬುದನ್ನು ವೈಶ್ಯ ಸಮುದಾಯದವರು ದವರಿಂದ ಕಲಿಯಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ತಿಳಿಸಿದರು.
ಪಟ್ಟಣದಲ್ಲಿರುವ ಸ್ವಗೃಹದಲ್ಲಿ ಆರ್ಯವೈಶ್ಯ ಮಂಡಳಿ ಮತ್ತು ಅಂಗಸಂಸ್ಥೆಗಳು ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ಇಪ್ಪತ್ತು ವರ್ಷಗಳ ಯೋಜನೆ ಯನ್ನಿಟ್ಟುಕೊಂಡು ಮಕ್ಕಳು ಮೊಮ್ಮಕ್ಕಳು ಸುಖವಾಗಿರುವಂತಹ ವ್ಯವಹಾರ ಜ್ಞಾನ ವನ್ನು ಹೊಂದಿದ್ದೀರಿ, ನಿಮ್ಮ ಸಮುದಾಯಕ್ಕೆ ರಾಜಕೀಯ ಸ್ಥಾನಮಾನಗಳನ್ನು ಮಾಜಿ ಶಾಸಕರಾದ ಕೆ .ಎನ್.ರಾಜಣ್ಣನವರು ನಿರಂತರವಾಗಿ ನೀಡುತ್ತಾ ಬಂದಿದ್ದಾರೆ. ಪ್ರಥಮ ಬಾರಿಗೆ ಆಯ್ಕೆಯಾದ ರಾಧಿಕಾ ಆನಂದ ಕೃಷ್ಣ ಅವರನ್ನು ಮಧುಗಿರಿ ಪುರಸಭೆ ಉಪಾಧ್ಯಕ್ಷ ರನ್ನಾಗಿಸಿದ ಕೆ .ಎನ್. ರಾಜಣ್ಣನವರು ಮಧುಗಿರಿಯಲ್ಲದೆ ಜಿಲ್ಲೆಯಲ್ಲಿಯೂ ಸಹ ಇಂತಹ ಅವಕಾಶಗಳು ಸಿಕ್ಕಾಗ ಅಂಥವರಿಗೆ ಅಧಿಕಾರ ನೀಡಿರುವುದು ನಿದರ್ಶನಗಳು ಸಾಕಷ್ಟಿವೆ ಎಂದರು.
ನಿಮ್ಮ ಸಮುದಾಯದ ಯುವಕರು ನಿರಂತರವಾಗಿ ನನ್ನೊಡನೆ ಸಂಪರ್ಕದಲ್ಲಿದ್ದು ನನ್ನನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೋಡದೆ ನಿಮ್ಮ ಕಷ್ಟ ಸುಖಗಳಿಗೆ ಸದಾ ನಾನು ನಿಮ್ಮ ಜತೆಗಿರುತ್ತೇನೆ ಎಂದರು.
ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಪುರಸಭಾ ಮಾಜಿ ಅಧ್ಯಕ್ಷ ಡಿ.ಜಿ.ಶಂಕರನಾರಾಯಣಶೆಟ್ಟಿ, ಪುರಸಭೆ ಉಪಾಧ್ಯಕ್ಷೆ ರಾಧಿಕಾ ಅನಂದಕೃಷ್ಣ, ವಾಸವಿ ವಿವಿಧ ದೇಶ್ವರ ಸಹಕಾರ ಸಂಘ ಅಧ್ಯಕ್ಷ ಎ.ರಮೇಶ್ ಮುಖಂಡರಾದ ಆನಂದ್ ಕೃಷ್ಣ, ಪತ್ರಕರ್ತರು ಎಂಎಸ್ ರಘುನಾಥ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷೆ ಸಹನಾ ನಾಗೇಶ್, ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪ ತಮ್ಮ ಹಾಗೂ ವಾಸವಿ ಮಹಿಳಾ ಸಂಘ ಪುಷ್ಪ (ಕೆ.ಎಚ್.ಆರ್ ) ವಾಸವಿ ಕ್ಲಬ್ ಅಧ್ಯಕ್ಷರ ಲಕ್ಷ್ಮಿ ಮೂರ್ತಿ, ವಾಸವಿ ಯುವತಿಯರ ಸಂಘ ಅಧ್ಯಕ್ಷೆ ಗೀತಾ ಪಣೀಶ್, ವಾಸವಿ ಯುವಜನ ಸಂಘ ಅಧ್ಯಕ್ಷ ರವಿ.ಎಂ.ಎ, ಜಿ.ಆರ್. ವೆಂಕಟೇಶ್, ಬದ್ರಿನಾಥ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕೆ.ಎಂ ಮಧು, ದಿವಾಕರ್ ಪುರಸಭೆ ಮಾಜಿ ಸದಸ್ಯರುಗಳಾದ ಜಿ ಆರ್ ವೆಂಕಟೇಶ್ ಬಾಬು, ಭಾರತಮ್ಮ, ವಾಸವಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎ.ರಮೇಶ್, ವಿಕ್ರಮ್. ಬಾಲಾಜಿ. ಕಾರ್ತಿಕ್. ಅಶ್ವಿನ್, ರಾಘವೇಂದ್ರ, ವಿಹಾರಿ, ಅಕ್ಷಯ್, ಕಿಶೋರ್, ಆದರ್ಶ್, ಆನಂದ್, ಶಿಶಿರ್, ಬದ್ರಿ, ಮಹೇಶ್, ಪ್ರದೀಪ್, ಇದ್ದರು.
0 Comments