Ticker

6/recent/ticker-posts

Ad Code

Responsive Advertisement

ಬಾಡಿಗೆಗೆ ಪಡೆದು ಕಾರುಗಳ ಮಾರಾಟ: 4 ಜನ ಆರೋಪಿಗಳ ಬಂಧನ, 67 ಕಾರು ವಶ.


ಟಯೋಟಾ ಇಟಿಯಸ್ ಕಾರನ್ನು ಆರ್.ಎಸ್.ಟರ‍್ಸ್ ಮತ್ತು ಟ್ರಾವೆಲ್ಸ್ಗೆ ದಿನಾಂಕ 20-03-2021 ರಂದು ತಿಂಗಳಿಗೆ 15,000/-ರೂ.ಗಳ ಬಾಡಿಗೆ ನೀಡುವಂತೆ ಟ್ರಾವೆಲ್ಸ್ನ ಮಾಲೀಕರ ಹತ್ತಿರ ಒಪ್ಪಂದ ಮಾಡಿಕೊಂಡಿದ್ದು, ಬಾಡಿಗೆಗೆ ಬಿಟ್ಟಿದ್ದು, ಅದರಂತೆ ಬಾಡಿಗೆ ಹಣವನ್ನು ನೀಡುತ್ತಾ ಬಂದಿದ್ದರೂ, ನವೆಂಬರ್ ತಿಂಗಳಲ್ಲಿ ಟ್ರಾವೆಲ್ಸ್ ಮಾಲೀಕರು ಸಂಪರ್ಕಕ್ಕೆ ಸಿಗದೇ ತಮ್ಮ ಮೊಬೈಲ್ ನಂಬರ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಬಾಡಿಗೆ ಹಣ ಮತ್ತು ಕಾರನ್ನು ವಾಪಸ್ ಕೊಡದೇ ನಂಬಿಕೆ ದ್ರೋಹ ಮಾಡಿ, ಮೋಸ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. 

ಈ ಪ್ರಕರಣದಲ್ಲಿ ಟ್ರಾವೆಲ್ಸ್ನ ಮಾಲೀಕರು ಸೇರಿದಂತೆ 4 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಟ್ರಾವೆಲ್ಸ್ ನೀಡಿದ್ದ ಸುಮಾರು 5.72 ಕೋಟಿ ಬೆಲೆ ಬಾಳುವ ವಿವಿಧ ಕಂಪನಿಯ 67 ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿರುತ್ತಾರೆ. 

 ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ  ಆರೋಪಿಯು ಆರ್.ಎಸ್.ಟರ‍್ಸ್ ಮತ್ತು ಟ್ರಾವೆಲ್ಸ್ ನಡೆಸುತ್ತಿದ್ದು, ಮಾಲೀಕರುಗಳಿಂದ ಕಾರುಗಳನ್ನು ಬಾಡಿಗೆಗೆ ಪಡೆದುಕೊಂಡು, ಬಾಡಿಗೆಗೆ ಪಡೆದುಕೊಂಡ ಕಾರುಗಳನ್ನು ತಮಿಳುನಾಡು ಆಂಧ್ರಪ್ರದೇಶ ರಾಜ್ಯಗಳಲ್ಲಿ ಮಾರಾಟ ಮಾಡಿಸಿರುತ್ತಾರೆ. ಈ ಟ್ರಾವೆಲ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಟ್ರಾವೆಲ್ಸ್ನ ಮಾಲೀಕರಾದ  ಆರೋಪಿಯು ಕಾರುಗಳ ಮಾಲೀಕರಿಗೆ ಮೋಸ ಮಾಡುತ್ತಿದ್ದ ವಿಚಾರ ಗೊತ್ತಿದ್ದರೂ ತಮ್ಮ ಪರಿಚಯವಿರುವವರುಗಳ ಕಾರುಗಳನ್ನು ಸದರಿ ಟ್ರಾವೆಲ್ಸ್ಗೆ ಬಾಡಿಗೆಗೆ ಸೇರಿಸಿ, ಮಾಲೀಕರಿಂದ ಕಮೀಷನ್ ಪಡೆಯುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಪ್ರಕರಣದಲ್ಲಿ ಇನ್ನು ಬಾಕಿ ಉಳಿದಿರುವ ಕಾರುಗಳನ್ನು ಮತ್ತು ತಲೆಮರೆಸಿಕೊಂಡಿರುವ ಇಬ್ಬರು ಪತ್ತೆ ಕಾರ್ಯ ಪ್ರಗತಿಯಲ್ಲಿದೆ. 

ಈ ಪ್ರಕರಣದಲ್ಲಿ ಅರುಣ್ ನಾಗೇಗೌಡ, ಎಸಿಪಿ, ಯಶವಂತಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸುನೀಲ್ ಹೆಚ್.ಬಿ., ಪೊಲೀಸ್ ಇನ್ಸ್ಪೆಕ್ಟರ್, ಬಾಗಲಗುಂಟೆ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ರವರುಗಳಾದ ಶ್ರೀಕಂಠೇಗೌಡ ಬಿ., ಪ್ರಭು ಕೆ.ಎಲ್, ಶ್ರೀ ಲೋಕೇಶ್ ಎಂ., ಸಂತೋಷ್‌ಕುಮಾರ್, ನಾಗೇಶ.ಹೆಚ್.ವಿ ಹಾಗೂ ಸಿಬ್ಬಂದಿಗಳಾದ ಶ್ರೀನಿವಾಸ್, ಕುಮಾರಸ್ವಾಮಿ, ಪುರುಷೋತ್ತಮ, ಮಲ್ಲಿಕಾರ್ಜುನ, ಈಶ್ವರ ಸಣ್ಣಕ್ಕಿ, ಮಹಂತಯ್ಯ, ಪುತ್ರೇಶ ಪ್ರಕಾಶ್ ಕಿಲ್ಲಾರಿ ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Post a Comment

0 Comments

Ad Code

Responsive Advertisement