Ticker

6/recent/ticker-posts

Ad Code

Responsive Advertisement

ತಂತ್ರಜ್ಞಾನ ಮುಂದುವರಿದಿದ್ದರೂ ಬೇಸಾಯ ಪದ್ಧತಿ ಮಾರ್ಪಾಡು ಆದ ಹಿನ್ನಲೆಯಲ್ಲಿ ಅಪೌಷ್ಠಿಕ ಆಹಾರ ದೊರೆಯಿತ್ತಿರುವುದು ಬೇಸರದ ಸಂಗತಿ

 ಮಧುಗಿರಿ - ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಬೇಸಾಯ ಪದ್ಧತಿ ಮಾರ್ಪಾಡು ಆದ ಹಿನ್ನಲೆಯಲ್ಲಿ ಅಪೌಷ್ಠಿಕ ಆಹಾರ ದೊರೆಯಿತ್ತಿರುವುದು ಬೇಸರದ ಸಂಗತಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸಿ.ಶಂಕರಪ್ಪ ತಿಳಿಸಿದರು.



ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಿಸಾನ್ ಗೋಷ್ಠಿ ಮತ್ತು ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಿಪ್ಪೆಗೊಬ್ಬರ-ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ಆಹಾರ ಎಂದಿಗೂ ಕಲುಷಿತವಾಗುತ್ತಿರಲಿಲ್ಲ. ವ್ಯವಸಾಯ ವ್ಯವಸ್ಥೆಯನ್ನು ಸರಿಪಡಿಸಿಕೊಂಡು ನೀರಾವರಿಗೆ ಆದ್ಯತೆ, ಮಾರುಕಟ್ಟೆ ಬಲಪಡಿಸುವ ಮೂಲಕ ಸರ್ಕಾರ ರೈತರ ನೆರವಿಗೆ ಬರಬೇಕು. ಸರ್ಕಾರ ಟ್ರ್ಯಾಕ್ಟರ್ ಗಳಿಗೆ ಹೇಗೆ ಸಬ್ಸಿಡಿ ನೀಡುತ್ತಿದೆ ಅದೇ ರೀತಿ ಎತ್ತಿನ ಗಾಡಿಗಳು ನೀಡುವಂತಾಗಬೇಕು. ಅತಿಯಾದ ರಸಾಯನಿಕ ಸಿಂಪಡನೆಯಿಂದಾಗಿ ಭೂಮಿಯಲ್ಲಿ ಫಲವತ್ತತೆ ನಾಶವಾಗಿ ಸೂಕ್ಷ್ಮಾಣುಜೀವಿಗಳು ಇಲ್ಲದಂತಾಗಿದೆ. ರೈತರನ್ನು ಆರ್ಥಿಕವಾಗಿ ಸದೃಢ ಪಡಿಸದ ಹೊರತು ರೈತ ದಿನಾಚರಣೆ ಆಚರಣೆಗೆ ಅರ್ಥ ಬರುವುದಿಲ್ಲವೆಂದರು. 

ಬಿಜೆಪಿ ನೇತೃತ್ವದ ಸರ್ಕಾರಗಳಲ್ಲಿ ರೈತರಿಗೆ ಮಾರಕವಾಗುವಂತಹ ಕಾಯ್ದೆಗಳು ಜಾರಿಯಲ್ಲಿವೆ. ಕರ್ನಾಟಕದಲ್ಲಿಯೂ ಕೂಡ ದೆಹಲಿ ಮಾದರಿಯ ಹೋರಾಟ ನಡೆಯಬೇಕಾಗಿದೆ. ಇಸ್ರೇಲ್ ನಂತಹ ಪುಟ್ಟ ದೇಶದಲ್ಲಿ ಸಂಪೂರ್ಣ ನೀರಾವರಿ ಕೃಷಿ ಪದ್ದತಿ ಇರಬೇಕಾದರೆ ನಮ್ಮ ದೇಶದಲ್ಲಿ ಆಗುತ್ತಿಲ್ಲವೇಕೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ರಾಸಾಯನಿಕ ಸಿಂಪಡಣೆಯಿಂದ ವಾತಾವರಣದ ಜೊತೆಗೆ ನೀರು ಕಲುಷಿತಗೊಂಡು ಮನುಷ್ಯನ ಆಯಸ್ಸು ಕ್ಷೀಣಿಸಲು ಕಾರಣವಾಗಿದೆ ಎಂದರು.

ಭೂಮಿ ಅಕ್ಷಯಪಾತ್ರೆ ಯಾಗಿದ್ದು ಕಾಪೆರ್Çರೇಟರ್ ಗಳಿಗೆ ಭೂಮಿ ಹಸ್ತಾಂತರವಾಗುತ್ತಿರುವುದರಿಂದ ರೈತ ಮತ್ತು ಕೃಷಿ  ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ತುಳಿಯುತ್ತಿರೋದು ವಿಪರ್ಯಾಸವಾಗಿದೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ  ಡಾ. ಹನು ಮಂತರಾಯಪ್ಪ ಕೃಷಿ ಸಮಾಜ ಉಪಾಧ್ಯಕ್ಷ ಚೆನ್ನಲಿಂಗಪ್ಪ, ಅಮರಾವತಿ ಗಂಗಾಧರ, ತುಂಗೋಟಿ ಲಕ್ಷ್ಮೀಕಾಂತ, ಗುಟ್ಟೆ ರಮೇಶ್, ಉಮೇಶ್, ಸಿದ್ಧಾಪುರ ರಂಗಶ್ಯಾಮಣ್ಣ, ರೈತ ವೇದಿಕೆ ಅಧ್ಯಕ್ಷ ಸುನೀಲ್ ಕುಮಾರ್, ಮಿಡಿಗೇಶಿ ನಾಗಣ್ಣ, ಮಿಡಿಗೇಶಿ ಗ್ರಾಪಂ ಅಧ್ಯಕ್ಷೆ ಪ್ರೇಮಲತಾ ರವಿಕುಮಾರ್,  ಮೀನುಗಾರಿಕೆ ಇಲಾಖೆ ರಂಗಸ್ವಾಮಿ, ತೋಟಗಾರಿಕೆ ಇಲಾಖೆಯ ವಿಶ್ವನಾಥ ಗೌಡ, ರೇμÉ್ಮ ಇಲಾಖೆ ಲಕ್ಷ್ಮಿನರಸರಸಯ್ಯ, ಅರಣ್ಯ ಇಲಾಖೆಯ ಮಂಜುನಾಥ್, ಹೋಬಳಿಯ ಕೃಷಿ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರದವರು, ಎಪಿಎಂಸಿ ಸದಸ್ಯ ಬಸವರಾಜು ಹಾಗೂ ಇತರರು ಇದ್ದರು.

Post a Comment

0 Comments

Ad Code

Responsive Advertisement