ಸಾಧನೆಯ ಹಾದಿಯಲ್ಲಿ
ಕೃತಿ ಲೋಕಾರ್ಪಣೆ
"ಪ್ರತಿಯೊಬ್ಬ ಸಾಧಕನೂ ತಮ್ಮ ಜೀವನದ ಸಾಧನೆ ಕುರಿತು ಅನುಭವಗಳನ್ನು ಬರವಣಿಗೆ ರೂಪದಲ್ಲಿ ತೆರೆದಿಟ್ಟರೆ ಅದು ಖಂಡಿತ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗುತ್ತದೆ. ಜೀವನ ಚರಿತ್ರೆ ಬರೆಯುವುದುಒಂ ದು ತೆರನಾದರೆ ವೃತ್ತಿ ಜೀವನದ ಬರಹ ಮಾತ್ರ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾಗ೯ದಶ೯ನ ನೀಡುತ್ತದೆ" ಎಂದು ಶ್ರೀ ಆರ್.ವೆಂಕಟರಾಮು ಅವರ" ಸಾಧನೆಯ ಹಾದಿಯಲ್ಲಿ"ಕೃತಿ ಯನ್ನು ಲೋಕಾರ್ಪಣೆಗೊಳಿಸಿದ ಖ್ಯಾತ ಕಾದಂಬರಿಕಾರ ಡಾ.ಸುರೇಶ ಪಾಟೀಲರು ಅಭಿಪ್ರಾಯಪಟ್ಟರು. ಕೃತಿಯನ್ನು ವಿಮಶಿ೯ಸಿದ ಸಾಹಿತಿ ಶ್ರೀ ಆರ್ ವಾದಿರಾಜು ಅವರು" ಈ ಕೃತಿಯ ಕರ್ತೃ ತಾವು ಸಮಾಜದಲ್ಲಿ ಮುಂದೆ ಬಂದು ನಿಲ್ಲಲು ನೆರವಾದ ಎಲ್ಲರನ್ನೂ ಸಹೃದಯತೆಯಿಂದನೆ ನೆಸಿಕೊಂಡು ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದಸ ವಾಲುಗಳನ್ನು ಅದರಿಂದ ಕಲಿತ ಪಾಠಗಳನ್ನು ಸರಳವಾಗಿ ಮನಮುಟ್ಟುವಂತೆ ಹೇಳುತ್ತಾರೆ."ಎಂದು ಹೇಳಿದರು.
ಕನಾ೯ಟಕ ನಿವೃತ್ತ ಶಿಕ್ಷಣಾಧಿಕಾರಿಗಳ ವೇದಿಕೆಯ
ಅಧ್ಯಕ್ಷರಾದ ಶ್ರೀ ಡಿ.ಜಗನ್ನಾಥ ರಾವ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳ ಮೂಲಕ ಶುಭ ಹಾರೈಸಿದರು.
ಶಿಕ್ಷಣ ಸಲಹೆಗಾರರ ಶ್ರೀ ತಿರುಮಲ ರಾವ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಎಫ್-ಕೇರ್ ವೇದಿಕೆಯ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿಹೆ ಜ್ಜೆ ಇಟ್ಟಿದೆ ಎಂದು ತಿಳಿಸಿದರು.
ದಿನಾಂಕ 6-12-21 ರಂದು ಮಲ್ಲೇಶ್ವರಂನ ಗಾಂಧಿ ಸಾಹಿತ್ಯ ಸಂಘದಲ್ಲಿ ಜರುಗಿದ ಈ ಸಮಾರಂಭದಲ್ಲಿ ಕೃತಿ ಲೇಖಕ ಆರ್.ವೆಂಕಟರಾಮು ಎಲ್ಲರನ್ನೂ ಹಾದಿ೯ಕವಾಗಿ ಸ್ವಾಗತಿಸಿದರು.ಅವರ ಮೊಮ್ಮಕ್ಕಳಾದ ಪ್ರಥಮ್ ಹಾಗೂ ದಾಶರಥಿ ಪ್ರಾಥ೯ನೆ ನಡೆಸಿ ಕೊಟ್ಟರು.ಲೇಖಕ ಶ್ರೀ ಶೃಂಗೇಶ್ವರ್ ಕಾಯ೯ಕ್ರಮ ನಿರೂಪಿಸಿದರು. ಡಾ.ಶಿವಕುಮಾರ್ ಎಲ್ಲರಿಗೂ ವಂದನೆ ಸಲ್ಲಿಸಿದರು.
ವರದಿ- ಶ್ರೀ ಶೃಂಗೇಶ್ವರ
ಚಿತ್ರ. - ಚನ್ನಗಿರಿ ತಿರುಮಲ ರಾವ್
0 Comments