ಬಳ್ಳಾರಿ,ಜ.09. ಭಾರತೀಯ ಜನತಾಪಾರ್ಟಿಯ ಬಳ್ಳಾರಿ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ಹಾಗೂ ಜಿಲ್ಲೆಯ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರುಗಳನ್ನಾಗಿ ನೇಮಕ ಮಾಡಿ ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳು ಮುರಹರಿಗೌಡ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರುಗಳನ್ನಾಗಿ ಸಂಡೂರಿನ ಗಾಳಿ ಶಂಕರಪ್ಪ, ಬಳ್ಳಾರಿಯ ಕೌಲ್ ಬಜಾರ್‌ನ ಸಾಧನಾ ಹಿರೇಮಠ್, ಡಾ|ಅರುಣಾ, ಬಳ್ಳಾರಿ ನಗರದ ವೀರಶೇಖರರೆಡ್ಡಿ, ಭಾಗ್ಯಲಕ್ಷ್ಮಿ ಕಮ್ಮಾರ, ಬಳ್ಳಾರಿ ಗ್ರಾಮಾಂತರದ ಓಬಳೇಶ್,ಸಿರುಗುಪ್ಪದ ಶಂಕರ್‌ರೆಡ್ಡಿ,ಕ0ಪ್ಲಿಯ ಪುರುಷೋತ್ತಮನಾಯ್ಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಬಳ್ಳಾರಿ ನಗರದ ಅನಿಲ್‌ನಾಯ್ಡು ಮೋಕಾ, ಕಾರ್ಯದರ್ಶಿಗಳನ್ನಾಗಿ ಬಳ್ಳಾರಿ ಸಂಡೂರಿನ ಸೌಭಾಗ್ಯ ತಿರುಮಲ, ಕಂಪ್ಲಿಯ ಉಷಾ, ಬಳ್ಳಾರಿ ಕೌಲ್‌ಬಜಾರ್‌ನ ಅಲಿವೇಲು,ಕಂಪ್ಲಿಯ ಶಿವಶಂಕರ್‌ರೆಡ್ಡಿ, ಗ್ರಾಮಾಂತರದ ತಿಮ್ಮನಗೌಡ, ಸಂಡೂರಿನ ಸುರೇಶ್ ಉಡೇದ,ಬಳ್ಳಾರಿ ನಗರದ ಕೆ.ಎ.ವೇಮಣ್ಣ, ಸಿರುಗುಪ್ಪದ ಮಲ್ಲನಗೌಡ ಸಿರಿಗೇರಿ, ಬಳ್ಳಾರಿಯ ಸುಮಾರೆಡ್ಡಿ, ಖಜಾಂಚಿಯನ್ನಾಗಿ ಬಳ್ಳಾರಿ ನಗರದ ಶಂಭುಪ್ರಸಾದ್,ಕಾರ್ಯದರ್ಶಿಯಾಗಿ ಬಳ್ಳಾರಿ ನಗರದ ರಾಮಕೃಷ್ಣ ಕಾಕರ್ಲತೋಟ, ಹಾಗೂ ಜಿಲ್ಲಾ ವಕ್ತಾರರನ್ನಾಗಿ ಡಾ||ಬಿ.ಕೆ.ಸುಂದರ್ ರವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳು ಮುರಹರಿಗೌಡ ತಿಳಿಸಿದ್ದಾರೆ.
ಬಿಜೆಪಿಯ ಬಳ್ಳಾರಿ ಜಿಲ್ಲೆಯ ವಿವಿಧ ಮೋರ್ಚಾಗಳ ಅಧ್ಯಕ್ಷರುಗಳನ್ನು ಸಹಾ ನೇಮಕ ಮಾಡಲಾಗಿದೆ.
ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷರನ್ನಾಗಿ ಗ್ರಾಮಾಂತರದ ಬಳ್ಳಾರಿ ಸಂಜೀವರಾಯನ ಕೋಟೆ ಗ್ರಾಮದ ಸೋಮನಗೌಡ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರನ್ನಾಗಿ ಬಳ್ಳಾರಿ ನಗರದ ಸುಗುಣ, ರೈತಮೋರ್ಚಾದ ಜಿಲ್ಲಾಧ್ಯಕ್ಷರನ್ನಾಗಿ ಸಿರುಗುಪ್ಪದ ಪ್ರಕಾಶ್‌ಗೌಡ,ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷರನ್ನಾಗಿ ಗ್ರಾಮಾಂತರದ ಬಳ್ಳಾರಿ ಪ್ರಕಾಶ್, ಎಸ್.ಸಿ, ಮೋರ್ಚಾದ ಜಿಲ್ಲಾಧ್ಯಕ್ಷರನ್ನಾಗಿ ಸಿರುಗುಪ್ಪದ ಮೇಕಲ ವೀರೇಶ, ಎಸ್ಟಿ ಮೋರ್ಚಾದ ಸಂಡೂರಿನ ಓಬಳೇಶ್ ಹಾಗು ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾಧ್ಯಕ್ಷರನ್ನಾಗಿ ನಗರದ 13ನೇ ವಾರ್ಡಿನ ಇಬ್ರಾಹಿಂಬಾಬು ಅವರನ್ನು ನೇಮಕ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳು ಮುರಹರಿಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments