ಬೆಂಗಳೂರು,ಜ.24- ಸ್ಥಳೀಯ ಸಾತ್ವಿಕ ಭಾರತೀಯ ಸಾಮಾಜಿಕ ಅಭಿವೃದ್ಧಿ ಸಂಸ್ಥೆಯು 73 ನೇ ಗಣರಾಜ್ಯೋತ್ಸವದಂಗವಾಗಿ ಜ. 26 ರಿಂದ ಜ.28 ರವರೆಗೆ 3 ದಿನ ಎಲ್ಲ ವಯೋಮಾನದವರಿಗಾಗಿ ಇಂಗ್ಲೀಷ್ ಭಾಷಾ ತರಬೇತಿ ನೀಡಲಿದೆ.
ತರಬೇತಿಯಲ್ಲಿ ಮಂಗಳೂರಿನ ಹೆಸರಾಂತ ಭಾಷಾ ಪಂಡಿತರಾದ ನೆವಿಲ್ ರೋಡ್ರಿಗ್ಸ್ ಅವರು ಉದ್ಯೋಗಕ್ಕಾಗಿ ಸಂರ‍್ಶನದಲ್ಲಿ ಮಾತನಾಡುವುದು ಹೇಗೆ ? ಸಭೆ ಸಮಾರಂಭಗಳಲ್ಲಿ ತಮ್ಮ ಸ್ವ ಪರಿಚಯ ಮಾಡಿಕೊಳ್ಳುವುದು ಹೇಗೆ? ಅಲ್ಲದೇ ಇಂಗ್ಲೀಷ್ ಭಾಷೆಯಿಂದ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವುದು ಹೇಗೆ ? ಎಂಬುದರ ಕುರಿತು ವಾಟ್ಸ್‌ಅಪ್ ಸಾಮಾಜಿಕ ಜಾಲತಾಣದ ಮೂಲಕ ಆನಲೈನ್ ನಲ್ಲಿ ಮಾಹಿತಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗೆ ನೆವಿಲ್ ರೋಡ್ರಿಗ್ಸ್ 8971899088 ಅವರನ್ನು ನೇರವಾಗಿ ಸಂರ‍್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
0 Comments