ಇತ್ತೀಚೆಗೆ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಚುನಾಯಿತರಾದ ಮಾನ್ಯ ಶ್ರೀ ಅಶೋಕ ಹರ‍್ನಹಳ್ಳಿ ಅವರಿಗೆ ಕರ್ನಾಟಕ ರಾಜ್ಯ ವಿಪ್ರ ಫೋಟೋಗ್ರಾಫರ್ಸ್ ಹಾಗೂ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ (ಏSಗಿPಗಿಂ) (ರಿ) ಪರವಾಗಿ ಈ ಮೂಲಕ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ ಹಾಗೂ ಮುಂಬರುವ ದಿನಗಳಲ್ಲಿ ಮಹಾಸಭೆಯ ಮೂಲಕ ಬ್ರಾಹ್ಮಣ ಸಮುದಾಯಕ್ಕೆ ಬಹಳಷ್ಟು ಪ್ರಯೋಜನಕಾರಿ ಕಾರ್ಯಕ್ರಮಗಳು ಜರುಗಲಿ ಎಂದು ಆಶಿಸುತ್ತದೆ.
ಕರ್ನಾಟಕ ರಾಜ್ಯ ವಿಪ್ರ ಫೋಟೋಗ್ರಾಫರ್ಸ್ ಹಾಗೂ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ತನ್ನ ಸದಸ್ಯರಿಗೆ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಯೋಜಿಸಿ ಅನುಷ್ಠಾನಗೊಳಿಸುತ್ತಿದ್ದು, ಮಹಾಸಭೆಯು ನಮ್ಮ ಸಂಘವನ್ನೂ ತನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ವಿನಂತಿಸುತ್ತದೆ.
ಅಧ್ಯಕ್ಷರಾದ ರಮೇಶ್. ಬಿ,ಕೆ ಹಾಗೂ ಪದಾಧಿಕಾರಿಗಳು ಮಹಾಸಭೆಯ ಚುನಾನಣೆಯಲ್ಲಿ ಮತ ಚಲಾಯಿಸುವಂತೆ ಸಂಘದ ಸದಸ್ಯರುಗಳಿಗೆ ಹಾಗೂ ಮಹಾಸಭೆಗೆ ಸದಸ್ಯರಾಗದವರನ್ನು ಸದಸ್ಯತ್ವ ಪಡೆದುಕೊಳ್ಳುವಂತೆ ವಿನಂತಿಸಿಕೊಳ್ಳುವ ಮೂಲಕ ಮಹಾಸಭೆಗೆ ತನ್ನ ಬೆಂಬಲವನ್ನು ಸೂಚಿಸಿದೆ.
ಎಲ್ಲ ಬ್ರಾಹ್ಮಣ ಸಂಸ್ಥೆಗಳೂ ಒಗ್ಗಟ್ಟಿನಿಂದ ಕೆಲಸ ಮಾಡುವ ಅವಶ್ಯಕತೆ ಇದೆ ಹಾಗೂ ಈ ಕಾರಣ ಸಂಘವು ಮಹಾಸಭೆಯನ್ನೂ ಒಳಗೊಂಡು ಇತರ ಬ್ರಾಹ್ಮಣ ಸಂಘ ಸಂಸ್ಥೆಗಳನ್ನು ಭೇಟಿಯಾಗಿ ಪರಸ್ಪರತೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ವಿನಂತಿಸಲಿದೆ.

0 Comments