ಸಿಸಿಟಿವಿ ದೃಶ್ಯಾವಳಿ, ಆರೋಪಿ ಚಹರೆ ಮತ್ತು ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಆಕಸ್ಮಿಕ ಬೆರಳು ಮುದ್ರೆಗಳ ಪಡೆದುಕೊಂಡು ಪರಿಶೀಲಿಸಿ, ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 59 ಲಕ್ಷ ರೂ. ಬೆಲೆ ಬಾಳುವ 1132 ಗ್ರಾಂ ತೂಕದ ಚಿನ್ನಾಭರಣಗಳನ್ನು, 1210 ಗ್ರಾಂ ಬೆಳ್ಳಿಯ ಸಾಮಾನುಗಳನ್ನು, ನಕಲಿ ಕೀ ತಯಾರಿಸುವ ಯಂತ್ರ ಹಾಗೂ 4 ದ್ವಿಚಕ್ರವಾಹನಗಳನ್ನು ಜಂಟಿ ಕಾರ್ಯಾಚರಣೆಯಲ್ಲಿ ಆರ್.ಟಿ.ನಗರ ಮತ್ತು ಹೆಬ್ಬಾಳ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದಲ್ಲಿನ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಯು ಶಾಲೆಗಳ ಬಳಿ ಮಕ್ಕಳನ್ನು ಕರೆದುಕೊಂಡು ಹೋಗಲು ಚೆನ್ನಾಗಿ ಚಿನ್ನಾಭರಣಗಳನ್ನು ಹಾಕಿಕೊಂಡು ಬಂದಿರುವ ಪೋಷಕರುಗಳನ್ನು ಗಮನಿಸಿ, ಅವರುಗಳ ಕೈಯಲ್ಲಿರುವ ಬೀಗ ಕೀಗಳನ್ನು ಫೋಟೋ ತೆಗೆದುಕೊಂಡು ಅವರುಗಳ ಹಿಂದೆ ಹೋಗಿ ಮನೆಯನ್ನು ಗುರುತಿಸಿಕೊಂಡು ಬಂದು ಅದರ ನಕಲಿ ಕೀ ಮಾಡಿಸಿಕೊಂಡು ಕಳ್ಳತನ ಮಾಡುತ್ತಿದ್ದು, ನಂತರ ಆರೋಪಿಯೇ ನಕಲಿ ಕೀ ತಯಾರಿಸುವುದನ್ನು ನೋಡಿ, ತಾನೇ ಸ್ವತಃ ನಕಲಿ ಕೀ ತಯಾರಿಸುವ ಯಂತ್ರವನ್ನು ತಂದು ನಕಲಿ ಕೀ ತಯಾರಿಸಿಕೊಂಡು ಆರೋಪಿಯನ್ನು ಸಹಾಯಕ್ಕೆ ಬಳಸಿಕೊಂಡು ಇಂತಹ ಕೃತ್ಯಗಳನ್ನು ಎಸಗಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಆರೋಪಿಗಳ ಬಂಧನದಿAದ ಆರ್.ಟಿ.ನಗರ ಪೊಲೀಸ್ ಠಾಣೆ 2-ಮನೆಕಳವು ಮತ್ತು 2-ಹಗಲು & ರಾತ್ರಿ ಕನ್ನಾ ಕಳವು, 3-ದ್ವಿಚಕ್ರವಾಹನ ಕಳವು, ಹೆಬ್ಬಾಳ ಪೊಲೀಸ್ ಠಾಣೆ-2 ಮನೆ ಕಳವು, 1-ಹಗಲು & ರಾತ್ರಿ ಕನ್ನಾ ಸಂಜಯನಗರ 1-ಹಗಲು & ರಾತ್ರಿ ಕನ್ನಾ ಕಳವು, ಕಳವು, ಡಿ.ಜೆ. ಹಳ್ಳಿ ಪೊಲೀಸ್ ಠಾಣೆ 1-ಮನೆ ಕಳವು, 1-ಹಗಲು ಕನ್ನಾ ಕಳವು, ಅಮೃತಹಳ್ಳಿ ಪೊಲೀಸ್ ಠಾಣೆ 1-ಹಗಲು & ರಾತ್ರಿ ಕನ್ನಾ ಕಳವು ಪ್ರಕರಣ ಸೇರಿದಂತೆ ಒಟ್ಟು 14 ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಪ್ರಕರಣದಲ್ಲಿ ಶ್ರೀಮತಿ ಎನ್ ಸುವರ್ಣ, ಎಸಿಪಿ, ಜೆ.ಸಿ.ನಗರ ಉಪ ವಿಭಾಗ ರವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಆರ್.ಟಿ.ನಗರ ಮತ್ತು ಹೆಬ್ಬಾಳ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
0 Comments