Ticker

6/recent/ticker-posts

Ad Code

Responsive Advertisement

Breaking News: ಅಮೇರಿಕವು ಕೋವಿಡ್ ಭಯದ ಕಾರಣದಿಂದಾಗಿ ೨೦೨೨ರವರೆಗೆ ವೀಸಾಗಳ ವೈಯಕ್ತಿಕ ಸಂದರ್ಶನ ವಿಸ್ತರಿಸಿದೆ!!

SPECIAL EDITION, NEWDELHI, DECEMBER 24: ಪ್ರಸ್ತುತ ಸೇವೆಗಳ ಹಾಗು ಕಾರ್ಯಾಚರಣೆ ಸ್ಥಿತಿಗತಿ ಕುರಿತಾಗಿ ಇನ್ನಷ್ಟು ವಿವರವಾದ ಮಾಹಿತಿಗಾಗಿ ಅರ್ಜಿದಾರರು ರಾಯಭಾರ ಕಚೇರಿ ಮತ್ತು ದೂತವಾಸದ ವೆಬ್ಸೈಟ್ಗಳನ್ನು ಪರಿಶೀಲಿಸಬೇಕೆಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್ ಸಾಂಕ್ರಾಮಿಕ ಉಲ್ಬಣಗೊಳ್ಳುವ ಆತಂಕಗಳ ನಡುವೆಯೇ ಅಮೆರಿಕ H-1B ( H-1B ಪ್ರೋಗ್ರಾಂ ಯುನೈಟೆಡ್ ಸ್ಟೇಟ್ಸ್ನಲ್ಲಿ ಕಂಪನಿಗಳು ಮತ್ತು ಇತರ ಉದ್ಯೋಗದಾತರಿಗೆ ತಾತ್ಕಾಲಿಕವಾಗಿ ವಿದೇಶಿ ಉದ್ಯೋಗಿಗಳನ್ನು ಉದ್ಯೋಗಗಳಲ್ಲಿ ನೇಮಿಸಿಕೊಳ್ಳಲು ಅನುಮತಿಸುತ್ತದೆ) ಹಾಗೂ ವಲಸೆ-ಅಲ್ಲದ (Temporary foreigners) (ತಾತ್ಕಾಲಿಕವಾಗಿ ಪ್ರವೇಶ ಪಡೆದ ವಿದೇಶಿ ಪ್ರಜೆಗಳು) ವೀಸಾ ಅರ್ಜಿದಾರರಿಗೆ(Visa applicants) ನಿರೀಕ್ಷಣಾ ಅವಧಿಯನ್ನು (waiting period) ಕಡಿಮೆ ಮಾಡುವ ಸಲುವಾಗಿ ಮುಂದಿನ ವರ್ಷದವರೆಗೆ ವೈಯಕ್ತಿಕ ಸಂದರ್ಶನಗಳನ್ನು ರಾಜ್ಯ ಇಲಾಖೆಯು ತಾತ್ಕಾಲಿಕವಾಗಿ ಕೈಬಿಡುತ್ತಿದ್ದು, ಈ ನಿಟ್ಟಿನಲ್ಲಿ ಇಲಾಖೆಯು ದೂತವಾಸ ಅಧಿಕಾರಿಗಳಿಗೆ ಆದೇಶ ನೀಡಿದೆ.

ಜಾಗತಿಕ ಪ್ರಯಾಣ ಪುನರ್ ಚೇತರಿಕೆಗೊಳ್ಳುತ್ತಿದ್ದಂತೆಯೇ ರಾಷ್ಟ್ರೀಯ ಭದ್ರತೆಯನ್ನು ಆದ್ಯತೆಯನ್ನಾಗಿಸಿಕೊಂಡು ವೀಸಾಗಾಗಿ ನಿರೀಕ್ಷಣಾ ಅವಧಿಯನ್ನು ಸುರಕ್ಷಿತವಾಗಿ ಹಾಗೂ ಪರಿಣಾಮಕಾರಿಯಾಗಿ ಕಡಿಮೆ ಮಾಡಲು ನಮ್ಮ ಬದ್ಧತೆ ಹೆಚ್ಚಿಸಲು ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಇಲಾಖೆ ತಿಳಿಸಿದೆ.

ವಿಶೇಷ ಉದ್ಯೋಗದಲ್ಲಿರುವ ವ್ಯಕ್ತಿಗಳು (H-1B ವೀಸಾಗಳು), ವಿದ್ಯಾರ್ಥಿಗಳಿಗಾಗಿ ಇರುವ ವೀಸಾಗಳು, ತಾತ್ಕಾಲಿಕ ಕೃಷಿ ಹಾಗೂ ಕೃಷಿಯೇತರ ಕಾರ್ಮಿಕರಿಗಾಗಿ ಇರುವ ವೀಸಾಗಳು, ವಿದ್ಯಾರ್ಥಿ ವಿನಿಮಯ ಸಂದರ್ಶಕರು (ಯುನೈಟೆಡ್ ಸ್ಟೇಟ್ಸ್ನಲ್ಲಿ ವಿನಿಮಯ ಸಂದರ್ಶಕರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಮೋದಿಸಲಾದ ವ್ಯಕ್ತಿಗಳಿಗೆ ವಲಸೆರಹಿತ ವೀಸಾಗಳಾಗಿವೆ) ಅಂತೆಯೇ ಕ್ರೀಡಾಪಟುಗಳು, ಕಲಾವಿದರು ಹಾಗೂ ಮನರಂಜಕರಿಗೆ ಹೀಗೆ ೧೨ ವೀಸಾ ವರ್ಗಗಳಿಗೆ ವೈಯಕ್ತಿಕ ಸಂದರ್ಶನಗಳನ್ನು ನಡೆಸದಿರಲು ಕಾನ್ಸುಲರ್ ಅಧಿಕಾರಿಗಳಿಗೆ ತಾತ್ಕಾಲಿಕ ಅಧಿಕಾರ ನೀಡಲಾಗುತ್ತದೆ.

ಅಂತಾರಾಷ್ಟ್ರೀಯ ಸಂದರ್ಶಕರ ಅನೇಕ ಕೊಡುಗೆಗಳನ್ನು ಸಮುದಾಯ ಹಾಗೂ ಕ್ಯಾಂಪಸ್ ಗುರುತಿಸಿದ್ದು, ಹಿಂದಿನ ವೀಸಾದ ಅವಧಿ ಮುಗಿದ ೪೮ ತಿಂಗಳೊಳಗೆ ಅದೇ ವೀಸಾ ವರ್ಗದಲ್ಲಿ, ವೀಸಾ ನವೀಕರಿಸುವ ಅಂತೆಯೇ ಅರ್ಜಿದಾರರಿಗೆ ವೈಯಕ್ತಿಕ ಸಂದರ್ಶನ ಮನ್ನಾ ಮಾಡುವ ಅಧಿಕಾರವನ್ನು ಅನಿರ್ದಿಷ್ಟವಾಗಿ ವಿಸ್ತರಿಸಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಕೊರೋನಾ ವೈರಸ್ನಿಂದಾಗಿ ವಿಶ್ವದಾದ್ಯಂತ ಹೆಚ್ಚಿನ ದೇಶಗಳಲ್ಲಿ ಎಲ್ಲಾ ವಾಡಿಕೆಯ ವೀಸಾ ಸೇವೆಗಳನ್ನು ಮಾರ್ಚ್ ೨೦೨೦ರಲ್ಲಿ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಸ್ಥಗಿತಗೊಳಿಸಿತ್ತು. ಸೀಮಿತ ಸಾಮರ್ಥ್ಯದೊಂದಿಗೆ ಮತ್ತು ಆದ್ಯತೆಯ ಆಧಾರದ ಮೇಲೆ ಸೇವೆಗಳನ್ನು ಮರುಸ್ಥಾಪಿಸಲಾಗಿದ್ದರೂ, ಕೆಲವೊಂದು ಪ್ರಮುಖ ವಿಚಾರಣಾ ಪ್ರಕ್ರಿಯೆಗಳಿಂದಾಗಿ ಕೆಲವು ವೀಸಾ ನೇಮಕಾತಿಗಳಿಗಾಗಿ ತಿಂಗಳುಗಳ ಅವಧಿಯ ನಿರೀಕ್ಷಣಾ ಅವಧಿ ಇರುತ್ತದೆ. ಸಾಂಕ್ರಾಮಿಕದಿ0ದಾಗಿ ಇಲಾಖೆಯ ವೀಸಾ ಪ್ರಕ್ರಿಯೆ ಸಾಮರ್ಥ್ಯದಲ್ಲಿ ಆಳವಾದ ಕಡಿತ ಉಂಟಾಗಿದ್ದು, ವೀಸಾ ಕಾಯುವಿಕೆ ಅವಧಿ ಕಡಿಮೆ ಮಾಡುವ ಸಲುವಾಗಿ ಸುರಕ್ಷಿತ ಹಾಗೂ ಪರಿಣಾಮಕಾರಿ ತಾತ್ಕಾಲಿಕ ಕ್ರಮಗಳನ್ನು ಯುಎಸ್ ಕೈಗೊಳ್ಳುತ್ತಿದೆ.

ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಪಾಲುದಾರರ ಒಪ್ಪಿಗೆಯೊಂದಿಗೆ ಈ ನಿರ್ಣಯ ಕೈಗೊಳ್ಳಲಾಗಿದೆ. ಸ್ಥಳೀಯ ಪರಿಸ್ಥಿತಿಗಳು ಹಾಗೂ ಪ್ರಕರಣಗಳನ್ನು ಆಧರಿಸಿಕೊಂಡು ರಾಯಭಾರ ಕಚೇರಿಗಳು ಹಾಗೂ ದೂತವಾಸಗಳಿಗೆ ವೈಯಕ್ತಿಕ ಸಂದರ್ಶನದ ಅಗತ್ಯವಿರಬಹುದು ಎಂದು ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುಧಾರಣೆಗಳು ಅಂತೆಯೇ ಪ್ರಸ್ತುತ ಕಾರ್ಯಾಚರಣೆ ಸ್ಥಿತಿ ಹಾಗೂ ಸೇವೆಗಳ ಕುರಿತಾಗಿ ಇನ್ನಷ್ಟು ವಿವರವಾದ ಮಾಹಿತಿಗಾಗಿ ಅರ್ಜಿದಾರರು ರಾಯಭಾರ ಕಚೇರಿ ಮತ್ತು ದೂತವಾಸದ ವೆಬ್ಸೈಟ್ಗಳನ್ನು ಪರಿಶೀಲಿಸಬೇಕೆಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯಕ್ಕೆ ಕೊರೊನಾ ಮೂರನೇ ಅಲೆ ಭೀತಿ ಎದುರಾಗಿರುವ ಕಾರಣ ಈ ವಿಸ್ತರಣೆ ಅನೇಕರಿಗೆ ಉಪಯೋಗವಾಗಲಿದೆ.

Varthajala Daily, Bengaluru

Post a Comment

0 Comments

Ad Code

Responsive Advertisement