Ticker

6/recent/ticker-posts

Ad Code

Responsive Advertisement

ಮುಂದಿನ ದಿನಗಳಲ್ಲಿ ಇನ್ನಷ್ಟು ಮನೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ: ಶಾಸಕ ಎಂ.ವಿ.ವೀರಭದ್ರಯ್ಯ

 ಮಧುಗಿರಿ - ಡಿವಿ ಹಳ್ಳಿ ಪಂಚಾಯಿತಿಗೆ 40 ಮನೆ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮನೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. 

ತಾಲೂಕಿನ ಡಿವಿ ಹಳ್ಳಿ ಗ್ರಾಮದಲ್ಲಿ ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಿರ್ಮಿಸಿರುವ ನೂತನ ಗ್ರಾಮ ಪಂಚಾಯಿತಿಯ ಸಭಾಭವನ ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯಿತಿಗಳಲ್ಲಿ ಬರುವ ಅನುದಾನಗಳನ್ನು ಪಂಚಾಯಿತಿಯವರು ಸದುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು. 

ಗ್ರಾಮಗಳ ಅಭಿವೃದ್ಧಿಯಾಗಬೇಕಾದರೆ ರಾಜಕೀಯ ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡಿ ಎಂದ ಅವರು ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಮ್ಮ ಗೋಪಾಲಯ್ಯ, ಉಪಾಧ್ಯಕ್ಷರಾದ ಶಿವಕುಮಾರಸ್ವಾಮಿ, ಸದಸ್ಯರುಗಳಾದ ಓಬಳಮ್ಮ, ಟಿ.ಆರ್.ಪ್ರಭು, ಮಹಾಲಕ್ಷ್ಮಮ್ಮ, ಈರಮ್ಮ, ಜಿ.ಆರ್.ವೇಣುಗೋಪಾಲ್, ರವಿಕುಮಾರ್, ರಾಧಮ್ಮ, ಗಿರಿಜಮ್ಮ, ಬಾಣದರಂಗಯ್ಯ,ಮಂಜುಮ್ಮ, ಜಯರಾಮ್, ಮಂಜುಳಾ, ನಾಗರಾಜು,  ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ. ಎನ್.ಶಿವಕುಮಾರ್, ಕಾರ್ಯದರ್ಶಿ ನವೀನ್, ಮುಖಂಡರುಗಳಾದ ಡಿ.ನಾಗರಾಜು, ಟಿ.ರಾಮಣ್ಣ, ಲಂಕೇಶ್, ಗೋಪಾಲಯ್ಯ, ತಿಪ್ಪೇಸ್ವಾಮಿ, ನರಸಿಂಹಮೂರ್ತಿ, ಗುರುಲಿಂಗಯ್ಯ ತಿಮ್ಮರಾಜು ಹಾಗೂ ಮುಂತಾದವರು ಇದ್ದರು.

Post a Comment

0 Comments

Ad Code

Responsive Advertisement