Ticker

6/recent/ticker-posts

Ad Code

Responsive Advertisement

ಹೋಟೆಲ್ ಉದ್ಯಮದಾರರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ*

ಬೆಂಗಳೂರು : ನಗರದ ಕೆಂಪೇಗೌಡ ರಸ್ತೆಯ  ಎಫ್ ಕೆ ಸಿ ಸಿ ಐ ಸಭಾಂಗಣದಲ್ಲಿ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (ರಿ) ದ 86 ನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ, ಹೋಟೆಲ್ ಉದ್ಯಮದಲ್ಲಿ ನಿರತರಾಗಿರುವವರ ಪ್ರತಿಭಾನ್ವಿತ  ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

  


ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ  ಸುಮಾರು ಐವತ್ತು ಜನ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರೋತ್ಸಾಹ ಧನದ ಚೆಕ್ಕುಗಳನ್ನು ಎಫ್ ಕೆ ಸಿ ಸಿ ಐ ಅಧ್ಯಕ್ಷ ಡಾ. ಐ.ಎಸ್.ಪ್ರಸಾದ್ ಹಾಗೂ ಸಂಘದ ಗೌರವಾಧ್ಯಕ್ಷರು ಹಾಗೂ ನಂದನಾ ಹೋಟೆಲ್ ಗ್ರೂಪ್‌ ನ ಚೇರ್ಮನ್ ಆರ್.ರವಿಚಂದರ್ ರವರು ವಿತರಿಸಿದರು.

 

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ  ಪಿ.ಸಿ.ರಾವ್, ಸುಧಾಕರ್ ಶೆಟ್ಟಿ, ಸುಬ್ರಹ್ಮಣ್ಯ ಹೊಳ್ಳ, ಶಕೀರ್, ವೀರೇಂದ್ರ ಕಾಮತ್ ಮುಂತಾದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್ ಉದ್ಯಮದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .

Post a Comment

0 Comments

Ad Code

Responsive Advertisement