Ticker

6/recent/ticker-posts

Ad Code

Responsive Advertisement

Breaking News: ಬೆಂಗಳೂರಿನಲ್ಲಿ ಇಬ್ಬರಿಗೆ ಒಮಿಕ್ರಾನ್ ಪತ್ತೆ !

ಡಿಸೆಂಬರ್ 2, ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರಿಗೆ ಒಮಿಕ್ರಾನ್ ಪತ್ತೆ. ಒಮಿಕ್ರಾನ್ ಕುರಿತು ಬಿಬಿಎಂಪಿ ಆಯುಕ್ತರಿಂದ ಸಂಜೆ ಅಧಿಕೃತ ಮಾಹಿತಿ ಲಭ್ಯವಾಗಿರುತ್ತದೆ. ಬೆಂಗಳೂರಿನ ಅಂತರಾಷ್ಟೀಯ ವಿಮಾನ ನಿಲ್ದಾಣಕ್ಕೆ ನವಂಬರ್ 16 ರಂದು ಸೌತ್ ಆಫ್ರಿಕಾದಿಂದ ಇಬ್ಬರು ಪ್ರಯಾಣಿಕರು ಬಂದಿದ್ದರು. ಇಬ್ಬರನ್ನು ಟೆಸ್ಟ್ಗೆ ಒಳಪಡಿಸಿದಾಗ ಪಾಸಿಟಿವ್ ಬಂದಿರುವುದು ಪತ್ತೆಯಾಗಿದೆ.

 


ಅವರ ಪಾಸಿಟಿವ್ ಸ್ಯಾಂಪಲ್ ಅನ್ನು ಲ್ಯಾಬ್‌ಗೆ ಕಳಿಸಿ ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್ (genomic sequencing test) ಮಾಡಿಸಿದಾಗ ಒಮಿಕ್ರಾನ್ ಇರುವುದು ಪತ್ತೆಯಾಗಿದೆ. ಈ ಇಬ್ಬರನ್ನು ಕ್ವಾರಂಟೈನ್/ಐಸೋಲೇಶನ್ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ಇಂದು ಸಂಜೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು. 

ಈ ಇಬ್ಬರ ಟ್ರಾವೆಲ್ ಹಿಸ್ಟರಿಗಾಗಿ ಶೋಧ ನಡೆಸಲಾಗುವುದು ಎಂದು ಸಹ ಆಯುಕ್ತರು ತಿಳಿಸಿದರು. ಸೋಂಕಿತರಲ್ಲಿ 2ನೆ ಪೇಷ0ಟ್ ಬೆಂಗಳೂರಿನವರು ಎಂದು ತಿಳಿದು ಬಂದಿದೆ. ಮೊದಲ ಪೇಷ0ಟ್ ಸೌತ್ ಆಫ್ರಿಕಾದವರು ಎಂದು ತಿಳಿದುಬಂದಿದೆ. ಈಗಾಗಲೆ ಇಬ್ಬರಿಗು ನುರಿತ ವೈಧ್ಯರಿಂದ ಸೊಕ್ತ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಕೆಲವು ನಾಗರಿಕರು ಲಸಿಕೆ ಪಡೆಯಲು ಹಿಂಜರಿಯುತ್ತಿರುವುದು ದುರದೃಷ್ಟಕರ.

Post a Comment

0 Comments

Ad Code

Responsive Advertisement