Ticker

6/recent/ticker-posts

Ad Code

Responsive Advertisement

ಪುರವರ ಹೋಬಳಿಯ ತಾಳಕೆರೆಯಲ್ಲಿ ಸಾವಿರಕ್ಕೂ ಹೆಚ್ಚು ಕೋಳಿಗಳು ಆಕಸ್ಮಿಕ ಸಾವು

ಮಧುಗಿರಿ: ತಾಲೂ ಖುಷಿಕಿನ ಪುರವರ ಹೋಬಳಿಯ ತಾಳ ಕೆರೆಯಲ್ಲಿ ನಿವಾಸಿಯಾದ ನಾಗಭೂಷಣ್ ಎಂಜರಪ್ಪ ರವದು ಕೋಳಿ ಫಾರಂ ಇದ್ದು ಸುಮಾರು ಆರುನೂರರಿಂದ ಸಾವಿರದವರೆಗೆ ಕೋಳಿಗಳು ಆಕಸ್ಮಿಕ ಸಾವನ್ನಪ್ಪಿದ್ದು ಸ್ಥಳಕ್ಕೆ ಕೊಡಿಗೆನಹಳ್ಳಿ ಆರಕ್ಷಕ ಠಾಣೆ ಸಬ್ ಇನ್ಸ್ಪೆಕ್ಟರ್ ನಾಗರಾಜು ಮತ್ತು ಸಿಬ್ಬಂದಿ ಭೇಟಿ ನೀಡಿದರು.


ತಕ್ಷಣ ಸಂಬಂಧಪಟ್ಟ ಇಲಾಖೆಯವರ  ಅಸಿಡೆಂಟ್ ಡೈರೆಕ್ಟರ್ ಕರೆ ಮಾಡಿದ್ದು ಕೋಳಿಗೆ ಯಾವುದೇ ರೀತಿಯ ಪರಿಹಾರ ಬರುವುದಿಲ್ಲವೆಂದು ತಿಳಿಸಿದ್ದರು. ಇದರಿಂದ ತುಂಬಾ ನೊಂದು ಮಾಲೀಕ ನಾಗಭೂಷಣ್ ಎಂಜರಪ್ಪ ಮಾತನಾಡಿ ಸುಮಾರು ಸಾವಿರಕ್ಕೂ ಹೆಚ್ಚು ಕೋಳಿ ಸಾವನ್ನಪ್ಪಿದ್ದು ಸುಮಾರು ನನಗೆ ನಾಲ್ಕರಿಂದ ಐದು ಲಕ್ಷ ನಷ್ಟವಾಗಿದ್ದು ಈಗಾಗಲೇ ನಾನು ತುಂಬಾ ಸಾಲ ಮಾಡಿ ತುಂಬಾ ತೊಂದರೆಗೆ ಇಡಗಿದ್ದೇನೆ ಆದರಿಂದ  ಸಂಬಂಧಪಟ್ಟ ಇಲಾಖೆಯವರು ದಯವಿಟ್ಟು ನಮಗೆ ಪರಿಹಾರವನ್ನು ಒದಗಿಸಿಕೊಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದರು.

ಕರುನಾಡ ವಿಜಯ ಸೇನೆ ಅಧ್ಯಕ್ಷ ತಿಮ್ಮರಾಜು ಮಾತನಾಡಿ ತಾಳಕೆರೆ ಗ್ರಾಮದಿಂದ ಬೆಳಗ್ಗೆ ನನಗೆ ಒಂದು ಫೋನ್ ಕರೆ ಬಂದಿದ್ದು ಅಲ್ಲಿನ ದಲಿತ ನಾಗಭೂಷಣ್ ಎಂಬವರು ನನಗೆ ಕಾಲ್ ಮಾಡಿ ಸರ್ ಇತರ ನನಗೆ ತುಂಬಾ ಅನ್ಯಾಯ ಆಗಿದೆ ಏನು ಮಾಡೋದು ಅಂತ ನನಗೆ ಕೇಳಿದರು ಆಗ ತಕ್ಷಣ ನಾವು ಸಂಘಟನೆಯಿಂದ ಆ ಜಾಗಕ್ಕೆ ಬಂದು ನೋಡಿದಾಗ ತುಂಬಾ ಅಂದರೆ ತುಂಬಾ ಬೇಜಾರಾಯ್ತು ಆ ವ್ಯಕ್ತಿ ತುಂಬಾ ಕಷ್ಟಪಟ್ಟು ಸಾಲ ಮಾಡಿ ಇವುಗಳನ್ನು ಬೆಳೆಸಿ ಇನ್ನೇನು ಫಸಲಿಗೆ ಬಂದು ಕೊಡುವಂತಹ ಸಮಯಕ್ಕೆ ಸರಿಯಾಗಿ ಇತರ ಆಗಿಬಿಟ್ಟಿದೆ ದಯವಿಟ್ಟು ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಇವರಿಗೆ ಸ್ಪಂದಿಸಿ ಈತನಿಗೆ ಸ್ವಲ್ಪ ನಷ್ಟ ಪರಿಹಾರವನ್ನು ಕೊಟ್ಟರೆ ಜೀವನದಲ್ಲಿ ಸ್ವಲ್ಪ ನೆನೆಸಿಕೊಳ್ಳುತ್ತಾನೆ ಹಾಗೆ ಜೀವನ ನಡೆಸಿಕೊಳ್ಳುತ್ತೇನೆ ಈತನಿಗೆ ಸ್ಪಂದಿಸಿ ಎಂದರು.

Post a Comment

0 Comments

Ad Code

Responsive Advertisement