ಬೆಂಗಳೂರು : ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆ ದುಷ್ಕೃತ್ಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವುದನ್ನು ಪ್ರತಿಭಟಿಸಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಯಶವಂತಪುರ ಮಾರುಕಟ್ಟೆ ವೃತ್ತದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಡಾ. ರಾಜಕುಮಾರ್ ಅಭಿಮಾನಿಗಳ ಸಂಘ, ಜೈ ಕರ್ನಾಟಕ, ಕನ್ನಡ ಸೇನೆ ಇನ್ನೂ ಮುಂತಾದ ಸಂಘಟನೆಗಳ ಒಕ್ಕೂಟದ ವತಿಯಿಂದ ಮಹಾರಾಷ್ಟ್ರ ಮುಖ್ಯ ಮಂತ್ರಿ ಉದ್ಧವ್ ಠಾಕ್ರೆಯ ಭೂತ ದಹನವನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಎಂ.ಸಿ., ಡಾ.ಜಿ.ಎಸ್.ಚೌಧರಿ, ಎನ್.ಆರ್.ಪರಮೇಶ್ವರಯ್ಯ, ಕನ್ನಡಸೇನೆ ಮಲ್ಲೇಶ್ವರಂ ಅಧ್ಯಕ್ಷ ರಾಜಶೇಖರ್ (ರಾಜು), ರಾಮಮೂರ್ತಿ, ಸಮೀಯುಲ್ಲಾ ಖಾನ್, ಎಸ್.ಎಂ.ಸುರೇಶ್, ಸುಂದರೇಶ ಮೆನನ್ ಮುಂತಾದ ಅನೇಕ ಕನ್ನಡ ಪ್ರಮುಖ ಹೋರಾಟಗಾರರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
0 Comments