ಬಳ್ಳಾರಿ ಜ 27. ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಬಳ್ಳಾರಿ ನಗರದಲ್ಲಿ ಮುಖ್ಯ ರಸ್ತೆಗಳಲ್ಲಿ ಪಾದಾಚಾರಿ ಪರಿಶೀಲನೆ ನಡೆಸಿದರು.
ಪಾದಯಾತ್ರೆ ಮೂಲಕ ಮುಖ್ಯ ರಸ್ತೆಗಳನ್ನು ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಸಂಬAಧಪಟ್ಟ ಅಧಿಕಾರಿಗಳು ಜತೆ ಇದ್ದರು. ರಾಯಲ್ ಸರ್ಕಲ್ ವೃತ್ತ ಮತ್ತು ಮೀನಾಕ್ಷಿ ಸರ್ಕಲ್, ಸಣ್ಣ ಮಾರ್ಕೆಟ್ , ಬ್ರೂಸ್ ಪೇಟೆ ಸರ್ಕಲ್ ,ಮೋತಿ ಸರ್ಕಲ್, ಎಪಿಎಂಸಿ ರಾಡಾರ್ ಮತ್ತು ಬೆಂಕಿ ಮಾರೆಮ್ಮ ಗುಡಿ ಸರ್ಕಲ್ ನಗರದಲ್ಲಿ ಸಂಚಾರ ಮಾಡುತ್ತಾ ಪರಿಶೀಲನೆ ಮಾಡಿದರು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಬುಡಾ ಅಧ್ಯಕ್ಷ ಪಾಲನ್ನ ಮತ್ತಿತರರು ಇದ್ದರು.
0 Comments