Ticker

6/recent/ticker-posts

Ad Code

Responsive Advertisement

ಮೋರೆ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ..

 ಮಾಜಿ ಸಚಿವ ಶ್ರೀ ಎಸ್.ಆರ್ಮೋರೆ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಮಾನ್ಯಶ್ರೀ ಬಸವರಾಜ ಹೊರಟ್ಟಿ  ಸಂತಾಪ..

ರಾಜ್ಯದ ಮಾಜಿ ಸಚಿವರು,  ಧಾರವಾಡ ನಗರದ ಮಾಜಿ  ಶಾಸಕರೂಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ  ಶ್ರೀ ಎಸ್.ಆರ್ಮೋರೆ ಅವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಮಾನ್ಯಶ್ರೀ ಬಸವರಾಜ ಹೊರಟ್ಟಿ   ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೋರೆಯವರ ನಿಧನದ  ಸುದ್ದಿ ಕೇಳಿ ತುಂಬಾ ದುಃಖವಾಗಿದೆಕಳೆದ ನಾಲ್ಕು ದಶಕಗಳಿಂದ ಆತ್ಮೀಯರಾಗಿದ್ದ ಮೋರೆಯವರು ಬಡವರ ಬಗೆಗೆ ಅತೀವ ಕಾಳಜಿ ಹೊಂದಿದ್ದ ಅಪರೂಪದ  ರಾಜಕಾರಣಿಯಾಗಿದ್ದರು

ಮಿತಭಾಷಿಯಾಗಿ, ಎಲ್ಲರೊಂದಿಗೂ ಸೌಜನ್ಯದೊಂದಿಗೆ ಬೆರೆಯುವ ಸ್ನೇಹಮಯ ವ್ಯಕ್ತಿತ್ವ ಮೋರೆಯವರದಾಗಿತ್ತು ಎಂದು ಮಾನ್ಯಶ್ರೀ ಹೊರಟ್ಟಿಯವರು ಬಣ್ಣಿಸಿದ್ದಾರೆ.

ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಿಕುಟುಂಬಸ್ಥರು ಹಾಗೂ ಆಪ್ತರಿಗೆ ದುಃಖ ಭರಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುವುದಾಗಿ ಹೊರಟ್ಟಿ ಯವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ... 


Post a Comment

0 Comments

Ad Code

Responsive Advertisement