ಮಧುಗಿರಿ:ಬೆ ಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಪೊಲೀಸ್ ಜೀಪಿಗೆ ಬೆಂಕಿ ಹಾಗೂ ಕನ್ನಡ ಬಾವುಟಕ್ಕೆ ಅಪಮಾನ ಮಾಡುವುದು ಕೂಡಲೇ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಮಧುಗಿರಿ ತಾಲೂಕು ಕನಕ ಕುರುಬ ಸಂಘ ಹಾಗೂ ಕನ್ನಡಪರ ಸಂಘಟನೆಗಳಿಂದ ಕಾಲ್ನಡಿಗೆ ಮೂಲಕ ಉಪ ವಿಭಾಗಧಿಕಾರಿಗೆ ಮನವಿ ಸಲ್ಲಿಸಿದರು.
ಮಧುಗಿರಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಕಾಲ್ನಡಿಗೆ ಜಾಥಮೂಲಕ ಪ್ರಮುಖ ಬೀದಿಗಳ ಮೂಲಕ ತೆರಳಿ ಉಪವಿಭಾಗಧಿಕಾರಿಗೋಳ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಮರುವೆಕೆರೆ ಸುರೇಶ್ ಬಾಬು ಸಮಾಜದ ಹಿರಿಯ ಮುಖಂಡ
ಬೆಳಗಾವಿಯಲ್ಲಿ ಗೆದ್ದಿರುವ ಯಾವ ಶಾಸಕರು ಮಾತನಾಡುತ್ತಿಲ್ಲ, ಎಂ.ಇಎಸ್ ಹಾಗೂ ಶಿವಸೇನೆಯ ಪುಂಡರನ್ನು ಬಂಧಿಸಿ ಕೂಡಲೇ ರೌಡಿ ಶೀಟರ್ ಓಪನ್ ಮಾಡಬೇಕು ಇಲ್ಲದಿದ್ದರೆ ರಾಜ್ಯದಾಂತ್ಯ ಉಗ್ರರ ಹೋರಾಟ ಮಾಡುತ್ತೇವೆ.
ಹಾಲು ಮತ ಕುರುಬ ಸಮಾಜದ ಹೋರಾಟಕ್ಕೆ ಮಧುಗಿರಿಯ ವಿವಿಧ ಕನ್ನಡ ಪರ ಸಂಘನೆಗಳು ಸಹಕಾರ ನೀಡಿ ಶಾಮತಿಯು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ರಾಮಂಜಿ ಮರುವೆಕೆರೆ ವಿಎಸ್ಸೆಸ್ಸೆಎನ್ ಅಧ್ಯಕ್ಷ
ಸಂಗೋಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸ ಮಾಡಿರುವುದು, ಕನ್ನಡ ನೆಲ ಜಲ ಬಳಸಿಕೊಂಡು ಕನ್ನಡಿಗರ ಮೇಲೆ ದಬ್ಬಾಳಿಕೆ ಸಹಿಸಲಾಗುದು, ಕೂಡಲೇ ನಿರಾದಕ್ಷಿಣಾವಾಗಿ ಕ್ರಮ ಕೈಗೊಳ್ಳಬೇಕು ಪುಂಡಾಟಿಕೆ ಮಾಡಿರುವುದು ಸರಿಯಲ್ಲ ಯಾವುದೆ ಒತ್ತಡಕ್ಕೆ ಮಣಿಯದ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.
ಈ ಸಂಧರ್ಭದಲ್ಲಿ ಮರುವೆಕರೆ ವಿಎಸ್ಸೆಸ್ಸೆನ್ ಅಧ್ಯಕ್ಷ ರಾಮಂಜಿ, ಮುಖಂಡರಾದ ಕೆ.ಜಿ ಶ್ರೀನಿವಾಸ್, ಮಕ್ತಿಯಾರ್, ಗುಂಡಗಲ್ಲು ಜಗನ್ನಾಥ್, ಶ್ರೀನಿವಾಸ್, ಹಾಗೂ ಕುರುಬ ಸಮಾಜ ಮುಖಂಡರಾದ ನಾಗರಾಜು, ನರಸಿಂಹಮೂರ್ತಿ, ಮುದ್ದರಂಗಯ್ಯ, ಪುಟ್ಟರಾಜು ತಿಮ್ಮರಾಜು (ಎಲ್ ಐ ಸಿ ) ತಿಮ್ಮರಾಜು ವಕೀಲರು ಹಾಜರಿದ್ದರು.
0 Comments