ಬಳ್ಳಾರಿ, ಡಿ 09: ತಮಿಳುನಾಡಿನ ಕುನೂರು ಬಳಿ ದಿನಾಂಕ 08-12-2021 ರಂದು ಹೆಲಿಕಾಪ್ಟರ್ ದಿಂದ ಭಾರಿ ದುರಂತ ಸಂಭವಿಸಿದ್ದು, ಸೇನಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಬಿಪಿನ್ ರಾವತ್ ಹಾಗು ಅವರ ಧರ್ಮಪತ್ನಿ ಮಧುಲಿಕಾ ರಾವತ್ ಸೇರಿದಂತೆ ಹೆಲಿಕಾಪ್ಟರ್ ನಲ್ಲಿದ್ದ ಇತರ ೧೩ ಮಂದಿ ಸೇನಾ ಸಿಬ್ಬಂಧಿಗಳು ಸಾವನ್ನಪ್ಪಿದ್ದಾರೆ. ಈ ಘಟನೆ ದೇಶಕ್ಕೆ ತುಂಬಲಾರಾದಷ್ಟು ನಷ್ಟವನ್ನು ಉಂಟುಮಾಡಿದೆ ಎಂದರು. ಈ ದುರಂತದಲ್ಲಿ ಮರಣ ಹೊಂದಿದ ಎಲ್ಲಾರ ಆತ್ಮಕ್ಕೆ ಶಾಂತಿ ಕೋರಿ ದಿನಾಂಕ 09-12-2021 ರ ಗುರುವಾರ ದಂದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಭಾವಪೂರ್ಣ ಶ್ರಧ್ದಾಂಜಲಿಯನ್ನು ಮೌನಾಚರಣೆಯ ಮೂಲಕ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಎಂ.ಕುಮಾರಮ್ಮ, ಪ್ರಧಾನ ಕಾರ್ಯದರ್ಶಿಗಳಾದ ಕಾಂತಿ ನೋಹ ವಿಲ್ಸನ್, ಐ.ಎನ್.ಟಿ.ಯು.ಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ತಾಯಪ್ಪ, ಬ್ರೂಸ್ ಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅರ್ಷದ್ ಅಹಮ್ಮದ್ ಗನಿ, ಕಾರ್ಮಿಕ ಘಟಕದ ಅಧ್ಯಕ್ಷರಾದ ಲಕ್ಷ್ಮಣ, ಎಸ್.ಸಿ ಘಟಕದ ಮಹಿಳಾ ಅಧ್ಯಕ್ಷರಾದ ಕಮಲ ಬಸವರಾಜ, ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಲೀನಾ ರೆಡ್ಡಿ, ಕಾರ್ಮಿಕ ಘಟಕದ ಸಂಘಟನಾ ಕಾರ್ಯದರ್ಶಿಯಾದ ಎರಿಸ್ವಾಮಿ.ಹೆಚ್, ಮುಖಂಡರಾದ ಅಲಿವೇಲು ಸುರೇಶ್, ಶಮೀಮ್ ಮೈನುದ್ಧಿನ್ ಜಕ್ಲಿ, ಬಿ.ಎ.ಮಲ್ಲೇಶ್ವರಿ, ಅತ್ತಾಉಲ್ಲಾ, ಲಿಂಗರಾಜ, ವಿವೇಕ್, ರಾಜೇಶ್, ಶಿವು, ಖಾದರ್ ಹಾಗೂ ಇತರ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.
Varthajala Daily, Bengaluru
0 Comments