ಬಳ್ಳಾರಿ, ಡಿ. 13: ಸಿರಗುಪ್ಪ ನಗರಸಭೆಯಿಂದ ಕಟ್ಟುನಿಟ್ಟಿನ ರೂಲ್ಸ್ಮಾ, ಸ್ಕ್ ಧರಿಸಿದ್ರೇ ಮಾತ್ರ ಸರಕು/ಸೇವೆ ಒದಗಿಸಿ; ಸಿರುಗುಪ್ಪ ನಗರದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್-೧೯ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ನಗರಸಭೆ ಕೈಗೊಂಡಿದೆ. ಕೋವಿಡ್-೧೯ ೩ನೇ ಅಲೆಯು ಪ್ರಾರಂಭವಾಗಿರುವುದರಿ0ದ ಸಾರ್ವಜನಿಕರು ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಮಾಸ್ಕ್ಗಳನ್ನು ಸರಿಯಾಗಿ ಧರಿಸಬೇಕು. ವಾಣಿಜ್ಯ ವ್ಯಾಪಾರಸ್ಥರು ಮಾಸ್ಕ್ಗಳನ್ನು ಧರಿಸಿದ ಗ್ರಾಹಕರಿಗೆ ಮಾತ್ರ ಸರಕು/ಸೇವೆ ಒದಗಿಸುವಂತೆ ಅವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಮಾಸ್ಕ್ ಕುರಿತು ಸೂಚನಾ ಫಲಕಗಳನ್ನು ತಮ್ಮ ಅಂಗಡಿಗಳಲ್ಲಿ ಅಳವಡಿಸುವಂತೆ ತಿಳಿಸಿದ್ದಾರೆ.ತಪ್ಪಿದಲ್ಲಿ ದಂಡ ವಿಧಿಸಲು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸರ್ಕಾರವು ಏಕಬಳಕೆ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ಪರಿಸರ ಸ್ನೇಹಿ ಕೈಚೀಲ ಹಾಗೂ ಪರಿಕರಗಳನ್ನು ಉಪಯೋಗಿಸಬೇಕು. ಏಕಬಳಕೆ ಪ್ಲಾಸ್ಟಿಕ್‌ನ್ನು ಬಳಸುತ್ತಿರುವುದು ಕಂಡುಬ0ದಲ್ಲಿ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಘನತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಹಸಿತ್ಯಾಜ್ಯ,ಒಣತ್ಯಾಜ್ಯ ಮತ್ತು ಅಪಾಯಕರ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ನಗರಸಭೆಯ ಮನೆ-ಮನೆ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ಕಡ್ಡಾಯವಾಗಿ ನೀಡಬೇಕು.ತಪ್ಪಿದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಸಾರ್ವಜನಿಕರಿಗೆ ಹಾಗೂ ವಾಣಿಜ್ಯ ವ್ಯವಹಾರಗಳ ವ್ಯಾಪಾರಸ್ಥರಿಗೆ ಈಗಾಗಲೇ ಅನೇಕ ಬಾರಿ ತ್ಯಾಜ್ಯ ಸಂಗ್ರಹಣಾ ವಾಹನಗಳು ಹಾಗೂ ಸ್ಥಳೀಯ ದೃಶ್ಯ ಮಾಧ್ಯಮದ ಮೂಲಕವೂ ತಿಳುವಳಿಕೆ ನೀಡಲಾಗಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೋರಿದೆ. ತಪ್ಪಿದಲ್ಲಿ ದಂಡ ವಿಧಿಸುವುದು ಅನಿವಾರ್ಯವಾಗಲಿದ್ದು ಅದಕ್ಕೆ ಅವಕಾಶ ನೀಡದೇ ನಗರಸಭೆಯೊಂದಿಗೆ ಸಹಕರಿಸಿ ನಗರವನ್ನು ಕೋವಿಡ್ ಮುಕ್ತ ಆರೋಗ್ಯಕರ ಮತ್ತು ಸ್ವಚ್ಚ ನಗರವನ್ನಾಗಿಸಲು ಸಹಕರಿಸಲು ಅವರು ಕೋರಿದ್ದಾರೆ.
Varthajala Daily, Bengaluru
0 Comments