- ಮಧುಗಿರಿ - 70 ವರ್ಷ ದೇಶವನ್ನು ದರೋಡೆ ಮಾಡಿದ ಕಾಂಗ್ರೇಸ್ ಪಕ್ಷಕ್ಕೆ ನರೇಂದ್ರ ಮೋದಿ ನಾಯಕತ್ವದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸುತ್ತಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪಿಎಲ್ ನರಸಿಂಹಮೂರ್ತಿ ತಿಳಿಸಿದರು.
ಪಟ್ಟಣದ ಡೂಂ ಲೈಟ್ ವೃತ್ತದಲ್ಲಿ ಪ್ರಧಾನ ಮಂತ್ರಿಯವರಿಗೆ ಭದ್ರತಾ ಲೋಪ ಎಸಗಿದ ಪಂಜಾಬ್ ಸರ್ಕಾರದ ವಿರುದ್ದ ಬಿಜರಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಅತ್ಯುನ್ನತ ಉದ್ದೆಯಲ್ಲಿರುವ ಪ್ರಧಾನಮಂತ್ರಿ ಅವರಿಗೆ ಭದ್ರತಾ ಲೋಪ ಎಸಗಿ ಪಂಚಾಬ್ ಮುಖ್ಯಮಂತ್ರಿ ಅಗೌರವ ತೋರಿರುವುದು ಖಂಡನೀಯ. ಇಂತಹ ನೀಚ ಕೃತ್ಯ ಎಸಗಲು ಕಾಂಗ್ರೇಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ಈ ಕೂಡಲೇ ಪಂಚಾಬ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಕ್ಷಮೇಯಾಚಿಸಿ ತಮ್ಮ ತಪ್ಪನ್ನು ತಿದ್ದುಕೊಳ್ಳಬೇಕು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಜನರೇ ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷ ಪಾವಗಡ ರವಿಕುಮಾರ್, ತಾಲೂಕು ಬಿಜೆಪಿ ಕಾರ್ಯದರ್ಶಿಗಳಾದ ಸೀತಾರಾಂ, ನಾಗೇಂದ್ರ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಯುವ ಮೊರ್ಚಾ ಅಧ್ಯಕ್ಷ ಕಾರ್ತಿಕ್ ಆರಾದ್ಯ ಪದಾಧಿಕಾರಿಗಳಾದ ಸುರೇಶ್, ನವೀನ್ ಸೀತಾರಾಂ ನಾಯಕ್, ಜಿ.ರಮೇಶ್, ಮಧು, ರವಿ ಜಯಣ್ಣ, ತಿಮ್ಮಣ್ಣ, ದೀಕ್ಷೀತ್ ಹಾಗೂ ಮುಂತದವರು ಇದ್ದರು.
0 Comments