ಡಿಸೆಂಬರ್ 2, ಬೆಂಗಳೂರು: ದೇಶದ ಇತರೆ ರಾಜ್ಯದಿಂದ ಕರ್ನಾಟಕ ರಾಜ್ಯ ಹಾಗು ರಾಜಧಾನಿಗೆ ಬರ್ತಿರೋರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ವಿಮಾನ ನಿಲ್ದಾಣ, ಅಂತರ್‌ರಾಜ್ಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗು ಇನ್ನಿತರೆ ಸ್ಥಳಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟನ ಕ್ರಮ ಕೈಗೊಳ್ಳಲು ರಾಜ್ಯ ಸರಕಾರದಿಂದ ಸೂಚಿಸಲಾಗಿದೆ. ನೆಗೆಟಿವ್ ಬಂದವರಿಗೆ ಮಾತ್ರ ಒಳಗೆ ಬಿಟ್ಟುಕೊಳ್ಳಲಾಗುವುದು ಎಂದರು.
ಸರ್ಕಾರ ಎಲ್ಲೆಡೆ ಕೆಲಸ ಮಾಡುವ ಪ್ರತಿಯೊಬ್ಬರೂ ಲಸಿಕೆ ಪಡೆಯೋದು ಕಡ್ಡಾಯ. ಮುಂದಿನ ದಿನ ಮಾಲ್, ಥಿಯೇಟರ್‌ಗಳಿಗೆ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಿದ್ದೇವೆ. ಸಿನಿಮಾ ಥಿಯೇಟರ್ ನಡೆಸಲು ಅನುಮತಿ ಇದೆ. ಸಿನಿಮಾ, ರೆಸ್ಟೋರೆಂಟ್, ಎಲ್ಲವೂ ನಡೆಯಲಿದೆ. ಎಲ್ಲೇ ನಡೆದ್ರೂ ಮಾಸ್ಕ್ ಕಡ್ಡಾಯ. ಎಲ್ಲರ ಜೀವನ, ಜೀವಾಂಶ ಉಳಿಸೋ ಕೆಲಸ ಮಾಡೋಣ. ಸಿನಿಮಾ ಥಿಯೇಟರ್ ನಡೆಯಲಿದೆ, ಯಾವುದೇ ಬಂದ್ ಆಗೋದಿಲ್ಲ ಎಂದು ಸಹ ತಿಳಿಸಿದರು.
0 Comments