Ticker

6/recent/ticker-posts

Ad Code

Responsive Advertisement

ವಿಜಯನಗರ ಆದ್ಮೇಲೆ ಆನಂದ್ ಸಿಂಗ್ ಬಳ್ಳಾರಿ ಮರ್ತೇ ಬಿಟ್ಟವ್ರೆ: ರೆಡ್ಡಿ ವ್ಯಂಗ್ಯ

ವಿಜಯನಗರ ಜಿಲ್ಲೆ ರಚನೆ ಆದ ಮೇಲೆ ಆನಂದ್ ಸಿಂಗ್ ಬಳ್ಳಾರಿಯನ್ನೇ ಮರೆತಿದ್ದಾರೆ. ಹೈಪ್ರೊಫೈಲ್ ರಾಜಕಾರಣಿ ಆದ ಅವರ ಬದಲು ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ಕೊಡಿ ಎಂದು ಸೋಮಶೇಖರ್ ರೆಡ್ಡಿ ವ್ಯಂಗ್ಯ ಮಾಡಿದ್ದಾರೆ.


ವಿಜಯನಗರ ಆದ್ಮೇಲೆ ಆನಂದ್ ಸಿಂಗ್ ಬಳ್ಳಾರಿ ಮರ್ತೇ ಬಿಟ್ಟವ್ರೆ: ರೆಡ್ಡಿ ವ್ಯಂಗ್ಯ

ವಿಜಯನಗರ ಜಿಲ್ಲೆ ರಚನೆ ಆದ ಮೇಲೆ ಆನಂದ್ ಸಿಂಗ್ ಬಳ್ಳಾರಿಯನ್ನೇ ಮರೆತಿದ್ದಾರೆ. ಹೈಪ್ರೊಫೈಲ್ ರಾಜಕಾರಣಿ ಆದ ಅವರ ಬದಲು ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ಕೊಡಿ ಎಂದು ಸೋಮಶೇಖರ್ ರೆಡ್ಡಿ ವ್ಯಂಗ್ಯ ಮಾಡಿದ್ದಾರೆ.

ಬಳ್ಳಾರಿ: ಸಚಿವ ಆನಂದ್ ಸಿಂಗ್  ಹೈ ಪ್ರೊಫೈಲ್ ರಾಜಕಾರಣಿ. ಅವರು ಕೇವಲ ವಿಜಯನಗರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಕಿಡಿ ಕಾರಿದ್ದಾರೆ. ವಿಜಯನಗರ ಜಿಲ್ಲೆ ಆದ ಮೇಲೆ ಆನಂದ ಸಿಂಗ್ ಅವರು ಬಳ್ಳಾರಿ ಮರಿತಿದ್ದಾರೆ‌. ಇನ್ನೊಂದು ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಶ್ರೀರಾಮುಲು ಅವರಿಗೆ ವಹಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳೂ ನಡೆದಿದ್ದು, ಸಿಎಂ ಅವರನ್ನೂ ಸಹ ಭೇಟಿ ಮಾಡಿ ಮನವರಿಕೆ ಮಾಡಲಾಗಿದೆ. ಒಂದು ವೇಳೆ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಆನಂದ್‌ ಸಿಂಗ್ ಅವರು ವಿಜಯನಗರ ಜಿಲ್ಲೆಗೆ ಮಾತ್ರ ಸೀಮಿತ ಆಗಿದ್ದಾರೆ. ಶ್ರೀರಾಮುಲು ಲೋಫೈ ರಾಜಕಾರಣಿ, ಹೀಗಾಗಿ ಅವರಿಗೆ ಬಳ್ಳಾರಿ ಉಸ್ತುವಾರಿ ಕೊಡಬೇಕು ಎಂದು ಆನಂದ್ ಸಿಂಗ್ ಅವರನ್ನ ಕುಹಕವಾಡಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಕುರಿತು ಮಾತನಾಡಿದ ಅವರು, ಈ ಬಗೆಯ ವಿಚಾರವೇ ನಡೆದಿಲ್ಲ. ಸಿಎಂ ಬದಲಾಗುವುದಿಲ್ಲ, ಅರಾಮಾಗಿ ನಮ್ಮ ಸರ್ಕಾರ ಮುಂದುವರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಂದೆಯೂ ನಮ್ಮ ಸರ್ಕಾರ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರೆಡ್ಡಿ, ನನ್ನ ಹಣೆಯಲ್ಲಿ ನಾನು ಮಂತ್ರಿ ಆಗಬೇಕು ಅಂತಾ ಬರೆದಿದ್ರೆ ಅದನ್ನು ಯಾರೂ ತಪ್ಪಿಸುವುದಕ್ಕೆ ಆಗಲ್ಲ. ನನಗೆ ಸಚಿವ ಸ್ಥಾನ ನೀಡುವುದು ದೇವರಿಗೆ ಬಿಟ್ಟ ವಿಚಾರ ಎಂದು ಮಂತ್ರಿಮಂಡಲ ವಿಸ್ತರಣೆ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದರು.

Post a Comment

0 Comments

Ad Code

Responsive Advertisement