ಬಳ್ಳಾರಿ, ಡಿ. 13: ೨೦೨೧-೨೨ನೇ (2021-22) ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ) ಮೆಟ್ರಿಕ್ ಪೂರ್ವ, ಪೋಸ್ಟ್ ಮೆಟ್ರಿಕ್ ಮತ್ತು ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿ.೧೫ ಆಗಿರುತ್ತದೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಶಾಲಾ/ಕಾಲೇಜು ಲಾಗಿನ್‌ನಲ್ಲಿ ಪರಿಶೀಲನೆ ಮತ್ತು ಮುಂದಿನ ಹಂತಕ್ಕೆ ವರ್ಗಾಹಿಸುವುದು ಶಾಲಾ/ಕಾಲೇಜಿನ ಮುಖ್ಯ ಗುರುಗಳು/ಪ್ರಾಂಶುಪಾಲರ ಜವಬ್ದಾರಿಯಾಗಿರುತ್ತದೆ. ಈ ವಿದ್ಯಾರ್ಥಿವೇತನದ ಅರ್ಜಿಗಳನ್ನು ಪರಿಶೀಲನೆ ಅತಿ ತುರ್ತಾಗಿ ಪೂರ್ಣಗೊಳಿಸಲು ಅಲ್ಪಸಂಖ್ಯಾತ ನಿರ್ದೇಶನಾಲಯ ತಿಳಿಸಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಮೊದಲನೇ ಹಂತವಾಗಿ ಇನ್‌ಸ್ಟಿಟ್ಯೂಶನ್ ನೋಡಲ್ ಆಫೀಸರ್ ಆಧಾರ್ ಅಥೆಂಟಿಕೇಶನ್ ಅತಿಮುಖ್ಯವಾಗಿರುತ್ತದೆ. ಈ ಹಂತದ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು; ಇಲ್ಲವಾದಲ್ಲಿ ವಿದ್ಯಾರ್ಥಿವೇತನದ ಪರಿಶೀಲನಾ ಪಟ್ಟಿ ತಮ್ಮ ಶಾಲಾ/ಕಾಲೇಜಿನ ಲಾಗಿನ್‌ನಲ್ಲಿ ಪ್ರದರ್ಶನಗೊಳ್ಳುವುದಿಲ್ಲ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರಾಗುವಲ್ಲಿ ಸಮಸ್ಯೆಯಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಆದ್ದರಿಂದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಶಾಲಾ/ಕಾಲೇಜಿನ ಲಾಗಿನ್‌ನಲ್ಲಿ ಪರಿಶೀಲನೆ ಮತ್ತು ಮುಂದಿನ ಹಂತಕ್ಕೆ ವರ್ಗಾಹಿಸುವುದು ಕಾಲೇಜಿನ ಪ್ರಾಂಶುಪಾಲರ ಜವಬ್ದಾರಿಯಾಗಿರುತ್ತದೆ. ಆದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ/ಕಾಲೇಜುಗಳ ಮುಖ್ಯಗುರುಗಳು/ಪ್ರಾಂಶುಪಾಲರು ಡಿ. 31 ರೊಳಗಾಗಿ ಪರಿಶೀಲನೆ ಪೂರ್ಣಗೊಳಿಸಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಆರ್.ಟಿ.ಒ. ಕಛೇರಿ ಹತ್ತಿರ, ಆಶೀರ್ವಾದ ಶಾಲೆ ಎದುರುಗಡೆ, ಕಂಟೋನ್‌ಮೆ0ಟ್, ಬಳ್ಳಾರಿ ಇಲ್ಲಿಗೆ ಸಂಪರ್ಕಿಸಲು ಕೋರಿದೆ. ದೂ: 08392-245755/8310321101 ಸಂಪರ್ಕಿಸಬಹುದು.
Varthajala Daily, Bengaluru
0 Comments