Ticker

6/recent/ticker-posts

Ad Code

Responsive Advertisement

ವೀರಾಂಜನೇಯ ಸ್ವಾಮಿ ದೇವಸ್ಥಾನ ಕಟ್ಟಿ ಮಾನವೀಯತೆ ಮೆರೆದ ಅಣ್ಣಯ್ಯ ರೆಡ್ಡಿ ಕುಟುಂಬ

 K.R. ಪುರ.ಪೂರ್ವ ತಾಲೂಕಿನ ವಿಜನಾಪುರದ FCI ಮುಖ್ಯರಸ್ತೆ ಅಣ್ಣಯ್ಯ ರೆಡ್ಡಿ ಕಾಂಪೌಂಡ್ ನಲ್ಲಿನೆಲಸಿರುವ ಐವತ್ತು ವರ್ಷಗಳ ಇತಿಹಾಸವಿರುವ ಅಣ್ಣಯ್ಯ ರೆಡ್ಡಿ ಕುಟುಂಬದವರು ವೀರಾಂಜನೇಯ ಸ್ವಾಮಿ ದೇವಸ್ಥಾನದ ಸ್ಥಳವನ್ನು ದಾನಮಾಡಿ ದೇವಸ್ಥಾನದ ಕಟ್ಟಡವನ್ನು ಕಟ್ಟಿ ಮಾನವೀಯತೆ ಮೆರೆದಿದ್ದಾರೆ.

ಅದೇರೀತಿ ಅವರ ಮಗ ನಾಗಭೂಷಣ ರೆಡ್ಡಿರವರು ಮತ್ತು ಇವರ ಕುಟುಂಬದ ಹಿರಿಯರಾದ ವಾಸುದೇವರೆಡ್ಡಿ ಮತ್ತು ಓಬಳ ರೆಡ್ಡಿರವರು ಇಂದಿಗೂ ಈ ವೀರಾಂಜನೇಯ ಸ್ವಾಮಿ ದೇವಸ್ಥಾನವನ್ನು ನಡೆಸಿಕೊಂಡು ಬರುತ್ತಿರುವುದು ಸಂತೋಷದ ಸುದ್ದಿ.

ಈ ಭಾಗದ ಜನ ಭಕ್ತಾ ಪೂರ್ವಕವಾಗಿ ಸುಮಾರು ಭಕ್ತಾದಿಗಳು ದೇವಸ್ಥಾನದ ಪೂಜಾಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದು ಇಂದು ದಿನಾಂಕ:-16/12/2021 ರಂದು ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದರೂ ಪಕ್ಕದ ಒಂದು ಕೊಠಡಿಯಲ್ಲಿ ದೇವರನ್ನು ಇರಿಸಿ ನಿತ್ಯವೂ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದು ಪ್ರತಿವರ್ಷವೂ ನಡೆದಂತೆ ಈ ವರ್ಷವೂ ಕೂಡ ಹನುಮ ಜಯಂತಿಯನ್ನುV. ರಾಮು,H. ರಮೇಶ್, ಪ್ರಸನ್ನಕುಮಾರ್, ಹೇಮಂತಕುಮಾರ್, M.ಬಾಬು, ಪ್ರಕಾಶ್, ಶಂಕರ್,B. ಬಾಬು,D. ಬಾಬು, ಏಳುಮಲೈ, ಜಗನ್ ,ಮಂಜು,ಕಿಟ್ಟಿ, M.ಸುರೇಶ್ ಶ್ರೀನಿವಾಸ್ , ಅನು,ಗಿರಿ, ಚಾಮುಂಡಿ, Y. ಮುರುಗೇಶ್, ವೆಂಕಟೇಶ್, ವೇದ, ಪ್ರಕಾಶ್,ಸ್ಟ್ಯಾಲಿನ್, H.K. ಕೃಷ್ಣಕುಮಾರ್ ,ರಾಮಚಂದ್ರ ಸೇವಾಕರ್ತ ರಾಗಿ ಸೇವೆ ಸಲ್ಲಿಸುತ್ತಿದ್ದು ನಾಗವಳ್ಳಿ, ಮಾಜಿ ನಗರಸಭಾ ಸದಸ್ಯರಾದ ಭಾಸ್ಕರ್ ನಾಗರಾಜ್, ಮಾಜಿ ಕಾರ್ಪೊರೇಟರ್ ಗಳಾದ S.S. ಪ್ರಸಾದ್,S.G. ನಾಗರಾಜ್,H.S. ಅಮಾನುಲ್ಲಾ G.ಟೀಕಾ ರಾಮನ್ ಮತ್ತು ಪೈ ಲೇಔಟ್ ನಾಗರಾಜ್ ಈ ದೇವಸ್ಥಾನಕ್ಕೆ ತಮ್ಮ ತನು-ಮನ-ಧನಗಳನ್ನು ಅರ್ಪಿಸುತ್ತಾ ಎಲ್ಲಾ ಪೂಜಾ ಕೈಂಕರ್ಯಗಳನ್ನು ಮಾಡಲು ಸಹಕರಿಸುತ್ತಾ ತಮ್ಮ ಸಹಾಯ ಹಸ್ತ ನೀಡುತ್ತಾ ಬಂದಿರುತ್ತಾರೆ.

ಈದಿನ ವಿಶೇಷವಾಗಿ ಹನುಮ ಜಯಂತಿ ಪ್ರಯುಕ್ತ ಮಾಜಿ ಕಾರ್ಪೊರೇಟರ್ ಗಳಾದ V. ಸುರೇಶ್ ರವರು ಅರ್ಚನೆ ಮಾಡಿಸಿ ಪೂಜೆ ಮಾಡಿಸಿ ದೇವರ ಕೃಪೆಗೆ ಪಾತ್ರರಾಗಿರುತ್ತಾರೆ ದೇವಸ್ಥಾನದ ಸೇವಾಕರ್ತರು ಇವರಿಗೆ ಶಾಲುಹೊದಿಸಿ ಸನ್ಮಾನ ಮಾಡಿರುತ್ತಾರೆ. ಮತ್ತು ಇವರು ಕೂಡ ದೇವಸ್ಥಾನಕ್ಕೆ ಮಾನ್ಯ ಶಾಸಕರು ಗಳು ಮತ್ತು ಮಂತ್ರಿಗಳಾದ B.A. ಬಸವರಾಜ್ ಕಡೆಯಿಂದ ಐದು ಲಕ್ಷ ರೂಗಳನ್ನು ದೇವಸ್ಥಾನದ ಅಭಿವೃದ್ಧಿಗೆ ಎಲ್ಲರ ಕೋರಿಕೆಯ ಮೇರೆಗೆ ದೇಣಿಗೆ ಕೊಡಿಸಿರುತ್ತಾರೆ ಒಟ್ಟಾಗಿ ತೀರ್ಥ ಲಾಡು ಪ್ರಸಾದ ವಿನಿಯೋಗಿಸಿ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ನೆರವೇರಿಸಿರುತ್ತಾರೆ.

Report : B.R.Nagaraj
SHOW LESS

Post a Comment

0 Comments

Ad Code

Responsive Advertisement